ಮತ್ತೊಂದು ‘ಕಾಶ್ಮೀರ್ ಫೈಲ್ಸ್’ ಜೊತೆ ಬಂದ ವಿವೇಕ್ ಅಗ್ನಿಹೋತ್ರಿ; ಈ ಬಾರಿ ನೇರವಾಗಿ ಒಟಿಟಿಗೆ ಎಂಟ್ರಿ
ವಿವೇಕ್ ಅಗ್ನಿಹೋತ್ರಿ ಅವರು ‘ಕಾಶ್ಮೀರ್ ಅನ್ರಿಪೋರ್ಟೆಡ್’ ಎಂಬ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ಇದರ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri)ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಯಶಸ್ಸು ಕಂಡಿತು. ಬಾಕ್ಸ್ ಆಫೀಸ್ನಲ್ಲಿ 250 ಕೋಟಿ ರೂಪಾಯಿಗೂ ಹೆಚ್ಚು ಕಮಾಯಿ ಮಾಡಿದ್ದು ಸಿನಿಮಾದ ಹೆಚ್ಚುಗಾರಿಕೆ. ಈ ಚಿತ್ರದ ಬಗ್ಗೆ ಹುಟ್ಟಿಕೊಂಡ ವಿವಾದಗಳು ಒಂದೆರಡಲ್ಲ. ಈಗ ವಿವೇಕ್ ಅಗ್ನಿಹೋತ್ರಿ ಅವರು ಹೊಸ ಘೋಷಣೆ ಒಂದನ್ನು ಮಾಡಿದ್ದಾರೆ. ಈ ಬಾರಿ ಅವರು ಮತ್ತೊಂದು ಕಾಶ್ಮೀರ್ ಫೈಲ್ಸ್ (The Kashmir Files) ಜೊತೆ ಬರುವುದಾಗಿ ತಿಳಿಸಿದ್ದಾರೆ. ಈ ಪ್ರಾಜೆಕ್ಟ್ ನೇರವಾಗಿ ಜೀ5 ಒಟಿಟಿ ಮೂಲಕ ರಿಲೀಸ್ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್ ಅನ್ರಿಪೋರ್ಟೆಡ್’ ಎಂಬ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ಇದರ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅನೇಕ ಕಾಶ್ಮೀರಿ ಹಿಂದೂಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದರ ಜೊತೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಕ್ಲಿಪ್ಗಳನ್ನು ಸೇರಿಸಲಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಅರೆಬರೆ ಬೆಂದ ಸತ್ಯ ಎಂದು ಅನೇಕರು ದೂರಿದ್ದರು. ಇವರಿಗೆ ಉತ್ತರ ನೀಡುವ ದೃಷ್ಟಿಯಿಂದ ವಿವೇಕ್ ಅಗ್ನಿಹೋತ್ರಿ ಈ ಪ್ರಾಜೆಕ್ಟ್ ಘೋಷಣೆ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ.
‘ನರಮೇಧ ನಡೆದಿದೆ ಎಂದು ಒಪ್ಪದವರು, ಭಯೋತ್ಪಾದಕ ಬೆಂಬಲಿಗರು ಮತ್ತು ಭಾರತದ ಶತ್ರುಗಳು ಕಾಶ್ಮೀರ ಫೈಲ್ಸ್ನ ಪ್ರಶ್ನಿಸಿದರು. ಕಾಶ್ಮೀರ ಹಿಂದೂಗಳ ಹತ್ಯಾಕಾಂಡದ ಭೀಕರ ಸತ್ಯವನ್ನು ಈಗ ನಿಮ್ಮ ಮುಂದಿಡುತ್ತಿದ್ದೇನೆ. ಇದನ್ನು ದೆವ್ವಗಳು ಮಾತ್ರ ಪ್ರಶ್ನಿಸಬಹುದು. ಶೀಘ್ರದಲ್ಲೇ ಬರಲಿದೆ #KashmirUNREPORTED’ ಎಂದು ವಿವೇಕ್ ಅಗ್ನಿಹೋತ್ರಿ ಬರೆದುಕೊಂಡಿದ್ದಾರೆ. ‘ಕಾಶ್ಮೀರಿ ಪಂಡಿತರ ಇತಿಹಾಸದ ನಿರ್ಲಕ್ಷಿತ ಅಧ್ಯಾಯಗಳ ಮರುಶೋಧ’ ಎಂದು ಜೀ5 ಒಟಿಟಿ ಟ್ವೀಟ್ ಮಾಡಿಕೊಂಡಿದೆ.
PRESENTING:
A lot of Genocide Deniers, terror supporters & enemies of Bharat questioned The Kashmir Files. Now bringing to you the VULGAR truth of Kashmir Genocide of Hindus which only a devil can question.
Coming soon #KashmirUNREPORTED. Be ready to cry.
Only on @ZEE5India… pic.twitter.com/DgGlnzSKwA
— Vivek Ranjan Agnihotri (@vivekagnihotri) July 19, 2023
ಇದನ್ನೂ ಓದಿ: ‘ಕಾಶ್ಮೀರ್ ಫೈಲ್ಸ್ನ ವಿರೋಧಿಸಿದವರೇ ಕೇರಳ ಸ್ಟೋರಿಯನ್ನೂ ಟೀಕಿಸುತ್ತಿದ್ದಾರೆ’; ಅನುಪಮ್ ಖೇರ್
‘ದಿ ಕಾಶ್ಮೀರ್ ಫೈಲ್ಸ್ ಅನ್ರಿಪೋರ್ಟೆಡ್’ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಬಗ್ಗೆ ಸದ್ಯ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಇದರ ರಿಲೀಸ್ ದಿನಾಂಕ ಕೂಡ ಹೊರಬಿದ್ದಿಲ್ಲ. ಹೀಗಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ವಿವೇಕ್ ಅಗ್ನಿಹೋತ್ರಿ ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಆಗಸ್ಟ್ನಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ, ಸದ್ಯಕ್ಕಂತೂ ಇದು ಅನುಮಾನವೇ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ 2022ರ ಮಾರ್ಚ್ 11ರಂದು ರಿಲೀಸ್ ಆಯಿತು. ಆ ವರ್ಷ ರಿಲೀಸ್ ಆದ ಸಿನಿಮಾಗಳ ಪೈಕಿ ಯಶಸ್ವಿ ಸಿನಿಮಾ ಎಂಬ ಖ್ಯಾತಿ ಇದಕ್ಕೆ ಸಿಕ್ಕಿತು. ಇದೊಂದು ಪ್ರೊಪೊಗಾಂಡ ಸಿನಿಮಾ ಎಂಬ ಹಣೆಪಟ್ಟಿಯನ್ನೂ ಇದಕ್ಕೆ ಕಟ್ಟಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ