AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ಟ್ರಗಲಿಂಗ್ ಡೈರೆಕ್ಟರ್ ಜೊತೆ ಸಿನಿಮಾ ಮಾಡಲ್ಲ’; ಹೊಸ ಶಪಥ ಮಾಡಿದ ನಟ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರು ‘ಕಿಸಿ ಕ ಭಾಯ್ ಕಿ ಜಾನ್’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನಿರೀಕ್ಷೆ ಸುಳ್ಳಾಗಿದೆ. ಸ್ಕ್ರಿಪ್ಟ್ ಆಯ್ಕೆಯಲ್ಲಿ ಸಲ್ಮಾನ್ ಖಾನ್ ಪದೇಪದೇ ಎಡವುತ್ತಿರುವುದೇ ಸೋಲಿಗೆ ಕಾರಣ.

‘ಸ್ಟ್ರಗಲಿಂಗ್ ಡೈರೆಕ್ಟರ್ ಜೊತೆ ಸಿನಿಮಾ ಮಾಡಲ್ಲ’; ಹೊಸ ಶಪಥ ಮಾಡಿದ ನಟ ಸಲ್ಮಾನ್ ಖಾನ್
ಸಲ್ಮಾನ್ ಖಾನ್
ರಾಜೇಶ್ ದುಗ್ಗುಮನೆ
|

Updated on: Jul 04, 2023 | 10:39 AM

Share

ನಟ ಸಲ್ಮಾನ್ ಖಾನ್ (Salman Khan) ಅವರು ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದ್ದ ಕಾಲ ಒಂದಿತ್ತು. ಆದರೆ, ಈಗ ಕಾಲ ಬದಲಾಗಿದೆ. ಇತ್ತೀಚೆಗೆ ಅವರಿಗೆ ಯಶಸ್ಸು ಸಿಗುತ್ತಿಲ್ಲ. ಈ ಕಾರಣಕ್ಕೆ ಅವರು ಹೊಸ ನಿರ್ಧಾರಕ್ಕೆ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಅವರು ಸ್ಟ್ರಗಲಿಂಗ್ ನಿರ್ದೇಶಕರ ಜೊತೆ ಸಿನಿಮಾ ಮಾಡದೇ ಇರಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ಕುಟುಂಬದವರ ಜೊತೆಗೂ ಅವರು ಸಿನಿಮಾ ಮಾಡದೇ ಇರುವ ನಿರ್ಧಾರಕ್ಕೆ ಬಂದಿದ್ದಾರೆ. ದೊಡ್ಡ ಯಶಸ್ಸು ಕಾಣಬೇಕು ಎಂಬುದಕ್ಕೆ ಅವರು ಈ ರೀತಿ ಆಲೋಚಿಸಿದ್ದಾರೆ.

ಸಲ್ಮಾನ್ ಖಾನ್ ಅವರು ‘ಕಿಸಿ ಕ ಭಾಯ್ ಕಿ ಜಾನ್’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನಿರೀಕ್ಷೆ ಸುಳ್ಳಾಗಿದೆ. ಈ ಸಿನಿಮಾ ಹೇಳಿಕೊಳ್ಳುವಂಥ ಯಶಸ್ಸು ಪಡೆಯಲೇ ಇಲ್ಲ. ಇದಕ್ಕೂ ಮೊದಲು ರಿಲೀಸ್ ಆದ ಚಿತ್ರಗಳ ಹಣೆಬರಹವೂ ಅಷ್ಟೇ. ಸ್ಕ್ರಿಪ್ಟ್ ಆಯ್ಕೆಯಲ್ಲಿ ಸಲ್ಮಾನ್ ಖಾನ್ ಪದೇಪದೇ ಎಡವುತ್ತಿರುವುದೇ ಸೋಲಿಗೆ ಕಾರಣ.

ಸಲ್ಮಾನ್ ಖಾನ್ ಅವರು ದೊಡ್ಡ ಹೃದಯ ಹೊಂದಿದ್ದಾರೆ. ಈ ಕಾರಣಕ್ಕೆ ಅನೇಕ ಸ್ಟ್ರಗಲಿಂಗ್ ಡೈರೆಕ್ಟರ್ ಜೊತೆ ಅವರು ಕೆಲಸ ಮಾಡಿದ್ದಾರೆ. ಆದರೆ, ಇದರಿಂದ ಸಲ್ಮಾನ್ ಖಾನ್ ಅವರಿಗೆ ಯಾವುದೇ ಪ್ರಯೋಜನ ಆಗಿಲ್ಲ. ಅವರು ಸಾಲು ಸಾಲು ಸೋಲುಗಳನ್ನು ಕಾಣುತ್ತಿದ್ದಾರೆ. ಈ ಕಾರಣಕ್ಕೆ ಅವರು ಹೊಸ ನಿರ್ಧಾರ ತೆಗೆದುಕೊಂಡಿದ್ದಾರೆ. ‘ಗೆಳೆತನದ ಹೆಸರಿನಲ್ಲಿ ಯಾರ ಸಿನಿಮಾದಲ್ಲೂ ನಟಿಸಲ್ಲ ಎಂಬುದು ಸಲ್ಮಾನ್ ಖಾನ್ ನಿರ್ಧಾರ. ಒಳ್ಳೆಯ ಸ್ಕ್ರಿಪ್ಟ್ ಆಯ್ಕೆಗೆ ಅವರು ಪ್ರಯತ್ನಿಸುತ್ತಿದ್ದಾರೆ. ಇಲ್ಲಿಯವರೆಗೆ ಮಾಡದೇ ಇರುವಂಥ ಪಾತ್ರ ಮಾಡಲು ಸಲ್ಮಾನ್ ಖಾನ್ ಆಲೋಚಿಸುತ್ತಿದ್ದಾರೆ’ ಎಂಬುದಾಗಿ ಮೂಲಗಳು ಹೇಳಿರುವುದಾಗಿ ವರದಿ ಆಗಿದೆ. ಸಹೋದರನ ಜೊತೆ, ಹೋಂ ಬ್ಯಾನರ್​ನಲ್ಲಿ ಸಿನಿಮಾ ಮಾಡದೇ ಇರಲು ಸಲ್ಮಾನ್ ಖಾನ್ ನಿರ್ಧರಿಸಿದ್ದಾರೆ. ಅವರ ವೃತ್ತಿ ಜೀವನಕ್ಕೆ ಮೈಲೇಜ್ ಕೊಡಲೇಬೇಕಾದ ಅಗತ್ಯ ಈಗ ಬಂದೊದಗಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ಗೆ ಬಂತು ಮದುವೆ ಪ್ರಪೋಸಲ್​; ಶಾರುಖ್​ ಖಾನ್​ ಹೆಸರು ಹೇಳಿ ತಪ್ಪಿಸಿಕೊಂಡ ನಟ

ಸಂಜಯ್ ​ಲೀಲಾ ಬನ್ಸಾಲಿ ಜೊತೆ ಸಲ್ಮಾನ್ ಖಾನ್ ಸಿನಿಮಾ ಮಾಡಬೇಕಿತ್ತು. ಇದಕ್ಕೆ ‘ಇನ್ಶಾಅಲ್ಲಾಹ್’ ಎಂದು ಹೆಸರು ಇಡಲಾಗಿತ್ತು. ಆದರೆ, ಇಬ್ಬರ ಮಧ್ಯೆ ಸ್ಕ್ರಿಪ್ಟ್ ವಿಚಾರದಲ್ಲಿ ವೈಮನಸ್ಸು ಮೂಡಿತ್ತು. ಈ ಕಾರಣಕ್ಕೆ ಸಿನಿಮಾ ಅರ್ಧಕ್ಕೆ ನಿಂತಿತ್ತು. ಈಗ ಬನ್ಸಾಲಿ ಅವರನ್ನು ಸಲ್ಮಾನ್ ಖಾನ್ ಮತ್ತೆ ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ