AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಮೂರು ದಿನಕ್ಕೆ ರಣವೀರ್-ಆಲಿಯಾ ಸಿನಿಮಾ ಗಳಿಸಿದ್ದು ಬರೀ ಇಷ್ಟೇನಾ? ಸೋಲಿನ ಮುನ್ಸೂಚನೆಯೇ?

Rocky Aur Rani Kii Prem Kahaani Total Collection: ಕರಣ್ ಜೋಹರ್ ಸಿನಿಮಾ ಎಂದರೆ ಅಲ್ಲೊಂದು ಅದ್ದೂರಿತನ ಇರುತ್ತದೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಕೂಡ ಇದೇ ರೀತಿಯಲ್ಲಿ ಮೂಡಿ ಬಂದಿದೆ. ಆದರೆ,  ಜನರು ಸಿನಿಮಾನ  ಅಷ್ಟಾಗಿ ಇಷ್ಟಪಟ್ಟಿಲ್ಲ.

ಮೊದಲ ಮೂರು ದಿನಕ್ಕೆ ರಣವೀರ್-ಆಲಿಯಾ ಸಿನಿಮಾ ಗಳಿಸಿದ್ದು ಬರೀ ಇಷ್ಟೇನಾ? ಸೋಲಿನ ಮುನ್ಸೂಚನೆಯೇ?
ಆಲಿಯಾ-ರಣವೀರ್
ರಾಜೇಶ್ ದುಗ್ಗುಮನೆ
|

Updated on: Jul 31, 2023 | 10:11 AM

Share

ಕಳೆದ ಏಳು ತಿಂಗಳಲ್ಲಿ ಬಾಲಿವುಡ್​ನಲ್ಲಿ ‘ಪಠಾಣ್’ (Pathaan Movie) ಹಾಗೂ ‘ದಿ ಕೇರಳ ಸ್ಟೋರಿ’ ಹೊರತುಪಡಿಸಿ ಬೇರೆ ಯಾವುದೇ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಅಬ್ಬರಿಸಿಲ್ಲ. ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (Rocky Aur Rani Ki Prem Kahani) ಚಿತ್ರದ ಮೂಲಕ ದೊಡ್ಡ ಗೆಲುವು ಕಾಣಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಸಿನಿಮಾ ಹೀನಾಯವಾಗಿ ಸೋಲು ಕಂಡಿದೆ. ಇದರಿಂದ ಸಿನಿಮಾಗೆ ದೊಡ್ಡ ಹಿನ್ನಡೆ ಆಗುವ ಸೂಚನೆ ಸಿಕ್ಕಿದೆ.

ಕರಣ್ ಜೋಹರ್ ಸಿನಿಮಾ ಎಂದರೆ ಅಲ್ಲೊಂದು ಅದ್ದೂರಿತನ ಇರುತ್ತದೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಕೂಡ ಇದೇ ರೀತಿಯಲ್ಲಿ ಮೂಡಿ ಬಂದಿದೆ. ಆದರೆ,  ಜನರು ಸಿನಿಮಾನ  ಅಷ್ಟಾಗಿ ಇಷ್ಟಪಟ್ಟಿಲ್ಲ. ಸ್ಟಾರ್ ಪಾತ್ರವರ್ಗ ಇದ್ದ ಹೊರತಾಗಿಯೂ ಸಿನಿಮಾ ಸಾಧಾರಣ ಗಳಿಕೆ ಮಾಡುತ್ತಿದೆ. ಇದು ಚಿತ್ರತಂಡದ ಆತಂಕಕ್ಕೆ ಕಾರಣ ಆಗಿದೆ.

ಒಟ್ಟಾರೆ ಗಳಿಕೆ ಎಷ್ಟು?

ಸ್ಟಾರ್ ಸಿನಿಮಾ ಮೊದಲ ದಿನ ಭರ್ಜರಿ ಗಳಿಕೆ ಮಾಡುತ್ತವೆ ಎಂಬ ನಂಬಿಕೆ ಇದೆ. ಆದರೆ, ರಣವೀರ್-ಆಲಿಯಾ ವಿಚಾರದಲ್ಲಿ ಇದು ಸುಳ್ಳಾಗಿದೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮೊದಲ ದಿನ (ಜುಲೈ 28) 11 ಕೋಟಿ ರೂಪಾಯಿ, ಎರಡನೇ ದಿನ 16.05 ಕೋಟಿ ಹಾಗೂ ಭಾನುವಾರ (ಜುಲೈ 30) 19 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟೂ ಗಳಿಕೆ 46 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: ‘ನೀವು ಸಲಿಂಗ ಕಾಮಿ ತಾನೇ?’: ನೇರ ಪ್ರಶ್ನೆಗೆ ಉತ್ತರ ನೀಡಿದ ಕರಣ್​ ಜೋಹರ್​

100 ಕೋಟಿ ರೂಪಾಯಿ ಗಳಿಕೆಯೂ ಕಷ್ಟ?

ರಣವೀರ್ ಸಿಂಗ್​ಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಅವರ ಬೇಡಿಕೆ ಕುಗ್ಗಿದಂತೆ ಕಾಣುತ್ತಿದೆ. ಈ ಚಿತ್ರದ ಒಟ್ಟಾರೆ ಗಳಿಕೆ 100 ಕೋಟಿ ರೂಪಾಯಿ ಆಗೋದು ಅನುಮಾನ ಎನ್ನಲಾಗುತ್ತಿದೆ. ಹಾಗಾದಲ್ಲಿ ನಿರ್ಮಾಪಕರು ದೊಡ್ಡ ನಷ್ಟ ಅನುಭವಿಸೋದು ಪಕ್ಕಾ. ಇಂದಿನ (ಜುಲೈ 31) ಗಳಿಕೆ ಆಧಾರದ ಮೇಲೆ ಸಿನಿಮಾ ಭವಿಷ್ಯ ನಿರ್ಧಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ