ಕಂಗನಾ ರಣಾವತ್ ಹೆಸರಲ್ಲಿ ಭಾರೀ ಮೋಸ; ಇದರ ಹಿಂದಿದೆ ಈ ಸ್ಟಾರ್ಗಳ ಕೈವಾಡ?
ಫೇಮಸ್ ಆದವರ ಹೆಸರನ್ನು ಇಟ್ಟುಕೊಂಡು ಮೋಸ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಇತ್ತೀಚೆಗೆ ನಡೆದ ವಂಶಿಕಾ ಕಶ್ಯಪ್ ಪ್ರಕರಣ ಇದಕ್ಕೆ ಉತ್ತಮ ಸಾಕ್ಷಿ. ಈಗ ಕಂಗನಾಗೂ ಇದೇ ರೀತಿ ಆಗಿದೆ.
ನಟಿ ಕಂಗನಾ ರಣಾವತ್ (Kangana Ranaut) ಅವರು ಒಂದಿಲ್ಲೊಂದು ವಿವಾದ ಮಾಡಿಕೊಳ್ಳುತ್ತಿರುತ್ತಾರೆ. ಅವರಿಗೆ ಆರೋಪ ಮಾಡುವುದು ಎಂದರೆ ಎಲ್ಲಿಲ್ಲದ ಖುಷಿ. ಬಾಲಿವುಡ್ನಲ್ಲಿ ಮಾಫಿಯಾ ಇದೆ ಎಂದು ಅವರು ಆಗಾಗ ಗುಡುಗುತ್ತಾ ಇರುತ್ತಾರೆ. ಈಗ ಕಂಗನಾ ರಣಾವತ್ ಅವರ ಹೆಸರಲ್ಲಿ ಮೋಸ ನಡೆದಿದೆ. ಇದನ್ನು ಅಭಿಮಾನಿಗಳು ಅವರ ಗಮನಕ್ಕೆ ತಂದಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಗನಾ ಪರೋಕ್ಷವಾಗಿ ಹೇಳಿದ್ದಾರೆ. ಸದ್ಯ ಈ ಆರೋಪ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಬಣ್ಣದ ಲೋಕದಲ್ಲಿ ಫೇಮಸ್ ಆದವರ ಹೆಸರನ್ನು ಇಟ್ಟುಕೊಂಡು ಮೋಸ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಇತ್ತೀಚೆಗೆ ನಡೆದ ವಂಶಿಕಾ ಕಶ್ಯಪ್ ಪ್ರಕರಣ ಇದಕ್ಕೆ ಉತ್ತಮ ಸಾಕ್ಷಿ. ಈಗ ಕಂಗನಾಗೂ ಇದೇ ರೀತಿ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ಕಂಗನಾ ಫೋಟೋಗೆ ಕಮೆಂಟ್ ಮಾಡಿದವರೇ ಈ ಫ್ರಾಡ್ಗಳ ಟಾರ್ಗೆಟ್. ಈ ರೀತಿ ಕಮೆಂಟ್ ಮಾಡುವರನ್ನು ಗಮನಿಸಿ ಟ್ರ್ತಾಪ್ ಮಾಡಲಾಗುತ್ತದೆ. ಬಳಿಕ ಅಭಿಮಾನಿಗಳ ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗುತ್ತದೆ.
‘ಫಿಲ್ಮ್ ಮಾಫಿಯಾ ಈ ರೀತಿ ಅಕ್ರಮ ಚಟುವಟಿಕೆಯಲ್ಲಿ ಭಾಗಿ ಆಗಿರುತ್ತದೆ. ನಾನು ಡೇಟ್ ಮಾಡಿದ ಸೂಪರ್ ಸ್ಟಾರ್ ಇದೇ ರೀತಿ ಮಾಡಿದ್ದ. ನನ್ನ ಜೊತೆ ಚ್ಯಾಟ್ ಮಾಡಲು ಆತ ಬೇರೆ ಬೇರೆ ಸಂಖ್ಯೆಯನ್ನು ಬಳಸುತ್ತಿದ್ದ. ನನ್ನ ಸೋಶಿಯಲ್ ಮೀಡಿಯಾ ಖಾತೆ ಹ್ಯಾಕ್ ಮಾಡಿ ಸೈಲೆಂಟ್ ಆಗಿ ಅದನ್ನು ಆಪರೇಟ್ ಮಾಡುತ್ತಿದ್ದ’ ಎಂದು ಕಂಗನಾ ಹೇಳಿದ್ದಾರೆ. ಇದು ಹೃತಿಕ್ ರೋಷನ್ ಬಗ್ಗೆ ಹೇಳಿದ ಮಾತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹೃತಿಕ್-ಕಂಗನಾ ಈ ಮೊದಲು ಡೇಟ್ ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: : ನಟನಿಗೆ ಮೋಸ ಮಾಡಿದ್ರಾ ಕಂಗನಾ ರಣಾವತ್? ರಿಲೀಸ್ಗೂ ಮೊದಲೇ ‘ತೇಜಸ್’ ಸಿನಿಮಾ ವಿವಾದ
ರಣಬೀರ್ ಕಪೂರ್ ಅವರನ್ನು ಕಂಡರೆ ಕಂಗನಾಗೆ ಆಗುವುದಿಲ್ಲ. ‘ನನ್ನ ಜೊತೆ ಡೇಟ್ ಮಾಡುವಂತೆ ಆತ ಕೇಳಿಕೊಂಡಿದ್ದ’ ಎಂದೆಲ್ಲ ಕಂಗನಾ ಆರೋಪ ಮಾಡಿದ್ದರು. ಈಗ ನಡೆಯುತ್ತಿರುವ ಅಕ್ರಮದ ಹಿಂದೆ ಅವರ ಕೈವಾಡ ಇದೆ ಎಂದು ಕಂಗನಾ ಪರೋಕ್ಷವಾಗಿ ಹೇಳಿದ್ದಾರೆ. ಅವರು ಬರೆದುಕೊಂಡಿರುವ ಸಾಲಿನ ಸ್ಕ್ರೀನ್ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:47 am, Mon, 31 July 23