ಎರಡು ಕಾರಣಕ್ಕೆ ಮತ್ತೆ ಒಂದಾದ ಬಿಗ್ಬಾಸ್ ಸ್ಪರ್ಧಿಯರು: ಏತಕ್ಕೆ ಈ ಸಂಭ್ರಮ?
Bigg Boss: ಎರಡು ಕಾರಣಗಳಿಗೆ ಬಿಗ್ಬಾಸ್ ಸೀಸನ್ 9 ಹಾಗೂ ಬಿಗ್ಬಾಸ್ ಒಟಿಟಿ ಸ್ಪರ್ಧಿಗಳು ಭೇಟಿಯಾಗಿ ಸಂಭ್ರಮಾಚರಣೆ ಮಾಡಿದ್ದಾರೆ.
Updated on: Jul 02, 2023 | 11:06 PM

ಬಿಗ್ಬಾಸ್ ಸೀಸನ್ 9 ಹಾಗೂ ಬಿಗ್ಬಾಸ್ ಮೊದಲನೇ ಒಟಿಟಿ ಸೀಸನ್ನ ಸ್ಪರ್ಧಿಗಳು ಮತ್ತೆ ಒಂದಾಗಿದ್ದಾರೆ.

ಬಿಗ್ಬಾಸ್ ಸೀಸನ್ 5 ಹಾಗೂ ಬಿಗ್ಬಾಸ್ ಸೀಸನ್ 9ರ ಸ್ಪರ್ಧಿಯಾಗಿದ್ದ ಅನುಪಮಾ ಗೌಡ ಅವರ ಹುಟ್ಟುಹಬ್ಬವನ್ನು ಬಿಗ್ಬಾಸ್ ಸೀಸನ್ 9ರ ಸ್ಪರ್ಧಿಗಳು ಸೇರಿ ಆಚರಿಸಿದ್ದಾರೆ.

ಅನುಪಮಾ ಗೌಡ ಅವರ ಹುಟ್ಟುಹಬ್ಬ ಸಂಭ್ರಮದಲ್ಲಿ ದಿವ್ಯಾ ಉರುಡುಗ, ರಾಕೇಶ್ ಅಡಿಗ, ಸ್ನೇಹಾ, ಅಮೂಲ್ಯ ಅವರುಗಳು ಜೊತೆ ಸೇರಿ ಆಚರಿಸಿದ್ದಾರೆ.

ಇನ್ನೊಂದೆಡೆ ಬಿಗ್ಬಾಸ್ ಸೀಸನ್ 9ರ ವಿಜೇತ ರೂಪೇಶ್ ಶೆಟ್ಟಿಯ ಹೊಸ ಸಿನಿಮಾ ಸರ್ಕಸ್ ನ ಸೆಲೆಬ್ರಿಟಿ ಶೋ ವೀಕ್ಷಿಸಲು ಒಟಿಟಿ ಬಿಗ್ಬಾಸ್ ಹಾಗೂ ಸೀಸನ್ 9ರ ಕೆಲ ಸ್ಪರ್ಧಿಗಳು ಭಾಗಿಯಾಗಿದ್ದರು.

ರೂಪೇಶ್ ಶೆಟ್ಟಿಯ ಸರ್ಕಸ್ ಸಿನಿಮಾ ವೀಕ್ಷಿಸಲು ರಾಕೇಶ್ ಅಡಿಗ, ರೂಪೇಶ್ರ ಗೆಳತಿ ಸಾನ್ಯಾ ಐಯ್ಯರ್, ನಂದು, ದಿವ್ಯಾ ಉರುಡುಗ, ಅರವಿಂದ್, ನವಾಜ್, ಜಯಶ್ರೀ ಇನ್ನೂ ಕೆಲವರು ಆಗಮಿಸಿದ್ದರು.

ರೂಪೇಶ್ ಶೆಟ್ಟಿ ಸರ್ಕಸ್ ಹೆಸರಿನ ತುಳು ಸಿನಿಮಾ ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ.

ಬಿಗ್ಬಾಸ್ ಒಟಿಟಿ ಹಾಗೂ ಬಿಗ್ಬಾಸ್ ಸೀಸನ್ 9 ಒಂದರ ಹಿಂದೊಂದು ನಡೆಯಿತು. ಎರಡೂ ಸೀಸನ್ನಲ್ಲಿ ರೂಪೇಶ್ ಶೆಟ್ಟಿ ವಿಜೇತರಾದರು, ರಾಕೇಶ್ ಅಡಿಗ ರನ್ನರ್ ಅಪ್ ಆದರು.




