ಬಡವರಿಗೆ ನೀಡುವ ಅಕ್ಕಿಗೆ ಕನ್ನಹಾಕಬೇಡಿ ಅಂತ ಯಡಿಯೂರಪ್ಪಗೆ ವಿಧಾನಸಭೆಯಲ್ಲಿ ಹೇಳಿದ್ದೆ: ಸಿದ್ದರಾಮಯ್ಯ, ಸಿಎಂ

ಬಡವರಿಗೆ ನೀಡುವ ಅಕ್ಕಿಗೆ ಕನ್ನಹಾಕಬೇಡಿ ಅಂತ ಯಡಿಯೂರಪ್ಪಗೆ ವಿಧಾನಸಭೆಯಲ್ಲಿ ಹೇಳಿದ್ದೆ: ಸಿದ್ದರಾಮಯ್ಯ, ಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 22, 2024 | 10:58 AM

2023 ರಲ್ಲಿ ತಮ್ಮ ಸರ್ಕಾರ ಆಧಿಕಾರಕ್ಕೆ ಬಂದಾಗ ಜನಕ್ಕೆ ನೀಡಿದ ಭರವಸೆಯಂತೆ 10 ಕೇಜಿ ನೀಡಲು ಮುಂದಾದಾಗ ಹಣ ಕೊಡುತ್ತ್ತೇವೆಂದರೂ ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ. 5 ಕೇಜಿ ಅಕ್ಕಿಯ ಬದಲು ತಮ್ಮ ಸರ್ಕಾರ ಜನರಿಗೆ ಹಣ ನೀಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. 10 ಕೇಜಿ ಅಕ್ಕಿ ಕೊಟ್ಟರೆ ಜನರೆಲ್ಲ ಸಿದ್ದರಾಮಯ್ಯನ ಕಡೆ ಆಗಿಬಿಡುತ್ತಾರೆ ಎಂಬ ಒಂದೇ ಕಾರಣಕ್ಕೆ ಬಿಜೆಪಿಯವರು ಬಡವರಿಗೆ ಅಕ್ಕಿ ಸಿಗದಂತೆ ಮಾಡಿದರು ಎಂದು ಸಿದ್ದರಾಮಯ್ಯ ಹೇಳಿದರು.

ಆನೇಕಲ್: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ಭಾಷಣ ಮಾಡುವಾಗ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಟಾರ್ಗೆಟ್ ಮಾಡಿದರು. ಮೊದಲು ಬೆಚ್ ಡಿ ದೇವೇಗೌಡರ (HD Devegowda) ಕುಟುಂಬ ರಾಜಕಾರಣವನ್ನು ಗೇಲಿ ಮಾಡಿದ ಅವರು ನಂತರ ಬಿಎಸ್ ಯಡಿಯೂರಪ್ಪ ( BS Yediyurappa) ರಾಜ್ಯದ ಬಡವರಿಗೆ ಮೋಸ ಮಾಡಿದರು ಎಂದರು. ಆಪರೇಶನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ಯಡಿಯೂರಪ್ಪನರು ಕಾಂಗ್ರೆಸ್ ಸರ್ಕಾರ ನೀಡುತ್ತಿದ್ದ 7 ಕೇಜಿ ಅಕ್ಕಿಯನ್ನು 5 ಕೇಜಿಗಿಳಿಸಿದರು. ತಾನು ಯಡಿಯೂರಪ್ಪನವರಿಗೆ ವಿಧಾನ ಸಭೆಯಲ್ಲಿ 7 ಕೇಜಿ ಅಕ್ಕಿ ಕೊಟ್ಟರೆ ನಿಮ್ಮಪ್ಪನ ಗಂಟೇನೂ ಹೋಗಲ್ಲ, ಬಡವರ ಅಕ್ಕಿಗೆ ಕನ್ನ ಹಾಕಬೇಡಿ ಅಂತ ಹೇಳಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು. 2023 ರಲ್ಲಿ ತಮ್ಮ ಸರ್ಕಾರ ಆಧಿಕಾರಕ್ಕೆ ಬಂದಾಗ ಜನಕ್ಕೆ ನೀಡಿದ ಭರವಸೆಯಂತೆ 10 ಕೇಜಿ ನೀಡಲು ಮುಂದಾದಾಗ ಹಣ ಕೊಡುತ್ತ್ತೇವೆಂದರೂ ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ. 5 ಕೇಜಿ ಅಕ್ಕಿಯ ಬದಲು ತಮ್ಮ ಸರ್ಕಾರ ಜನರಿಗೆ ಹಣ ನೀಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. 10 ಕೇಜಿ ಅಕ್ಕಿ ಕೊಟ್ಟರೆ ಜನರೆಲ್ಲ ಸಿದ್ದರಾಮಯ್ಯನ ಕಡೆ ಆಗಿಬಿಡುತ್ತಾರೆ ಎಂಬ ಒಂದೇ ಕಾರಣಕ್ಕೆ ಬಿಜೆಪಿಯವರು ಬಡವರಿಗೆ ಅಕ್ಕಿ ಸಿಗದಂತೆ ಮಾಡಿದರು ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕೋಲಾರ ಮೀಸಲು ಕ್ಷೇತ್ರವಾಗಿರದಿದ್ದರೆ ದೇವೇಗೌಡ ಇನ್ನೊಬ್ಬ ಮೊಮ್ಮಗನನ್ನೂ ಕಣಕ್ಕಿಳಿಸುತ್ತಿದ್ದರು: ಸಿದ್ದರಾಮಯ್ಯ, ಸಿಎಂ