ಬಕ್ರಿದ್ ಹಬ್ಬಕ್ಕೆ ಜೋರಾದ ಕುರಿಗಳ ಹಬ್ಬ; ಬಾಲಿವುಡ್ ನಟ ಶಾರುಖ್ ಖಾನ್ ಹೆಸರಿನ ಕುರಿಗೆ ಭಾರೀ ಡಿಮ್ಯಾಂಡ್
ಬಕ್ರಿದ್ ಸಲುವಾಗಿಯೇ ಚಾಮರಾಜಪೇಟೆ ಮೈದಾನದಲ್ಲಿ ಕುರಿಗಳ ಮೇಳ ನಡೆಯುತ್ತಿದೆ. ಮೇಳಾದಲ್ಲಿ ಭರ್ಜರಿ ಲಾಭದ ನಿರೀಕ್ಷೆಯಲ್ಲಿರುವ ವ್ಯಾಪಾರಸ್ಥರು ವಿವಿಧ ರೀತಿಯ ತಳಿಗೆ ಬಾಲಿವುಡ್ ನಟರ ಹೆಸರುಗಳನ್ನು ಇಟ್ಟು ಜನರನ್ನು ಸೆಳೆಯುತ್ತಿದ್ದಾರೆ.
ಬೆಂಗಳೂರು: ಬಕ್ರಿದ್ ಹಬ್ಬಕ್ಕೆ(Bakrid) ಕೆಲವೇ ದಿನಗಳು ಬಾಕಿ ಇದ್ದು ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆ ಶುರುವಾಗಿದೆ. ಬಕ್ರಿದ್ ಹಿನ್ನೆಲೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ(Chamrajpet Idgah Maidan) ಕುರಿಗಳ ಮಾರಾಟ ಭರಾಟೆ ಜೋರಾಗಿದೆ. ಹಬ್ಬದ ಸಲುವಾಗಿ ಮೇಕೆ- ಕುರಿಗಳಿಗೆ ಬೇಡಿಕೆ ಹೆಚ್ಚಿದ್ದು ಬಾಲಿವುಡ್ ಹಿರೋಗಳು ಟ್ರೆಂಟ್ ಹುಟ್ಟಿಸಿದ್ದಾರೆ. ವ್ಯಾಪಾರಸ್ಥರು ವಿವಿಧ ತಳಿಗೆ ಬಾಲಿವುಡ್ ಹಿರೋಗಳ ಹೆಸರಿಟ್ಟು ವ್ಯಾಪಾರ ಮಾಡುತ್ತಿದ್ದು ಶಾರುಖ್ ಖಾನ್ ಹೆಸರಿನ ಹೈದರಾಬಾದ್ ತಳಿಗೆ ಭಾರೀ ಡಿಮ್ಯಾಂಡ್ ಇದೆ.
ಬಕ್ರಿದ್ ಸಲುವಾಗಿಯೇ ಚಾಮರಾಜಪೇಟೆ ಮೈದಾನದಲ್ಲಿ ಕುರಿಗಳ ಮೇಳ ನಡೆಯುತ್ತಿದೆ. ಮೇಳಾದಲ್ಲಿ ಭರ್ಜರಿ ಲಾಭದ ನಿರೀಕ್ಷೆಯಲ್ಲಿರುವ ವ್ಯಾಪಾರಸ್ಥರು ವಿವಿಧ ರೀತಿಯ ತಳಿಗೆ ಬಾಲಿವುಡ್ ನಟರ ಹೆಸರುಗಳನ್ನು ಇಟ್ಟು ಜನರನ್ನು ಸೆಳೆಯುತ್ತಿದ್ದಾರೆ. ಹೈದಾರಾಬಾದ್ ತಳಿಗೆ ಶಾರುಖ್ ಖಾನ್, ಬನ್ನೂರ್ ಕುರಿಗೆ ಸಲ್ಮಾನ್ ಖಾನ್, ಅಮಿನ್ ಗಡ್ ಟಗರಿಗೆ ಅಮಿರ್ ಖಾನ್, ಮುದುವಾಳ್ ತಳಿಗೆ ಅಮಿತಾಬ್ ಬಚ್ಚನ್, ಕೆರೂರ್ ಕುರಿಗೆ ಆತಿಫ್ ಅಸ್ಲಮ್, ರೈಬಾಗ್ ಕುರಿಗೆ ಸೈಫ್ ಅಲಿ ಖಾನ್ ಎಂದು ಹೆಸರಿಟ್ಟಿದ್ದಾರೆ.
ಇನ್ನು ಮತ್ತೊಂದೆಡೆ ಒಂದೊಂದು ಕುರಿಗೂ ಲಕ್ಷಾಂತರ ರೂಪಾಯಿ ಫಿಕ್ಸ್ ಮಾಡಲಾಗಿದೆ. ಸಧ್ಯ ಕುರಿಗಳಲ್ಲಿ 7 ಬಗೆಯ ಕುರಿಗಳಿವೆ. ಅದ್ರಲ್ಲಿ ಬಂಡೂರ್ ಕುರಿ, ಅಮಿನ್ ಗಾಡ್, ನಾಟಿ ತಳಿ, ಕರಿ ಕುರಿ, ಪಾವಗಡ ಮತ್ತು ಶಿರ ಕುರಿಗಳಿಗೆ ಭಾರಿ ಡಿಮ್ಯಾಂಡ್ ಇದೆ. ಮೇಕೆಗಳಲ್ಲಿ 3 ರೀತಿ ಮೇಕೆಗಳಿದ್ದು ಅದ್ರಲ್ಲಿ ಜಮುನ ಪುರಿ, ನಾಟಿ ಹೋತಕ್ಕೆ ಬೇಡಿಕೆ ಹೆಚ್ಚಿದೆ. ಇನ್ನು ಚಾಮರಾಜಪೇಟೆ ಮೈದಾನದಲ್ಲಿ ನಡೆಯುತ್ತಿರುವ ಕುರಿ ಮೇಳಾದಲ್ಲಿ 2 ಸಾವಿರ ವ್ಯಾಪಾರಸ್ಥರು ಸೇರಿದ್ದು ಸಂಜೆಯ ಮೇಲೆ 3 ರಿಂದ 4 ಸಾವಿರದಷ್ಡು ವ್ಯಾಪರಸ್ಥರು ಸೇರುವ ಸಾಧ್ಯಾತೆ ಇದೆ.
ಇದನ್ನೂ ಓದಿ: Hajj 2022: ಮುಸ್ಲಿಮರು ಪವಿತ್ರ ಹಜ್ ಯಾತ್ರೆ ಕೈಗೊಳ್ಳುವುದೇಕೆ? ಇದರ ಹಿಂದಿರುವ ಉದ್ದೇಶವೇನು?
ರಾಮನಗರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ಬಾಗೇಪಲ್ಲಿ, ತುಮಕೂರು, ನೆಲಮಂಗಲ, ಹೊಸಕೋಟೆ, ಹರಿಹರ, ದಾವಣಗೆರೆ, ಮಳವಳ್ಳಿ, ಕೊಳ್ಳೇಗಾಲ, ಹಾಸನ, ಅರಸಿಕೆರೆ ಸೇರಿದಂತೆ ಒಟ್ಟು 25 ತಾಲೂಕಿನಿಂದ ಹಾಗೂ ಜಿಲ್ಲೆಗಳಿಂದ ಕುರಿಗಳನ್ನು ತರಿಸಲಾಗಿದೆ. ಇನ್ನು,ಈ ಮೇಳಾ ಬಕ್ರಿದ್ ಹಬ್ಬದವರೆಗೂ ಇರಲಿದೆ.
ಒಂದು ಕುರಿಗೆ ಲಕ್ಷಾಂತರ ರೂ
- ಬಂಡೂರ್ – 1 ಲಕ್ಷ
- ಕಿಲಾರಿ – 80 ಸಾವಿರ
- ನಾಟಿ ಕುರಿ- 60 ಸಾವಿರ
- ಕರಿ ಕುರಿ – 40 ಸಾವಿರ
- ಬಾಗೇವಾಡಿ ಕುರಿ- ಒಂದೂವರೆ ಲಕ್ಷ
- ಅಮಿನ್ ಗಾಡ್ – 40 ರಿಂದ 60 ಸಾವಿರ
- ಪಾವಗಡ ಮತ್ತು ಸಿರ – 20 – 30 ಸಾವಿರ
- ಮೈಲಾರಿ ಟಗರು – 70 ಸಾವಿರ
- ಬಾಗೇವಾಡಿ – 15 ಸಾವಿರ
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ