AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಯಂತೆ ಎಳೆದು ಹಾಕಿದರು, ಎಲ್ಲರ ಮುಂದೆ ಅವಮಾನಿಸಿದರು: ಸಲ್ಮಾನ್ ಖಾನ್ ಬಾಡಿಗಾರ್ಡ್​ಗಳ ವಿರುದ್ಧ ನಟಿ ಆರೋಪ

Salman Khan: ನಟ ಸಲ್ಮಾನ್ ಖಾನ್​ರ ಭದ್ರತಾ ಸಿಬ್ಬಂದಿ ತನ್ನನ್ನು ನಾಯಿಯಂತೆ ಎಳೆದು ದೂಡಿದರು ಎಂದು ನಟಿಯೊಬ್ಬರು ಆರೋಪ ಮಾಡಿದ್ದಾರೆ.

ನಾಯಿಯಂತೆ ಎಳೆದು ಹಾಕಿದರು, ಎಲ್ಲರ ಮುಂದೆ ಅವಮಾನಿಸಿದರು: ಸಲ್ಮಾನ್ ಖಾನ್ ಬಾಡಿಗಾರ್ಡ್​ಗಳ ವಿರುದ್ಧ ನಟಿ ಆರೋಪ
ಸಲ್ಮಾನ್ ಖಾನ್
Follow us
ಮಂಜುನಾಥ ಸಿ.
|

Updated on: Jun 27, 2023 | 8:01 PM

ಸ್ಟಾರ್ ನಟರನ್ನು ಭೇಟಿಯಾಗುವುದು ಸಾಮಾನ್ಯ ಪ್ರೇಕ್ಷಕರಿಗೆ ಮಾತ್ರವಲ್ಲ ನಟರಿಗೂ ಸುಲಭವಲ್ಲ. ಅದರಲ್ಲಿಯೂ ಸಲ್ಮಾನ್ ಖಾನ್ (Salman Khan), ಶಾರುಖ್ ಖಾನ್ (Shah Rukh Khan) ಅಂಥಹಾ ಸೂಪರ್ ಸ್ಟಾರ್​ಗಳ ಹತ್ತಿರಕ್ಕೂ ಸುಳಿವುದು ಅಸಾಧ್ಯ. ಇತ್ತೀಚೆಗೆ ನಟಿಯೊಬ್ಬರು ಇಂಥಹುದೇ ದುಸ್ಸಾಹಸ ಮಾಡಲು ಹೋಗಿ ಅವಮಾನ ಎದುರಿಸಿದ್ದಾರೆ. ಬಳಿಕ ತಮ್ಮನ್ನು ಸಲ್ಮಾನ್ ಖಾನ್ ಭದ್ರತೆಯವರು ಕೆಟ್ಟದಾಗಿ ನಡೆಸಿಕೊಂಡರು ಎಂದು ಸಾಮಾಜಿಕ ಜಾಲತಾಣದಲ್ಲಿ ದೂರು ಹೇಳಿದ್ದಾರೆ.

ನಟಿ ಹಾಗೂ ಯೂಟ್ಯೂಬರ್ ಆಗಿರುವ ಹೇಮಾ ಶರ್ಮಾ ಇತ್ತೀಚೆಗೆ ಸಿನಿಮಾ ಸೆಟ್ ಒಂದರಲ್ಲಿ ಸಲ್ಮಾನ್ ಖಾನ್ ಅನ್ನು ಭೇಟಿಯಾಗಲು ಹೋಗಿ ಭದ್ರತೆಯವರಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಸಿನಿಮಾ ಶೂಟಿಂಗ್​ನಲ್ಲಿ ಭಾಗವಹಿಸಿದ್ದ ನಟಿ ಹೇಮಾ ಶರ್ಮಾ, ಸಲ್ಮಾನ್ ಖಾನ್ ಸಹ ಚಿತ್ರೀಕರಣಕ್ಕಾಗಿ ಅಲ್ಲಿಯೇ ಇರುವುದಾಗಿ ತಿಳಿದು ಅವರನ್ನು ಕಂಡು ಫೊಟೊ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಜೂನಿಯರ್ ಆರ್ಟಿಸ್ಟ್​ಗಳ ಸಪ್ಲೈಯರ್ ಆಗಿರುವ ಒಬ್ಬರು ನಿಮ್ಮನ್ನು ಸಲ್ಮಾನ್ ಖಾನ್ ಅವರೊಟ್ಟಿಗೆ ಭೇಟಿ ಮಾಡಿಸುತ್ತೇನೆ ಎಂದು ಹೇಳಿ ಕರೆದುಕೊಂಡು ಹೋದರಂತೆ.

ಇದನ್ನೂ ಓದಿ:ನಟ ವಿಕ್ಕಿ ಕೌಶಲ್ ಅನ್ನು ಬದಿಗೆ ತಳ್ಳಿದ ಸಲ್ಮಾನ್ ಖಾನ್ ಭದ್ರತಾ ಸಿಬ್ಬಂದಿ, ವಿಡಿಯೋ ವೈರಲ್

ಆದರೆ ಅಲ್ಲಿಗೆ ಹೋಗುತ್ತಿದ್ದಂತೆ ಸಲ್ಮಾನ್ ಖಾನ್ ಭದ್ರತೆಯವರು ಹೇಮಾ ಶರ್ಮಾ ಹಾಗೂ ಅವರನ್ನು ಕರೆದುಕೊಂಡು ಹೋಗಿದ್ದ ವ್ಯಕ್ತಿಯ ಮೇಲೆ ಹರಿಹಾಯ್ದಿದ್ದಾರೆ. ಆ ವ್ಯಕ್ತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹೇಮಾ ಶರ್ಮಾ ಅವರನ್ನು ಬಲವಂತವಾಗಿ ಅಲ್ಲಿಂದ ಹೊರಗೆ ಕಳಿಸಿದರಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿರುವ ನಟಿ, ಅಲ್ಲಿದ್ದವರ ಮುಂದೆ ನನ್ನ ಮೇಲೆ ಕೂಗಾಡಿದರು, ಏಕವಚನದಲ್ಲಿ ಬೈದರು, ನಾಯಿಯಂತೆ ನಮ್ಮನ್ನು ಹೊರಕ್ಕೆ ನೂಕಿದರು ಎಂದಿದ್ದಾರೆ.

ಸಲ್ಮಾನ್ ಖಾನ್​ರಿಗೆ ಮೊದಲಿನಿಂದಲೂ ಭದ್ರತೆ ಹೆಚ್ಚಿಗೆ ಇದೆ. ಅದರಲ್ಲಿಯೂ ಇತ್ತೀಚೆಗೆ ಭೂಗತ ಲೋಕದವರಿಂದ ಸತತ ಬೆದರಿಕೆ ಬರಲು ಪ್ರಾರಂಭವಾದ ಮೇಲೆ ಸಲ್ಮಾನ್ ಖಾನ್​ರ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಹಾಗಾಗಿ ಶೂಟಿಂಗ್ ಸ್ಥಳದಲ್ಲಿಯೇ ಆಗಲಿ, ಖಾಸಗಿ ಕಾರ್ಯಕ್ರಮಗಳಲ್ಲಿಯೇ ಆಗಲಿ ಸಲ್ಮಾನ್ ಖಾನ್ ಹತ್ತಿರಕ್ಕೆ ಯಾರೂ ಬಾರದಂತೆ ಭದ್ರತಾ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಸಲ್ಮಾನ್ ಖಾನ್​ರ ಭದ್ರತೆಯನ್ನು ಅವರ ಆಪ್ತ ಶೇರಾ ನೋಡಿಕೊಳ್ಳುತ್ತಾರೆ. ಜೊತೆಗೆ ಅವರಿಗೆ ಮುಂಬೈ ಪೊಲೀಸರು ಸಹ ಭದ್ರತೆ ಒದಗಿಸಿದ್ದಾರೆ. ಪರವಾನಗಿ ಹೊಂದಿರುವ ಅತ್ಯಾಧುನಿಕ ಬಂದೂಕುಗಳನ್ನು ಸಹ ಸಲ್ಮಾನ್ ಖಾನ್​ಗೆ ಪೊಲೀಸರು ನೀಡಿದ್ದಾರೆ.

ಹೇಮಾ ಶರ್ಮಾ ಮಾತ್ರವೇ ಅಲ್ಲ, ಇತ್ತೀಚೆಗೆ ಬಾಲಿವುಡ್​ನ ಖ್ಯಾತ ನಟ ವಿಕ್ಕಿ ಕೌಶಲ್ ಅನ್ನೂ ಸಹ ಸಲ್ಮಾನ್ ಖಾನ್ ಭದ್ರತೆಯವರು ಸಾಮಾನ್ಯರನ್ನು ತಳ್ಳಿದಂತೆ ಬದಿಗೆ ತಳ್ಳಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು. ಕತ್ರಿನಾ ಕೈಫ್ ಪತಿಯೂ ಆಗಿರುವ ವಿಕ್ಕಿ ಕೌಶಲ್ ಬಾಲಿವುಡ್​ನ ಜನಪ್ರಿಯ ನಟ ಹಾಗಿದ್ದರೂ ಸಹ ಅಂಥಹವರನ್ನೂ ಸಹ ಸಲ್ಮಾನ್ ಖಾನ್​ರ ಭದ್ರತೆಯವರು ಬದಿಗೆ ತಳ್ಳಿ ಸಲ್ಮಾನ್ ಖಾನ್​ಗೆ ಜಾಗ ಮಾಡಿಕೊಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
VIDEO: ಕರುಣ್ ನಾಯರ್​ನ ನಂಬಿ ರನ್ ಕಳೆದುಕೊಂಡ ಪಂಜಾಬ್ ಕಿಂಗ್ಸ್
VIDEO: ಕರುಣ್ ನಾಯರ್​ನ ನಂಬಿ ರನ್ ಕಳೆದುಕೊಂಡ ಪಂಜಾಬ್ ಕಿಂಗ್ಸ್