ಸಲ್ಲು ಶೋನಿಂದ ಮೊದಲ ದಿನಕ್ಕೆ ಹೊರದಬ್ಬಿಸಿಕೊಂಡ ಪುನೀತ್ ಈಗ ಕಂಗನಾ ಶೋ ಕಡೆ ಮುಖ: ಯಾರು ಈ ಪುನೀತ್?

Bigg Boss: ಬಿಗ್​ಬಾಸ್ ಒಟಿಟಿ 2 ಶೋನಿಂದ ಮೊದಲ ದಿನವೇ ಹೊರ ದಬ್ಬಿಸಿಕೊಂಡಿರುವ ಪುನೀತ್, ಇದೀಗ ಕಂಗನಾರ ಲಾಕ್ ಅಪ್ ರಿಯಾಲಿಟಿ ಶೋ ಕಡೆ ಮುಖ ಮಾಡಿದ್ದಾರೆ. ಅಂದಹಾಗೆ ಯಾರು ಈ ಪುನೀತ್?

ಸಲ್ಲು ಶೋನಿಂದ ಮೊದಲ ದಿನಕ್ಕೆ ಹೊರದಬ್ಬಿಸಿಕೊಂಡ ಪುನೀತ್ ಈಗ ಕಂಗನಾ ಶೋ ಕಡೆ ಮುಖ: ಯಾರು ಈ ಪುನೀತ್?
ಪುನೀತ್
Follow us
ಮಂಜುನಾಥ ಸಿ.
|

Updated on: Jul 29, 2023 | 9:44 PM

ಸಲ್ಮಾನ್ ಖಾನ್ (Salman Khan) ನಿರೂಪಣೆ ಮಾಡುವ ಬಿಗ್​ಬಾಸ್ (Bigg Boss) ಶೋನಿಂದ ಒಂದೇ ದಿನಕ್ಕೆ ಹೊರದಬ್ಬಿಸಿಕೊಂಡ ‘ಸೂಪರ್ ಸ್ಟಾರ್ ಪುನೀತ್’ ಈಗ ಹೊಸ ರಿಯಾಲಿಟಿ ಶೋ ಸೇರಿಕೊಳ್ಳಲು ಸಜ್ಜಾಗಿದ್ದಾನೆ. ಸಾಮಾಜಿಕ ಜಾಲತಾಣದಿಂದಾಗಿ ಚಿತ್ರ-ವಿಚಿತ್ರ ವ್ಯಕ್ತಿಗಳೆಲ್ಲ ಜನಪ್ರಿಯತೆ ಗಳಿಸಿದ್ದಾರೆ ಅಂಥಹಾ ಚಿತ್ರ ವಿಚಿತ್ರ ವ್ಯಕ್ತಿಗಳ ಪಟ್ಟಿಗೆ ಸೇರುವ ವ್ಯಕ್ತಿಯೇ ಈ ಪುನೀತ್. ಬಿಗ್​ಬಾಸ್ ಒಟಿಟಿ2 ನಲ್ಲಿ ಸ್ಪರ್ಧಿಯಾಗಿದ್ದ ಪುನೀತ್, ಚಿತ್ರ ವಿಚಿತ್ರ ಅವತಾರಗಳನ್ನು ಬಿಗ್​ಬಾಸ್ ಮನೆಯಲ್ಲಿ ತೋರಿಸಿದ ಕಾರಣ ಒಂದೇ ದಿನಕ್ಕೆ ಆತನನ್ನು ಹೊರಗೆ ಹಾಕಲಾಗಿತ್ತು.

ಬಿಗ್​ಬಾಸ್ ಒಟಿಟಿ 2 ನಿಂದ ಹೊರಗೆ ಹಾಕಿಸಿಕೊಂಡ ಬೆನ್ನಲ್ಲೆ ಒಟಿಟಿಯ ಮತ್ತೊಂದು ಜನಪ್ರಿಯ ರಿಯಾಲಿಟಿ ಶೋ ಆಗಿರುವ ‘ಲಾಕ್​ ಅಪ್’ನ ಸ್ಪರ್ಧಿಯಾಗಲು ತಯಾರಾಗಿದ್ದಾರೆ. ನಟಿ ಕಂಗನಾ ರನೌತ್, ಈ ಲಾಕ್ ಅಪ್ ಶೋ ಅನ್ನು ನಿರೂಪಣೆ ಮಾಡುತ್ತಿದ್ದು, ಈ ಶೋ ಸಹ ಬಿಗ್​ಬಾಸ್ ಮಾದರಿಯಲ್ಲಿಯೇ ಇದೆ. ಲಾಕ್​ ಅಪ್​ನ ಎರಡನೇ ಸೀಸನ್​ನಲ್ಲಿ ಪುನೀತ್ ಸ್ಪರ್ಧಿಯಾಗಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ತುಳು ಚಿತ್ರರಂಗದಲ್ಲಿ ದಾಖಲೆ ಬರೆದ ಬಿಗ್​ಬಾಸ್ ರೂಪೇಶ್ ಶೆಟ್ಟಿಯ ಹೊಸ ಸಿನಿಮಾ

ಇನ್​ಸ್ಟಾಗ್ರಾಂನಲ್ಲಿ ಪುನೀತ್, ಸೂಪರ್ ಸ್ಟಾರ್ ಪುನೀತ್ ಎಂದು ಜನಪ್ರಿಯ. ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ವಿಡಿಯೋಗಳಲ್ಲಿ ಚಿತ್ರ ವಿಚಿತ್ರವಾಗಿ ಮಾತನಾಡುತ್ತಾ, ಚಿತ್ರ ವಿಚಿತ್ರವಾಗಿ ಬಣ್ಣ ಬಳಿದುಕೊಂಡು ಕಾಣಿಸಿಕೊಳ್ಳುತ್ತಿದ್ದ ಪುನೀತ್​ಗೆ ಮಿಲಿಯನ್​ಗಟ್ಟಲೆ ಫಾಲೋವರ್​ಗಳಿದ್ದರು. ಆದರೆ ಒಂದು ದಿನದ ಹಿಂದಷ್ಟೆ ಪುನೀತ್​ರ ಖಾತೆಯನ್ನು ಇನ್​ಸ್ಟಾಗ್ರಾಂ ಡಿಲೀಟ್ ಮಾಡಿಬಿಟ್ಟಿದೆ. ಇನ್​ಸ್ಟಾಗ್ರಾಂನ ಕಮ್ಯೂನಿಟಿ ಗೈಡ್​ಲೈನ್ ಮೀರಿ ವರ್ತಿಸಿದ ಕಾರಣದಿಂದಾಗಿ ಇನ್​ಸ್ಟಾಗ್ರಾಂ, ಪುನೀತ್​ ಖಾತೆಯನ್ನು ಡಿಲೀಟ್ ಮಾಡಿದೆ.

ಇನ್​ಸ್ಟಾಗ್ರಾಂನಿಂದಾಗಲೇ ಲಕ್ಷಾಂತರ ಹಣ ಮಾಡುತ್ತಿದ್ದ ಪುನೀತ್​ಗೆ ಇದರಿಂದ ಭಾರಿ ನಷ್ಟವಾಗಿದೆ. ಇನ್​ಸ್ಟಾಗ್ರಾಂನ ರೀಚ್​ನಿಂದಾಗಿ ಲಕ್ಷಾಂತರ ಪಡೆಯುತ್ತಿದ್ದ ಜೊತೆಗೆ ಕೆಲವು ಜಾಹೀರಾತುಗಳಲ್ಲಿ, ಯೂಟ್ಯೂಬ್​ ವಿಡಿಯೋಗಳಲ್ಲಿ ಸಹ ಪುನೀತ್ ನಟಿಸುತ್ತಿದ್ದರು. ಇದಕ್ಕಾಗಿ ಭಾರಿ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದರು. ಯೂಟ್ಯೂಬರ್ ಒಬ್ಬರು ಹೇಳಿಕೊಂಡಿದ್ದಂತೆ, ಒಂದು ಗಂಟೆಗೆ ಎರಡು ಲಕ್ಷ ರೂಪಾಯಿ ಸಂಭಾವನೆಯನ್ನು ಪುನೀತ್ ಪಡೆಯುತ್ತಿದ್ದರಂತೆ. ಆದರೆ ಈಗ ಅವರ ಇನ್​ಸ್ಟಾಗ್ರಾಂ ಖಾತೆಯೇ ಡಿಲೀಟ್ ಆಗಿದೆ.

ಇನ್ನು ಕಂಗನಾರ ‘ಲಾಕ್​ ಅಪ್’ ರಿಯಾಲಿಟಿ ಶೋ ಕೂಡ ಬಿಗ್​ಬಾಸ್ ಮಾದರಿಯಲ್ಲಿಯೇ ಇದೆ. ಬಿಗ್​ಬಾಸ್​ ಗಿಂತಲೂ ಹೆಚ್ಚು ವಿವಾದಾತ್ಮಕ ವ್ಯಕ್ತಿಗಳನ್ನು ಸ್ಪರ್ಧಿಗಳನ್ನಾಗಿ ಕರೆದು ಎಲ್ಲರನ್ನೂ ಒಂದು ಕಡೆ ಕೂಡಿ ಹಾಕಿ, ಆಟ ಆಡಿಸಲಾಗುತ್ತದೆ. ಕಳೆದ ಬಾರಿ ವಿವಾದಿತ ಸ್ಟಾಂಡಪ್ ಕಮಿಡಿಯನ್ ಮುನಾವರ್ ಫಾರೂಖಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಲ್ಲದೆ ಗೆದ್ದಿದ್ದರು ಸಹ. ಈ ಬಾರಿ ಪುನೀತ್ ಸಹ ಸ್ಪರ್ಧಿಯಾಗಿದ್ದು ಅವರೊಟ್ಟಿಗೆ ಇನ್ನೂ ಎಂಥೆಂಥಹಾ ವಿವಾದಿತ ವ್ಯಕ್ತಿಗಳು ಲಾಕ್​ ಅಪ್ ಸೇರುತ್ತಾರೆ ಎಂಬುದು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್