AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಸಿ ಮಾಧುಸ್ವಾಮಿ ಪಯಣಿಸುತ್ತಿದ್ದ ಕಾರು ಕಡೂರು ಬಳಿ ಅಪಘಾತ, ಗಾಯಗಳಿಲ್ಲದೆ ಮಾಜಿ ಸಚಿವ ಪಾರು

ಜೆಸಿ ಮಾಧುಸ್ವಾಮಿ ಪಯಣಿಸುತ್ತಿದ್ದ ಕಾರು ಕಡೂರು ಬಳಿ ಅಪಘಾತ, ಗಾಯಗಳಿಲ್ಲದೆ ಮಾಜಿ ಸಚಿವ ಪಾರು

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 22, 2024 | 12:29 PM

Share

ಕೆಲ ತಿಂಗಳುಗಳಿಂದ ಮಾಧುಸ್ವಾಮಿಯವರ ರಾಜಕೀಯ ಬದುಕಿನಲ್ಲಿ ಹಿತಕರವೆನಿಸುವ ಸಂಗತಿಗಳು ಸಂಭವಿಸುತ್ತಿಲ್ಲ. ಮೊದಲಿಗೆ ಅವರು ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಅನುಭವಿಸಿದರು. ಲೋಕಸಭಾ ಚುನಾವಣೆಯಲ್ಲಿ ಅವರು ತುಮಕೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ವರಿಷ್ಠರು, ವಿ ಸೋಮಣ್ಣ ಅವರಿಗೆ ಟಿಕೆಟ್ ನೀಡಿದರು.

ಚಿಕ್ಕಮಗಳೂರು: ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಜೆಸಿ ಮಾಧುಸ್ವಾಮಿ (JC Madhu Swamy) ಪ್ರಯಾಣಿಸುತ್ತಿದ್ದ ಕಾರು ಅಪಘತಕ್ಕೀಡಾಗಿದ್ದು ಅವರಿಗೆ ಗಾಯಗಳೇನೂ ಆಗಿಲ್ಲ. ಟಿವಿ9 ಚಿಕ್ಕಮಗಳೂರು ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ ಮಾಧುಸ್ವಾಮಿಯವರ ಕಾರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನಲ್ಲಿರುವ ಹೇಮಗಿರಿ ಗೇಟ್ (Hemagiri gate) ಬಳಿ ಗುಜರಿ ಆಟೋವೊಂದಕ್ಕೆ ಗುದ್ದಿದ್ದು ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವನಿಗೆ ಕಡೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಮಾಧುಸ್ವಾಮಿ ಅವರ ಕಾರು ಹೆಚ್ಚು ಜಖಂಗೊಂಡಿಲ್ಲ. ವಾಹನದ ಎಡಭಾಗದಲ್ಲಿ ತರಚಿದ ಗುರುತುಗಳನ್ನು ನೋಡಬಹುದು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ (Prajwal Revanna) ಅವರ ಪರ ಬಿರೂರುನಲ್ಲಿ ಪ್ರಚಾರ ಮಾಡಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೆಲ ತಿಂಗಳುಗಳಿಂದ ಮಾಧುಸ್ವಾಮಿಯವರ ರಾಜಕೀಯ ಬದುಕಿನಲ್ಲಿ ಹಿತಕರವೆನಿಸುವ ಸಂಗತಿಗಳು ಸಂಭವಿಸುತ್ತಿಲ್ಲ. ಮೊದಲಿಗೆ ಅವರು ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಅನುಭವಿಸಿದರು. ಲೋಕಸಭಾ ಚುನಾವಣೆಯಲ್ಲಿ ಅವರು ತುಮಕೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ವರಿಷ್ಠರು, ವಿ ಸೋಮಣ್ಣ ಅವರಿಗೆ ಟಿಕೆಟ್ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಉಚಿತ ಭಾಗ್ಯದ ಮುಂದೆ ಅಭಿವೃದ್ಧಿ ಕೆಲಸ ಕೊಚ್ಚಿಕೊಂಡು ಹೋಯ್ತು: ಸೋಲಿನ ಬಳಿಕ ಮೊದಲ ಬಾರಿಗೆ ಮೌನ ಮುರಿದ ಮಾಧುಸ್ವಾಮಿ