Kannada News Videos Arjun Guruji talks about Darshan case and his prediction Entertainment News in Kannada mdn
ನಟ ದರ್ಶನ್ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು
ರೇಣುಕಾ ಸ್ವಾಮಿ ಹತ್ಯೆ ಕೇಸ್ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಅವರಿಗೆ ಈಗ ಜಾಮೀನು ಸಿಕ್ಕಿದೆ. ಆ ಬಗ್ಗೆ ಅರ್ಜುನ್ ಗುರೂಜಿ ಅವರು ಈ ಮೊದಲೇ ಭವಿಷ್ಯ ನುಡಿದಿದ್ದರು. ಆ ಭವಿಷ್ಯವಾಣಿ ನಿಜ ಆಗಿರುವ ಬಗ್ಗೆ ಅರ್ಜುನ್ ಗುರೂಜಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ಕೆಲವು ಮುಖ್ಯವಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ನಟ ದರ್ಶನ್ಕುರಿತು ಈ ಮೊದಲು ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ಈಗ ವೈರಲ್ ಆಗುತ್ತಿದೆ. ಆ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ‘ಪ್ರತಿಯೊಂದು ಕೂಡ ವೆಂಕಟಾಚಲ ಅವಧೂತರ ಪ್ರೇರಣೆ ಅಂತ ಹೇಳಲು ಇಷ್ಟಪಡುತ್ತೇನೆ. ಯಾಕೆಂದರೆ, ಯಾವುದೇ ಭವಿಷ್ಯವನ್ನು ಸುಮ್ಮನೆ ಕೊಡೋಕೆ ಆಗಲ್ಲ. ಪ್ರೇರಣೆ ಪ್ರಕಾರವಾಗಿಯೇ ನಾನು ಅಂದು ಮಾಧ್ಯಮಗಳಿಗೆ ಹೇಳಿದ್ದೆ. 20ನೇ ತಾರೀಕು ಕಳೆದ ಮೇಲೆ ನೋಡಿ ಅಂತ ನಾನು ಹೇಳಿದ್ದೆ. ಹಾಗೆಯೇ ಆಯಿತು’ ಎಂದಿದ್ದಾರೆ ಅರ್ಜುನ್ ಗುರೂಜಿ.