Video: ಕಣ್ಮನ ಸೆಳೆದ ಲಾಲ್ ಬಾಗ್ ಫ್ಲವರ್ ಶೋ: ಹೇಗಿದೆ ನೋಡಿ ಜನರ ಸೆಲ್ಫಿ ಕ್ರೇಜ್
ಫಲಪುಷ್ಟ ಪ್ರದರ್ಶನ ಇಂದು ಮೂರನೇ ದಿನಕ್ಕೆ ಕಾಲಿರಿಸಿದೆ. ಸಿಟಿ ಮಂದಿ ಬಗೆಬಗೆ ಹೂಗಳನ್ನ ಕಣ್ತುಂಬಿಕೊಂಡು ದಿಲ್ ಖುಷ್ ಆಗಿದ್ದಾರೆ. ಹಿಂದೆಂದೂ ನೋಡದ ಹೂಗಳನ್ನ ನೋಡಿ, ಪುಳಕಿತರಾಗಿದ್ದು, ಸೆಲ್ಫಿಗೆ ಪೋಸ್ ನೀಡಿದ್ದಾರೆ.
ಬೆಂಗಳೂರು, ಆಗಸ್ಟ್ 06: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್ ಬಾಗ್ನಲ್ಲಿ ಆಯೋಜಿಸಿರುವ ಫ್ಲವರ್ ಶೋ (Lalbagh flower show) ಝಗಮಗಿಸುತ್ತಿದೆ. ಫಲಪುಷ್ಟ ಪ್ರದರ್ಶನ ನೋಡೋದಕ್ಕೆ ಸಿಟಿ ಜನರು ಮುಗಿಬೀಳುತ್ತಿದ್ದಾರೆ. ಕುಟುಂಬ ಸಮೇತರಾಗಿ ಬರುತ್ತಿರುವ ಜನ ಬಗೆ ಬಗೆಯ ಹೂವುಗಳ ಕಣ್ತುಂಬಿಕೊಳ್ಳುತ್ತಿದ್ದಾರೆ. ಇಂದು ಭಾನುವಾರ ಆಗಿರುವುದರಿಂದ ಹೆಚ್ಚು ಜನರು ಲಾಲ್ಬಾಗ್ನತ್ತ ಆಗಮಿಸಿದ್ದಾರೆ. ಶಾಲೆಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ, ಶಾಲಾ ಮಕ್ಕಳು ಸಹ ಫ್ಲವರ್ ಶೋವನ್ನ ಆನಂದಿಸಿದ್ದಾರೆ. ಹಿಂದೆಂದೂ ನೋಡದ ಹೂಗಳನ್ನ ನೋಡಿ, ಪುಳಕಿತರಾಗಿದ್ದು, ಸೆಲ್ಫಿಗೆ ಪೋಸ್ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos