AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

OTT Movies: ಈ ವಾರ ಒಟಿಟಿಗೆ ಲಗ್ಗೆ ಇಡಲಿವೆ ಭರ್ಜರಿ ಸಿನಿಮಾಗಳು: ಇಲ್ಲಿದೆ ಪಟ್ಟಿ

OTT Release: ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳು ಅಬ್ಬರಿಸುತ್ತಿರುವಾಗಲೆ ಕೆಲವು ಒಳ್ಳೆಯ ಸಿನಿಮಾಗಳು, ವೆಬ್ ಸರಣಿಗಳು ಒಟಿಟಿಗೆ ದಾಂಗುಡಿ ಇಟ್ಟಿವೆ.

OTT Movies: ಈ ವಾರ ಒಟಿಟಿಗೆ ಲಗ್ಗೆ ಇಡಲಿವೆ ಭರ್ಜರಿ ಸಿನಿಮಾಗಳು: ಇಲ್ಲಿದೆ ಪಟ್ಟಿ
ಒಟಿಟಿ
Follow us
ಮಂಜುನಾಥ ಸಿ.
|

Updated on: Jul 30, 2023 | 4:12 PM

ಚಿತ್ರಮಂದಿರಗಳಲ್ಲಿ (Theater) ಕನ್ನಡದ ಸಿನಿಮಾಗಳು ಅಬ್ಬರಿಸುತ್ತಿವೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಕೌಸಲ್ಯ ಸುಪ್ರಜಾ ರಾಮ’, ‘ಆಚಾರ್ ಆಂಡ್ ಕೋ’ ಸಿನಿಮಾಗಳು ದೊಡ್ಡ ಸೂಪರ್ ಸ್ಟಾರ್​ಗಳಿಲ್ಲದೆಯೂ ಕೇವಲ ಕಂಟೆಂಟ್​ನಿಂದ ಗಮನ ಸೆಳೆಯುತ್ತಿವೆ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಸೆಳೆಯುತ್ತಿವೆ. ಕನ್ನಡ ಸಿನಿಮಾಗಳ ಮುಂದೆ ಪರಭಾಷೆ ಸಿನಿಮಾಗಳು ಮಂಕಾಗಿವೆ. ಆದರೆ ಇದರ ನಡುವೆ ಕೆಲವು ಒಳ್ಳೆಯ ಪರಭಾಷೆ ಸಿನಿಮಾಗಳು ಒಟಿಟಿಗೆ (OTT) ಲಗ್ಗೆ ಇಟ್ಟಿವೆ. ಅದರಲ್ಲಿ ಮುಖ್ಯವಾದ ಕೆಲವು ಸಿನಿಮಾ ಹಾಗೂ ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.

ಒಂದು ತಿಂಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ‘ಮಾಮನ್ನನ್’ ಸಿನಿಮಾ ಇದೀಗ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ. ಉದಯ್​ನಿಧಿ ಸ್ಟಾಲಿನ್, ವಡಿವೇಲು ನಟನೆಯ ಈ ಸಿನಿಮಾ ಬಗ್ಗೆ ಬಹಳ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಸಿನಿಮಾವನ್ನು ಮಾರಿ ಸೆಲ್ವರಾಜ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಜಾತಿ ವಿಷಯ ಆಧರಿಸಿದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ನೆಟ್​ಫ್ಲಿಕ್ಸ್​ನಲ್ಲಿ ನೋಡಬಹುದಾಗಿದೆ.

ಇತ್ತೀಚೆಗಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಫ್ಲಾಪ್ ಆಗಿದ್ದ ನಿಖಿಲ್ ಸಿದ್ಧಾರ್ಥ್ ನಟನೆಯ ‘ಸ್ಪೈ’ ಸಿನಿಮಾ ಇದೀಗ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಕಂಡಿದೆ. ಸುಭಾಷ್ ಚಂದ್ರ ಭೋಸ್ ಸಾವಿನ ರಹಸ್ಯ ಬೆನ್ನತ್ತುವ ಗೂಢಚಾರಿಯೊಬ್ಬನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ಬಿಡುಗಡೆ ಸಮಯದಲ್ಲಿ ವ್ಯಕ್ತವಾಗಲಿಲ್ಲ.

ಇದನ್ನೂ ಓದಿ:ಮತ್ತೊಂದು ‘ಕಾಶ್ಮೀರ್ ಫೈಲ್ಸ್’ ಜೊತೆ ಬಂದ ವಿವೇಕ್ ಅಗ್ನಿಹೋತ್ರಿ; ಈ ಬಾರಿ ನೇರವಾಗಿ ಒಟಿಟಿಗೆ ಎಂಟ್ರಿ

ತಮಿಳಿನ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಪೋರ್ ತೊಳಿಲ್’ ಆಗಸ್ಟ್ 4 ರಂದು ಸೋನಿ ಲಿವ್​ನಲ್ಲಿ ಬಿಡುಗಡೆ ಆಗಲಿದೆ. ಸೈಕೋ ಕೊಲೆಗಾರನೊಬ್ಬನ ಬೆನ್ನು ಹತ್ತುವ ಇಬ್ಬರು ಪೊಲೀಸರ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಜೂನ್ 9 ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿದ್ದವು. ಇದೀಗ ಸಿನಿಮಾ ಆಗಸ್ಟ್ 4ರಂದು ಸೋನಿ ಲಿವ್​ನಲ್ಲಿ ಬಿಡುಗಡೆ ಆಗುತ್ತಿದೆ.

ನಟ ನರೇಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಕಾಮಿಡಿ, ಕೌಟುಂಬಿಕ ಸಿನಿಮಾ ‘ಮಾಯಾಬಜಾರ್’ ಕೆಲವು ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಉತ್ತಮ ವಿಮರ್ಶೆ ಗಳಿಸಿತ್ತು. ನರೇಶ್ ನಟನೆಗೆ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಆದ ಉತ್ತಮ ಕಾಮಿಡಿ ಹಾಗೂ ಕೌಟುಂಬಿಕ ಸಿನಿಮಾ ಎಂಬ ಖ್ಯಾತಿಗೆ ಮಾಯಾಬಜಾರ್ ಪಾತ್ರವಾಗಿತ್ತು. ಇದೀಗ ಈ ಸಿನಿಮಾ ಜೀ5 ಬಿಡುಗಡೆ ಆಗಿದೆ. ಈ ವಾರದಿಂದ ವೀಕ್ಷಣೆಗೆ ಸಿನಿಮಾ ಲಭ್ಯವಿದೆ.

ನಟಿ ತಮನ್ನಾರ ಬಾಯ್​ಫ್ರೆಂಡ್ ವಿಜಯ್ ವರ್ಮಾ ಅಪರೂಪಕ್ಕೆ ನಾಯಕನ ಪಾತ್ರದಲ್ಲಿ ನಟಿಸಿರುವ ‘ಕಾಲಕೂಟ್’ ವೆಬ್ ಸರಣಿ ಇದೇ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಜಿಯೋ ಸಿನಿಮಾಸ್​ನಲ್ಲಿ ‘ಕಾಲಕೂಟ್’ ವೆಬ್ ಸರಣಿಯನ್ನು ಉಚಿತವಾಗಿ ನೋಡಬಹುದಾಗಿದೆ. ಉದ್ಯೋಗದಿಂದ ಬೇಸತ್ತ ಇನ್​ಸ್ಪೆಕ್ಟರ್ ಒಬ್ಬನ ಬಳಿ ಒಂದು ಆಸಿಡ್ ದಾಳಿಯ ಪ್ರಕರಣ ಬರುತ್ತದೆ ಅದು ಆತನನ್ನು ಮತ್ತೆ ಉದ್ಯೋಗವನ್ನು ಮಾಡುವಂತೆ ಮಾಡುತ್ತದೆ. ಥ್ರಿಲ್ಲರ್ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ