ಡಾಲಿ ಧನಂಜಯ್​ಗೆ ಬರ್ತ್​ಡೇ ಸಂಭ್ರಮ; ಮಧ್ಯರಾತ್ರಿಯಿಂದಲೇ ಶುರುವಾಗಿದೆ ಸಂಭ್ರಮಾಚರಣೆ

Dhananjay Birthday: 2018ರಲ್ಲಿ ರಿಲೀಸ್ ಆದ ‘ಟಗರು’ ಸಿನಿಮಾ ಧನಂಜಯ್ ಅವರ ವೃತ್ತಿಜೀವನವನ್ನೇ ಬದಲಿಸಿತು. ಈ ಚಿತ್ರದಿಂದ ಡಾಲಿ ಎಂದೇ ಫೇಮಸ್ ಆದರು. ಅವರು ಮಾಡಿದ ವಿಲನ್ ಪಾತ್ರ ಗಮನ ಸೆಳೆಯಿತು. ಬಳಿಕ ಅವರು ‘ಭೈರವ ಗೀತ’ ಚಿತ್ರದಿಂದ ತೆಲುಗಿಗೂ ಕಾಲಿಟ್ಟರು.

ಡಾಲಿ ಧನಂಜಯ್​ಗೆ ಬರ್ತ್​ಡೇ ಸಂಭ್ರಮ; ಮಧ್ಯರಾತ್ರಿಯಿಂದಲೇ ಶುರುವಾಗಿದೆ ಸಂಭ್ರಮಾಚರಣೆ
ಧನಂಜಯ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 23, 2023 | 6:30 AM

ನಟ ಡಾಲಿ ಧನಂಜಯ್ (Dhananjay) ಅವರಿಗೆ ಇಂದು (ಆಗಸ್ಟ್ 23) ಜನ್ಮದಿನದ ಸಂಭ್ರಮ. ಅವರು 38ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಕೊರೊನಾ, ಪುನೀತ್ ರಾಜ್​ಕುಮಾರ್ ನಿಧನ ಸೇರಿ ಹಲವು ಕಾರಣಗಳಿಂದ ಅಭಿಮಾನಿಗಳ ಜೊತೆ ಹುಟ್ಟಹಬ್ಬ ಆಚರಿಸಿಕೊಳ್ಳೋಕೆ ಸಾಧ್ಯವಾಗಿರಲಿಲ್ಲ. ಈ ವರ್ಷ ಅಭಿಮಾನಿಗಳ ಜೊತೆಗೂಡಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ಸಂಭ್ರಮಾಚರಣೆ ಶುರುವಾಗಿದೆ. ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್​ನಲ್ಲಿ ಸೆಲೆಬ್ರೇಷನ್ ಮಾಡಲಾಗಿದೆ. ಅವರ ಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ.

ಧನಂಜಯ್ ಅಭಿಮಾನಿ ಬಳಗ ಹಿರಿದಾಗುತ್ತಿದೆ. ಈ ಕಾರಣಕ್ಕೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಆಗಸ್ಟ್ 22ರ ರಾತ್ರಿ 11:30ರಿಂದ ಸಂಭ್ರಮಾಚರಣೆ ಮಾಡಲಾಯಿತು. ಇಂದು ಬೆಳಗ್ಗೆ 11 ಗಂಟೆಗೆ ನಂದಿ ಲಿಂಕ್ ಗ್ರೌಂಡ್​ಗೆ ಧನಂಜಯ್ ಬರಲಿದ್ದು, ‘ಡಾಲಿ ಉತ್ಸವ’ ಜೋರಾಗಿ ನಡೆಯಲಿದೆ.

ಧನಂಜಯ್ ಅವರು ಐಟಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದವರು. ನಟನೆಯ ಮೇಲಿನ ಆಸಕ್ತಿಯಿಂದ ಅವರು ಕೆಲಸ ಬಿಟ್ಟರು. ‘ಜಯನಗರ 4th ಬ್ಲಾಕ್’ ಕಿರುಚಿತ್ರದಲ್ಲಿ ನಟಿಸಿದರು. 2013ರಲ್ಲಿ ರಿಲೀಸ್ ಆದ ‘ಡೈರೆಕ್ಟರ್ ಸ್ಪೆಷಲ್’ ಸಿನಿಮಾ ಮೂಲಕ ದೊಡ್ಡ ಪರದೆಗೆ ಕಾಲಿಟ್ಟರು. ಹಲವು ವರ್ಷಗಳ ಸ್ಟ್ರಗಲ್ ಬಳಿಕ ಅವರಿಗೆ ದೊಡ್ಡ ಗೆಲುವು ಸಿಕ್ಕಿತು.

2018ರಲ್ಲಿ ರಿಲೀಸ್ ಆದ ‘ಟಗರು’ ಸಿನಿಮಾ ಧನಂಜಯ್ ಅವರ ವೃತ್ತಿಜೀವನವನ್ನೇ ಬದಲಿಸಿತು. ಈ ಚಿತ್ರದಿಂದ ಡಾಲಿ ಎಂದೇ ಫೇಮಸ್ ಆದರು. ಅವರು ಮಾಡಿದ ವಿಲನ್ ಪಾತ್ರ ಗಮನ ಸೆಳೆಯಿತು. ಬಳಿಕ ಅವರು ‘ಭೈರವ ಗೀತ’ ಚಿತ್ರದಿಂದ ತೆಲುಗಿಗೂ ಕಾಲಿಟ್ಟರು. ಕೇವಲ ವಿಲನ್ ಮಾತ್ರವಲ್ಲದೆ ಪೊಲೀಸ್ ಪಾತ್ರಗಳಲ್ಲೂ ಅವರು ಜನಮನ ಸೆಳೆದರು.

2021ರಲ್ಲಿ ರಿಲೀಸ್ ಆದ ‘ಪುಷ್ಪ’ ಚಿತ್ರದಲ್ಲಿ ಜಾಲಿ ರೆಡ್ಡಿ ಪಾತ್ರ ಮಾಡಿ ಮತ್ತಷ್ಟು ಫೇಮಸ್ ಆದರು ಧನಂಜಯ್. ಅವರ 25ನೇ ಸಿನಿಮಾ ‘ಗುರುದೇವ ಹೊಯ್ಸಳ’ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈಗ ಅವರು ‘ಪುಷ್ಪ 2’ ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಹೊಸ ಸಿನಿಮಾಗಳು ಘೋಷಣೆ ಆಗಿವೆ.

ಇದನ್ನೂ ಓದಿ: ತಂದೆಯ ಜೊತೆ ಬೆಟ್ಟ ಹತ್ತಿ ಬಾಲ್ಯದ ನೆನಪಿಗೆ ಜಾರಿದ ಡಾಲಿ ಧನಂಜಯ್

ನಿರ್ಮಾಪಕನಾಗಿಯೂ ಧನಂಜಯ್ ಫೇಮಸ್ ಆಗಿದ್ದಾರೆ. ‘ಬಡವ ರಾಸ್ಕಲ್’ ಚಿತ್ರ ನಿರ್ಮಾಣ ಮಾಡಿ ದೊಡ್ಡ ಯಶಸ್ಸು ಕಂಡರು. ಬಳಿಕ ‘ಹೆಡ್ ಬುಷ್’ ಸಿನಿಮಾ ನಿರ್ಮಾಣ ಮಾಡಿದರು. ಈಗ ‘ಟಗರು ಪಲ್ಯ’ ಚಿತ್ರವನ್ನು ಅವರು ನಿರ್ಮಾಣ ಮಾಡುತ್ತಿದ್ದಾರೆ. ಗೀತ ಸಾಹಿತಿ ಆಗಿಯೂ ಧನಂಜಯ್ ಅವರು ಫೇಮಸ್ ಆಗಿದ್ದಾರೆ. ‘ಉಡುಪಿ ಹೋಟೆಲು..’ ಮೊದಲಾದ ಸಾಂಗ್ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು