AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಧುಸ್ವಾಮಿ ಮುನಿಸು: ಭಿನ್ನಮತ ಶಮನಕ್ಕೆ ವಿ.ಸೋಮಣ್ಣ ಕಸರತ್ತು; ಸೊಗಡು ಶಿವಣ್ಣ ನಿವಾಸಕ್ಕೆ ಭೇಟಿ

ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಕರ್ನಾಟಕದಲ್ಲಿ ಭಿನ್ನಮತ, ಮುನಿಸು ಸ್ಫೋಟಗೊಂಡಿದ್ದು, ಬಂಡಾಯದ ಬಿಸಿ ಪಕ್ಷವನ್ನು ಸುಡುತ್ತಿದೆ. ತುಮಕೂರು ಕ್ಷೇತ್ರದಲ್ಲೂ ಭಿನ್ನಮತ ಸೃಷ್ಟಿಯಾಗಿದ್ದು, ಮಾಧುಸ್ವಾಮಿ ಮುನಿಸು ಶಮನಕ್ಕೆ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ಭಾಗವಾಗಿ ಮಾಧುಸ್ವಾಮಿ ಬಣದ ಸೊಗಡು ಶಿವಣ್ಣ ಅವರನ್ನು ಭೇಟಿಯಾಗಿದ್ದಾರೆ.

ಮಾಧುಸ್ವಾಮಿ ಮುನಿಸು: ಭಿನ್ನಮತ ಶಮನಕ್ಕೆ ವಿ.ಸೋಮಣ್ಣ ಕಸರತ್ತು; ಸೊಗಡು ಶಿವಣ್ಣ ನಿವಾಸಕ್ಕೆ ಭೇಟಿ
ತುಮಕೂರಿನಲ್ಲಿ ಭಿನ್ನಮತ ಶಮನಕ್ಕೆ ವಿ.ಸೋಮಣ್ಣ ಕಸರತ್ತು; ಸೊಗಡು ಶಿವಣ್ಣ ನಿವಾಸಕ್ಕೆ ಸೋಮಣ್ಣ ಭೇಟಿ
ಮಹೇಶ್ ಇ, ಭೂಮನಹಳ್ಳಿ
| Updated By: Rakesh Nayak Manchi|

Updated on: Mar 19, 2024 | 10:36 PM

Share

ತುಮಕೂರು, ಮಾ.19: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಕರ್ನಾಟಕದಲ್ಲಿ ಭಿನ್ನಮತ, ಮುನಿಸು ಸ್ಫೋಟಗೊಂಡಿದ್ದು, ಬಂಡಾಯದ ಬಿಸಿ ಪಕ್ಷವನ್ನು ಸುಡುತ್ತಿದೆ. ತುಮಕೂರು (Tumkur) ಲೋಕಸಭಾ ಕ್ಷೇತ್ರದಲ್ಲೂ ಭಿನ್ನಮತ ಸೃಷ್ಟಿಯಾಗಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಜೆಸಿ ಮಾಧುಸ್ವಾಮಿ (JC Madhuswamy) ಮುನಿಸು ಶಮನಕ್ಕೆ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ (V.Somanna) ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ಭಾಗವಾಗಿ ಮಾಧುಸ್ವಾಮಿ ಬಣದ ಸೊಗಡು ಶಿವಣ್ಣ (Sogadu Shivanna) ಅವರನ್ನು ಭೇಟಿಯಾಗಿದ್ದಾರೆ.

ಭಿನ್ನಮತ ಶಮನಕ್ಕೆ ಹಗಲು ರಾತ್ರಿ ಕಸರತ್ತು ನಡೆಸುತ್ತಿರುವ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಮಾಜಿ ಸಚಿವ ಸೊಗಡು ಶಿವಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಮಾಧುಸ್ವಾಮಿ ಬಣದಲ್ಲಿ‌ ಗುರುತಿಸಿಕೊಂಡಿರುವ ಸೊಗಡು ಶಿವಣ್ಣ ಅವರು ಸಂಸದ ಜಿ.ಎಸ್ ಬಸವರಾಜು ಅವರ ಬದ್ಧವೈರಿಯಾಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೊಗಡು ಶಿವಣ್ಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಾಗೂ ಮನವೊಲಿಕೆ ಮಾಡುವ ನಿಟ್ಟಿನಲ್ಲಿ ಸೋಮಣ್ಣ ಅವರು, ಚಿಕ್ಕಪೇಟೆಯ ಸೊಗಡು ಶಿವಣ್ಣ ಮನೆಗೆ ಭೇಟಿ ನೀಡಿದ್ದಾರೆ. ಮಾತುಕತೆ ವೇಳೆ, ತಮ್ಮ ಪರ ಕೆಲಸ ಮಾಡುವಂತೆ ಸೋಮಣ್ಣ ಅವರು ಮನವಿ ಮಾಡಿದ್ದಾರೆ.

ಬಳಿಕ ಮಾತನಾಡಿದ ವಿ ಸೋಮಣ್ಣ, ಕೆಲವು ಕಾರಣಗಳಿಂದ ನಾನು ಕೂಡ ಕೆಲವಾರು ತಪ್ಪುಗಳನ್ನು ಮಾಡಿ ಒದ್ದಾಡುತ್ತಿರುತ್ತೇವೆ. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಅಥವಾ ನೋವಾದರೆ ಸಹಿಸಲ್ಲ ಅನ್ನೋ ಸಂದೇಶ ಕೊಟ್ಟಿದ್ದಾರೆ. ಈ ಕುಟುಂಬಕ್ಕೂ ನಮಗೂ ಅವಿನಾಭಾವ ಸಂಬಂಧ ಇದೆ. ಹತ್ತಾರು ಕಾರ್ಯಕ್ರಮಗಳನ್ನ ನಾನು ಮತ್ತು ಸೊಗಡು ಶಿವಣ್ಣ ಅವರು ಒಟ್ಟಾಗಿ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಅಸಮಾಧಾನ ಸ್ಫೋಟ: ಎಲ್ಲೆಲ್ಲಿ ಯಾರಿಂದ ಬಂಡಾಯ? ಇಲ್ಲಿದೆ ವಿವರ

ಸ್ವಲ್ಪ ಯಡವಟ್ಟಾದರೆ, ಸಣ್ಣದು ಕೂಡ ದೊಡ್ಡ ಅಸ್ತ್ರ ಆಗುತ್ತೆ ಅನ್ನೋದಕ್ಕೆ ಕೆಲವಾರು ಉದಾಹರಣೆಗಳನ್ನು ನೋಡಿದ್ದೇವೆ. ನಾವು ಸ್ವಲ್ಪ ಎಚ್ಚೆತ್ತುಕೊಂಡಿದ್ದೇವೆ, ಶಿವಣ್ಣನವರು ಸ್ವಾಭಿಮಾನ ಬೆಳಸಿಕೊಂಡಿದ್ದಾರೆ. ಮಾನಸಿಕ ತೋಳಲಾಟ ತಾಳಲಾರದೆ ಚುನಾವಣೆಗೆ ನಿಂತರು. ನನ್ನ ಸಂಪರ್ಕದಲ್ಲಿ ಇರುವ ರಾಷ್ಟ್ರೀಯ ನಾಯಕರಿಗೆ ಎಲ್ಲಾವನ್ನು ಹೇಳಿದ್ದೇನೆ. ಅವರ ಸ್ನೇಹಿತರ ಜೊತೆಗೆ ಸೇರಿ ಶಿವಣ್ಣ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ. ವೈಯಕ್ತಿಕವಾಗಿ ಹಾಗೂ ಸಾಯೋತನಕ ಅವರ ಜೊತೆಗೆ‌ ಇರುತ್ತೇನೆ ಎಂದರು.

ರಾಜಕಾರಣ ಮುಳ್ಳಿನ ಹಾಸಿಗೆ. ಯಾರು ಶತ್ರುಗಳಲ್ಲ, ಮಿತ್ರರಲ್ಲ, ರಾಜಕೀಯ ನಿಂತ ನೀರಲ್ಲ. ಒಬ್ಬರ ಮನಸು ಮತ್ತೊಬ್ಬರ ಮನಸು ಒಂದಾಗಬೇಕು ಎಂದು ತುಮಕೂರಿನಲ್ಲಿ ಸೋಮಣ್ಣ ಹೇಳಿದರು.

ಕೈತಪ್ಪಿದ ಟಿಕೆಟ್; ಯಡಿಯೂರಪ್ಪ ಮೇಲೆ ಮಾಧುಸ್ವಾಮಿ ಗರಂ

ತುಮಕೂರು ಲೋಕಸಭಾ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಮಾಧುಸ್ವಾಮಿ ಅವರಿಗೆ ಟಿಕೆಟ್ ಕೈತಪ್ಪಿದೆ. ಕ್ಷೇತ್ರದಲ್ಲಿ ಸೋಮಣ್ಣ ಅವರಿಗೆ ಮಣೆ ಹಾಕಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಮಾಧುಸ್ವಾಮಿ, ಯಡಿಯೂರಪ್ಪ ವಿರುದ್ಧ ಗರಂ ಆಗಿದ್ದಾರೆ. ನಂಬಿಸಿ ಕೈಬಿಟ್ಟ ಯಡಿಯೂರಪ್ಪ ಮೇಲೆ ನಮಗೆ ಬೇಸರವಿದೆ ಎಂದು ಬಹಿರಂಗವಾಗಿ ಹೇಳಿದ್ದರು.

ಸೋಮಣ್ಣ ಅವಕಾಶವಾದಿ, ಅವರು ಅವಕಾಶ ಕೇಳಿದ್ದಾರೆ‌. ಸೋಮಣ್ಣ ಮೇಲೆ ನಮಗೇನು ಬೇಸರ ಇಲ್ಲ. ಆದರೆ, ನಂಬಿಸಿ ಕೈಬಿಟ್ಟ ಯಡಿಯೂರಪ್ಪ ಮೇಲೆ ನಮಗೆ ಬೇಸರವಾಗಿದೆ. ಯಾರ್ಯಾರು ನನಗೆ ಅನ್ಯಾಯ ಮಾಡಿದರು ಎಂದು ಪಕ್ಷಕ್ಕೆ 10 ಪೇಜ್ ಬರೆದುಕೊಟ್ಟವರು ಇಂದು ಅವರೇ ದೊಡ್ಡವರಾಗಿದ್ದಾರೆ. ನಿಷ್ಠಾವಂತವಾಗಿ ದುಡಿದ ನಾವು ಲೆಕ್ಕಕ್ಕಿಲ್ಲ ಅಂದರೆ ನೋವು ಆಗಲ್ವಾ? ನಾವೇನು ಪಾರ್ಲಿಮೆಂಟ್​ನಲ್ಲಿ ಕೊಡಿ, ವಿಧಾನಸಭೆಯಲ್ಲಿ ಕೊಡಿ ಎಂದು ಕೇಳಿಲ್ಲ. ಗೌರವಯುತವಾಗಿ ವರ್ತಿಸದೇ ಇದ್ದರೆ ಹೇಗೆ? ನೋವು ಬಾದಿಸುತ್ತದೆ ಅಲ್ವಾ? ಎಂದು ಬೇಸರ ವ್ಯಕ್ತಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ