‘ಕಲಾವಿದರನ್ನು ದೇವರನ್ನಾಗಿ ಮಾಡಬೇಡಿ’; ಪ್ರಥಮ್ ಕಳಕಳಿಯ ಮನವಿ

|

Updated on: Apr 22, 2024 | 8:29 AM

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಕೊಲೆ ಪ್ರಕರಣ ಸಂಚಲನ ಮೂಡಿಸಿದೆ. ಈ ಪ್ರಕರಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ವಿಚಾರದಲ್ಲಿ ಧ್ವನಿ ಎತ್ತಿದ್ದಾರೆ. ಈಗ ಪ್ರಥಮ್ ಈ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ (Neha Hiremath) ಕೊಲೆ ಪ್ರಕರಣ ಸಂಚಲನ ಮೂಡಿಸಿದೆ. ಈ ಪ್ರಕರಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ವಿಚಾರದಲ್ಲಿ ಧ್ವನಿ ಎತ್ತಿದ್ದಾರೆ. ಈ ಮಧ್ಯೆ ನಟ ಪ್ರಥಮ್ ಅವರು ಈ ಪ್ರಕರಣದಲ್ಲಿ ಕಳಕಳಿಯ ಮನವಿ ಒಂದನ್ನು ಮಾಡಿಕೊಂಡಿದ್ದಾರೆ. ಸೆಲೆಬ್ರಿಟಿಗಳನ್ನು ದೇವರನ್ನಾಗಿ ಮಾಡಬೇಡಿ ಎಂದು ಅವರು ಕೋರಿದ್ದಾರೆ. ‘ನಾನು ನಟ ದೇವರಲ್ಲ. ಕಲಾವಿದರು ಕಲಾವಿದರಾಗಿರಬೇಕು. ಕಲಾವಿದರನ್ನು ದೇವರಾಗಿ ಮಾಡಬೇಡಿ’ ಎಂದಿದ್ದಾರೆ ಪ್ರಥಮ್. ‘ನೋವಾಗಿತ್ತು ಬಂದು ಧ್ವನಿ ಎತ್ತಿದ್ದೇನೆ. ಮಾಧ್ಯಮ, ಸರ್ಕಾರ’ ಇದರಲ್ಲಿ ನ್ಯಾಯ ಒದಗಿಸಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.