
[lazy-load-videos-and-sticky-control id=”kchsXlb2-Zg”]
ಬೆಂಗಳೂರು: ನಗರದಲ್ಲಿ ಡಾ.ಅಬ್ದುರ್ ರೆಹಮಾನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೆ ರೋಚಕ ಮಾಹಿತಿ ಹೊರಬೀಳುತ್ತಲೇ ಇದೆ. ಇದೀಗ, ತನ್ನ ಸಹಚರರರೊಂದಿಗೆ ರಹಸ್ಯ ಮಾತುಕತೆ ನಡೆಸಲು ಡಾ.ಅಬ್ದುರ್ ರೆಹಮಾನ್ ಥ್ರಿಮಾ ಎಂಬ ಆ್ಯಪ್ ಬಳಕೆ ಮಾಡುತ್ತಿದ್ದ ಎಂಬುದರ ಬಗ್ಗೆ ಮಾಹಿತಿ ದೊರೆತಿದೆ.
ISIS ಉಗ್ರರಿಗೆ ವೈದ್ಯಕೀಯ ಸೇವೆ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಗಾಗಿ ನಡೆಸಬೇಕಾದ ರಹಸ್ಯ ಮಾತುಕತೆಗೆ ಈ ನೂತನ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದ. ತನಿಖಾ ಸಂಸ್ಥೆಗಳಿಗೆ ಸಿಕ್ಕಿಬೀಳುವ ಆತಂಕದಲ್ಲಿ ಆನ್ಲೈನ್ನಲ್ಲಿ ಲಭ್ಯವಾಗುವ ಹೊಸ-ಹೊಸ ಆ್ಯಪ್ಗಳ ಬಳಕೆ ಮಾಡುತ್ತಿದ್ದ.
ಇದಲ್ಲದೆ, ISIS ಉಗ್ರರಿಂದ ಥ್ರಿಮಾ ಐಡಿ ಪಡೆದಿದ್ದ ಕಾಶ್ಮೀರ ದಂಪತಿ ಜಹಾನ್ ಝೈಬ್ ಸಾಮಿ ವಾನಿ, ಪತ್ನಿ ಹೀನಾ ಶೀರ್ ಬೇಗ್ ಸಿರಿಯಾದಿಂದ ಭಾರತಕ್ಕೆ ಬಂದ ಬಳಿಕ ಇದೇ ಐಡಿ ಬಳಸುತ್ತಿದ್ದರು. ಐಡಿ ಬಳಸಿ ಜಹಾನ್ ಝೈಬ್ ದಂಪತಿ ಜೊತೆಗೆ ಸಹ ಅಬ್ದುರ್ ರೆಹಮಾನ್ ಸಂಪರ್ಕ ಸಾಧಿಸಿದ್ದ ಎಂದು NIA ವಿಚಾರಣೆ ವೇಳೆ ಮಾಹಿತಿ ದೊರೆತಿದೆ.
Published On - 7:43 am, Sat, 29 August 20