AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ವೇದಿಕೆ ಮೇಲೆ ಸಿಗರೇಟು ಸೇದಿದರೆ ಸಲ್ಮಾನ್ ಖಾನ್?

Salman Khan: ಬಿಗ್​ಬಾಸ್ ನಿರೂಪಣೆ ಮಾಡುವ ವೇಳೆ ಸ್ಪರ್ಧಿಗಳಿಗೆ ಬುದ್ಧಿ ಹೇಳುವ ಸಲ್ಮಾನ್ ಖಾನ್, ಅದೇ ಬಿಗ್​ಬಾಸ್ ಮೇಲೆ ಸಿಗರೇಟು ಸೇದಿದ್ದಾರೆ. ಕೈಯಲ್ಲಿ ಸಿಗರೇಟು ಹಿಡಿದಿರುವ ಸಲ್ಮಾನ್​ರ ಚಿತ್ರವೊಂದು ಇದೀಗ ವೈರಲ್ ಆಗಿದೆ.

ಬಿಗ್​ಬಾಸ್ ವೇದಿಕೆ ಮೇಲೆ ಸಿಗರೇಟು ಸೇದಿದರೆ ಸಲ್ಮಾನ್ ಖಾನ್?
ಸಲ್ಮಾನ್ ಖಾನ್
Follow us
ಮಂಜುನಾಥ ಸಿ.
|

Updated on: Jul 09, 2023 | 8:45 PM

ಸಲ್ಮಾನ್ ಖಾನ್ (Salman Khan) ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ಟಿವಿ ನಿರೂಪಕ. ಹಲವು ವರ್ಷಗಳಿಂದಲೂ ಬಿಗ್​ಬಾಸ್ ನಿರೂಪಣೆ ಮಾಡುತ್ತಿರುವ ಸಲ್ಮಾನ್ ಖಾನ್ ಇದಕ್ಕಾಗಿ ನೂರಾರು ಕೋಟಿ ಸಂಭಾವನೆ ಪಡೆಯುತ್ತಾರೆ. ಅಲ್ಲದೆ ಬಿಗ್​ಬಾಸ್ (Bigg Boss) ನಿರೂಪಣೆ ಸಮಯದಲ್ಲಿ ಬಿಗ್​ಬಾಸ್ ಮನೆಯ ಒಳಗಿನ ಸದಸ್ಯರು ತಪ್ಪು ಮಾಡಿದಾಗ ಅವರಿಗೆ ಬುದ್ಧಿ ಹೇಳುತ್ತಾರೆ, ಬೈಯ್ಯುತ್ತಾರೆ, ಮನೆಯಿಂದ ಹೊರಗೂ ಹಾಕುತ್ತಾರೆ. ಈಗ ಅದೇ ಸಲ್ಮಾನ್ ಖಾನ್ ಅದೇ ಬಿಗ್​ಬಾಸ್ ವೇದಿಕೆ ಮೇಲೆ ತಪ್ಪೊಂದನ್ನು ಮಾಡಿದ್ದಾರೆ.

ಸಲ್ಮಾನ್ ಖಾನ್, ಬಿಗ್​ಬಾಸ್ ಒಟಿಟಿ ನಿರೂಪಣೆ ಮಾಡುತ್ತಿದ್ದು, ಶನಿವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್ ಮನೆಯ ಒಳಗೆ ಇರುವ ಸ್ಪರ್ಧಿಗಳನ್ನು ಬೇರೆ ಬೇರೆ ಕಾರಣಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದು ಹರಿದಾಡುತ್ತಿದ್ದು ಚಿತ್ರದಲ್ಲಿ ಸಲ್ಮಾನ್ ಖಾನ್ ಬಿಗ್​ಬಾಸ್ ವೇದಿಕೆ ಮೇಲೆ ಸಿಗರೇಟು ಹಿಡಿದುಕೊಂಡು, ಕ್ಯಾಮೆರಾ ಮೂಲಕ ಬಿಗ್​ಬಾಸ್ ಮನೆಯ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಿರುವ ಚಿತ್ರವಿದೆ.

ಸಿಗರೇಟು ಸೇದುತ್ತಲೇ ಸಲ್ಮಾನ್ ಖಾನ್ ಬಿಗ್​ಬಾಸ್ ನಿರೂಪಣೆ ಮಾಡಿರುವ ಅನುಮಾನ ಚಿತ್ರ ನೋಡಿದವರಿಗೆ ಮೂಡಿದೆ. ಎಪಿಸೋಡ್​ನಲ್ಲಿ ಇದು ಪ್ರಸಾರವಾಗಿಲ್ಲ ಎನ್ನಲಾಗುತ್ತಿದೆ. ಆದರೆ ಈ ಸೆಟ್​ನ ಚಿತ್ರ ಹೇಗೋ ಲೀಕ್ ಆಗಿ ಇದೀಗ ವೈರಲ್ ಆಗಿದೆ. ಮುಖ ಮಾತ್ರ ಬರುವಂತೆ ಅಥವಾ ಎದೆಯಿಂದ ಮೇಲಿನ ಶಾಟ್ ಮಾತ್ರವೇ ಬರುವಂತೆ ಶೂಟ್ ಮಾಡಿಕೊಳ್ಳುವಂತೆ ಹೇಳಿ ಸಲ್ಮಾನ್ ಖಾನ್ ಸಿಗರೇಟು ಸೇದಿ ಮುಗಿಸಿದ್ದಾರೆ ಎಂದು ಚಿತ್ರ ನೋಡಿರುವ ಕೆಲವರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ನಾಯಿಯಂತೆ ಎಳೆದು ಹಾಕಿದರು, ಎಲ್ಲರ ಮುಂದೆ ಅವಮಾನಿಸಿದರು: ಸಲ್ಮಾನ್ ಖಾನ್ ಬಾಡಿಗಾರ್ಡ್​ಗಳ ವಿರುದ್ಧ ನಟಿ ಆರೋಪ

ಬಿಗ್​ಬಾಸ್ ವೇದಿಕೆ ಮೇಲೆ ಸಿಗರೇಟು ಸೇದಿರುವುದಕ್ಕೆ ತೀವ್ರ ಟ್ರೋಲಿಂಗ್​ಗೆ ಸಲ್ಮಾನ್ ಖಾನ್ ಒಳಗಾಗಿದ್ದಾರೆ. ಬಿಗ್​ಬಾಸ್ ವೇದಿಕೆ ಮೇಲೆ ನಿಂತು ದೇಶದ ಜನರಿಗೆ, ಬಿಗ್​ಬಾಸ್ ಮನೆಯ ಒಳಗಿರುವವರಿಗೆ ಬುದ್ಧಿ ಹೇಳುವ ಸಲ್ಮಾನ್ ಖಾನ್ ತಾವೇ ಅದೇ ಬಿಗ್​ಬಾಸ್ ವೇದಿಕೆ ಮೇಲೆ ನಿಂತು ಸಿಗರೇಟು ಸೇದಿರುವುದು ಅಪರಾಧ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್ ಖಾನ್ ಹಲವಾರು ವರ್ಷಗಳಿಂದ ಬಿಗ್​ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಲ್ಮಾನ್ ಖಾನ್ ಬಿಗ್​ಬಾಸ್ ಗೆಂದೇ ಸಮಯ ಹೊಂದಿಸಿಕೊಂಡು ಅದರ ನಿರೂಪಣೆ ಮಾಡುತ್ತಾ ಬರುತ್ತಿದ್ದಾರೆ. ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಸಲ್ಮಾನ್ ಖಾನ್​ರ ಸಿನಿಮಾಗಳು ಸತತವಾಗಿ ಸೋಲುತ್ತಿವೆ. ಆದರೆ ಇದೀಗ ಟೈಗರ್ 3 ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಿದ್ದು ಆ ಸಿನಿಮಾ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.

ಟೈಗರ್ 3 ಸಿನಿಮಾದ ಬಳಿಕ, ಅವರದ್ದೇ ಸೂಪರ್ ಹಿಟ್ ಸಿನಿಮಾ ಭಜರಂಗಿ ಭಾಯಿಜಾನ್ 2 ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ. ಈ ಸಿನಿಮಾಕ್ಕೂ ಎಸ್​ಎಸ್ ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಕತೆ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್