AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kangana Ranaut: ನಟನಿಗೆ ಮೋಸ ಮಾಡಿದ್ರಾ ಕಂಗನಾ ರಣಾವತ್? ರಿಲೀಸ್​ಗೂ ಮೊದಲೇ ‘ತೇಜಸ್​’ ಸಿನಿಮಾ ವಿವಾದ

ಈ ಚಿತ್ರದಲ್ಲಿ ನಟಿಸಿದ ಮಯಾಂಕ್ ಮಾಧುರ್ ಅವರು ಕಂಗನಾ ಅವರಿಂದ ಮೋಸ ಆಗಿದ ಎಂದು ಆರೋಪಿಸಿದ್ದಾರೆ. ಅವರು ಈ ಚಿತ್ರದ ನಿರ್ಮಾಪಕರನ್ನು ಬಂಧಿಸುವ ಎಚ್ಚರಿಕೆ ನೀಡಿದ್ದಾರೆ.

Kangana Ranaut: ನಟನಿಗೆ ಮೋಸ ಮಾಡಿದ್ರಾ ಕಂಗನಾ ರಣಾವತ್? ರಿಲೀಸ್​ಗೂ ಮೊದಲೇ ‘ತೇಜಸ್​’ ಸಿನಿಮಾ ವಿವಾದ
ಮಯಾಂಕ್-ಕಂಗನಾ
ರಾಜೇಶ್ ದುಗ್ಗುಮನೆ
|

Updated on:Jul 13, 2023 | 8:07 AM

Share

ನಟಿ ಕಂಗನಾ ರಣಾವತ್ (Kangana Ranaut) ಅವರು ವಿವಾದದ ಮೂಲಕ ಸದಾ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಮಾಡಿಕೊಳ್ಳುವ ಕಾಂಟ್ರವರ್ಸಿಗಳು ಒಂದೆರಡಲ್ಲ. ಈಗ ಕಂಗನಾ ರಣಾವತ್ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ‘ತೇಜಸ್’ ಸಿನಿಮಾದಲ್ಲಿ (Tajas Movie) ನಟಿ ಕಂಗನಾ ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕಿ ಅಲ್ಲ. ಆದಾಗ್ಯೂ ಈ ಚಿತ್ರದಲ್ಲಿ ನಟಿಸಿದ ಮಯಾಂಕ್ ಮಾಧುರ್ ಅವರು ಕಂಗನಾ ಅವರಿಂದಲ ಮೋಸ ಆಗಿದೆ ಎಂದು ಆರೋಪಿಸಿದ್ದಾರೆ. ಈ ಚಿತ್ರದ ನಿರ್ಮಾಪಕರಾದ ವಿಕ್ಕಿ ವಿಜಯ್ ಮೊದಲಾದವರ ವಿರುದ್ಧ ಕಿಡಿಕಾರಿದ್ದಾರೆ.

‘ತೇಜಸ್​’ ಚಿತ್ರಕ್ಕೆ ಸರ್ವೇಶ್​ ಮೇವರಾ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕಂಗನಾ ರಣಾವತ್​ ಅವರು ವಾಯುಸೇನೆಯ ಪೈಲೆಟ್​ ಆಗಿ ಅಭಿನಯಿಸಿದ್ದಾರೆ. ಪೈಲಟ್ ತೇಜಸ್ ಗಿಲ್ ಅವರ ಜೀವನಾಧಾರಿತ ಸಿನಿಮಾ ಇದು ಎಂಬ ಕಾರಣಕ್ಕೂ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ವಾಯು ಸೇನೆಯ ಪೈಲೆಟ್​ಗಳಿಗೆ ಈ ಚಿತ್ರದ ಮೂಲಕ ಗೌರವ ಸಲ್ಲಿಸುವ ಉದ್ದೇಶವನ್ನು ತಂಡ ಹೊಂದಿದೆ. ಈ ಮಧ್ಯೆ ಸಿನಿಮಾ ತಂಡ ಸಂಕಷ್ಟಕ್ಕೆ ಸಿಲುಕಿದೆ.

ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಯಾಂಕ್, ‘ನನ್ನ ಪಾತ್ರದ ಅವಧಿ ಕಡಿಮೆಯಾಗುತ್ತಲೇ ಬಂತು. ಮೊದಲು ನನ್ನ ಪಾತ್ರ 15 ನಿಮಿಷ ಬರುತ್ತದೆ ಎಂದಿದ್ದರು. ಈಗ ಆ ಅವಧಿ 1 ಅಥವಾ 2 ನಿಮಿಷಕ್ಕೆ ಬಂದು ನಿಂತಿದೆ. ಹೀಗಾಗಿ ಈ ಸಿನಿಮಾದಲ್ಲಿ ಆಸಕ್ತಿ ಇಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೆ’ ಎಂದಿದ್ದಾರೆ.

‘ಟಿಕು ವೆಡ್ಸ್ ಶೇರು ಚಿತ್ರದಲ್ಲಿ ಕಂಗನಾ ಅವರು ನನಗೆ ಸಹ ನಿರ್ಮಾಪಕ ಎಂದು ಕರೆದರು. ಆದರೆ, ನನ್ನ ಹೆಸರು ಉಲ್ಲೇಖ ಆಗಿದ್ದು ‘ವಿಶೇಷ ಧನ್ಯವಾದಗಳು’ ಬಾಕ್ಸ್​ನಲ್ಲಿ ಮಾತ್ರ. ತೇಜಸ್ ಚಿತ್ರ ರಿಲೀಸ್​ಗೂ ಮೊದಲು ನನ್ನ ಸಂಭಾವನೆ ಸೆಟಲ್ ಮಾಡುವ ಭರವಸೆಯನ್ನು ಕಂಗನಾ ನೀಡಿದ್ದರು. ಆದರೆ, ಈಗ ಅವರು ನಿರ್ಮಾಪಕರತ್ತ ಬೆರಳು ಮಾಡುತ್ತಿದ್ದಾರೆ’ ಎಂದಿದ್ದಾರೆ ಮಯಾಂಕ್.

ಇದನ್ನೂ ಓದಿ: ‘ನಯನತಾರಾ ಮೊದಲಿನಂತಿಲ್ಲ’; ವಿಘ್ನೇಶ್​ ಶಿವನ್​ಗೆ ವಾರ್ನಿಂಗ್ ಕೊಟ್ಟ ಶಾರುಖ್ ಖಾನ್

‘ಈ ಎಲ್ಲಾ ಕಾರಣದಿಂದ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ. ನಾನು ಯಾವಾಗ ನ್ಯಾಯಾಲಯಕ್ಕೆ ಹೋಗುತ್ತೇನೆ ಮತ್ತು ಚಿತ್ರವನ್ನು ಹೇಗೆ ನಿಲ್ಲಿಸುತ್ತೇನೆ ಎಂಬುದನ್ನು ನಾನು ಈಗಲೇ ಬಹಿರಂಗಪಡಿಸುವುದಿಲ್ಲ. ನಿರ್ಮಾಪಕರನ್ನು ಹೇಗೆ ಬಂಧಿಸುತ್ತೇನೆ ಎಂಬುದನ್ನು ಕಾದು ನೋಡಿ. ಇದಕ್ಕೆ ನಾನು ನಿವೃತ್ತ ಮುಖ್ಯ ನ್ಯಾಯಾಧೀಶರಿಂದ ಮಾರ್ಗದರ್ಶನ ಪಡೆದಿದ್ದೇನೆ. ನಾನು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಕಚೇರಿ, ಗೃಹ ಸಚಿವಾಲಯದವರ ಬಳಿ ಮಾತನಾಡಿದ್ದೇನೆ. ಕಾನೂನು ಪ್ರಕಾರವೇ ಎಲ್ಲವನ್ನೂ ಮಾಡಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:50 am, Thu, 13 July 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು