Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದ್ದರ್ ನಿಧನಕ್ಕೆ ಕಂಬನಿ ಮಿಡಿದ ಪವನ್ ಕಲ್ಯಾಣ್: ಕುಟುಂಬಕ್ಕೆ ಸಾಂತ್ವನ

ಗದ್ದರ್ ನಿಧನಕ್ಕೆ ಕಂಬನಿ ಮಿಡಿದ ಪವನ್ ಕಲ್ಯಾಣ್: ಕುಟುಂಬಕ್ಕೆ ಸಾಂತ್ವನ

ಮಂಜುನಾಥ ಸಿ.
|

Updated on: Aug 06, 2023 | 11:17 PM

Pawan Kalyan: ತೆಲುಗಿನ ಜನಪ್ರಿಯ ಜನಪದ ಗಾಯಕ, ಕ್ರಾಂತಿಕಾರಿ ಕವಿ, ಸಾಮಾಜಿಕ ಹೋರಾಟಗಾರ ಗದ್ದರ್ ನಿಧನಕ್ಕೆ ನಟ, ರಾಜಕಾರಣಿ ಕಂಬನಿ ಮಿಡಿದಿದ್ದಾರೆ.

ತೆಲುಗಿನ ಜನಪ್ರಿಯ ಜನಪದ ಗಾಯಕ, ಕ್ರಾಂತಿಕಾರಿ ಕವಿ ಗದ್ದರ್ (Gaddar) ಇಂದು (ಆಗಸ್ಟ್ 06) ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಗದ್ದರ್​ ಅವರ ಅಭಿಮಾನಿಯೂ, ಅವರಿಂದ ಸ್ಪೂರ್ತಿ ಪಡೆದವರೂ ಆಗಿರುವ ನಟ, ರಾಜಕಾರಣಿ ಪವನ್ ಕಲ್ಯಾಣ್ (Pawan Kalyan), ಗದ್ದರ್ ಅವರ ಅಂತಿಮ ದರ್ಶನ ಮಾಡಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಗದ್ದರ್ ಅವರೊಟ್ಟಿಗೆ ಕಳೆದ ಆತ್ಮಿಯ ಕ್ಷಣಗಳನ್ನು ನಟ ಪವನ್ ಕಲ್ಯಾಣ್ ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ