ಕೋಲಾರ ಮೀಸಲು ಕ್ಷೇತ್ರವಾಗಿರದಿದ್ದರೆ ದೇವೇಗೌಡ ಇನ್ನೊಬ್ಬ ಮೊಮ್ಮಗನನ್ನೂ ಕಣಕ್ಕಿಳಿಸುತ್ತಿದ್ದರು: ಸಿದ್ದರಾಮಯ್ಯ, ಸಿಎಂ
ಕೋಲಾರ ಲೋಕಸಭಾ ಕ್ಷೇತ್ರ ಮೀಸಲಾಗಿರದಿದ್ದರೆ ಅಲ್ಲಿ ಮತ್ತೊಬ್ಬ ಮೊಮ್ಮಗನನ್ನು ಸ್ಪರ್ಧೆಗಿಳಿಸುತ್ತಿದ್ದರು ಎಂದು ಸಿದ್ದರಾಮಯ್ಯ ಗೇಲಿ ಮಾಡಿದರು. ಬಿಜೆಪಿ ಜೊತೆ ಸೇರಿರುವ ಹಿನ್ನೆಲೆಯಲ್ಲಿ ಅವರ ಪಕ್ಷದ ಹೆಸರಲ್ಲಿರುವ ಸೆಕ್ಯುಲರ್ ಪದವನ್ನು ತೆಗೆದುಹಾಕಿ ಅಂತ ಹೇಳಿದ್ದಕ್ಕೆ ಸಿದ್ದರಾಮಯ್ಯನಿಗೆ ಗರ್ವ ಜಾಸ್ತಿಯಾಗಿದೆ, ಗರ್ವಭಂಗ ಮಾಡ್ತೀನಿ ಅಂತ ಶಪಥ ಮಾಡಿದ್ದಾರೆ ಎಂದು ಸಿಎಂ ನಗುತ್ತಾ ಹೇಳಿದರು.
ಆನೇಕಲ್: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಆನೇಕಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಿನ್ನೆ ಪ್ರಚಾರ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ (HD Devegowda) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೆಡಿಎಸ್ ಪಕ್ಷದ ಅಸ್ತಿತ್ವದ ಜೊತೆ ತಮ್ಮ ಕುಟುಂಬದ ಅಸ್ತಿತ್ವವನ್ನೂ ಉಳಿಸುವ ಪ್ರಯತ್ನದಲ್ಲಿರುವ ದೇವೇಗೌಡರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Polls) ತಮ್ಮ ಪಕ್ಷಕ್ಕೆ ಮೂರು ಸೀಟು ಕೇಳಿ ಎರಡರಲ್ಲಿ ಮಗ ಹಾಗೂ ಮೊಮ್ಮಗನನ್ನು ನಿಲ್ಲಿಸಿದ್ದಾರೆ. ತಮ್ಮ ಅಳಿಯ ಡಾ ಸಿಎನ್ ಮಂಜುನಾಥ್ ಅವರನ್ನು ಬಿಜೆಪಿಗೆ ಸೇರಿಸಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್ ಕೊಡಿಸಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರ ಮೀಸಲಾಗಿರದಿದ್ದರೆ ಅಲ್ಲಿ ಮತ್ತೊಬ್ಬ ಮೊಮ್ಮಗನನ್ನು ಸ್ಪರ್ಧೆಗಿಳಿಸುತ್ತಿದ್ದರು ಎಂದು ಸಿದ್ದರಾಮಯ್ಯ ಗೇಲಿ ಮಾಡಿದರು. ಬಿಜೆಪಿ ಜೊತೆ ಸೇರಿರುವ ಹಿನ್ನೆಲೆಯಲ್ಲಿ ಅವರ ಪಕ್ಷದ ಹೆಸರಲ್ಲಿರುವ ಸೆಕ್ಯುಲರ್ ಪದವನ್ನು ತೆಗೆದುಹಾಕಿ ಅಂತ ಹೇಳಿದ್ದಕ್ಕೆ ಸಿದ್ದರಾಮಯ್ಯನಿಗೆ ಗರ್ವ ಜಾಸ್ತಿಯಾಗಿದೆ, ಗರ್ವಭಂಗ ಮಾಡ್ತೀನಿ ಅಂತ ಶಪಥ ಮಾಡಿದ್ದಾರೆ ಎಂದು ಸಿಎಂ ನಗುತ್ತಾ ಹೇಳಿದರು. ತನ್ನಲ್ಲಿ ಗರ್ವ ಇದ್ರೆ ತಾನೆ ಅವರ ಭಂಗ ಮಾಡೋದು, ಅದೇನೋ ಹೇಳ್ತಾರಲ್ಲ, ಇದ್ದದ್ದು ಇದ್ದಂಗೆ ಹೇಳಿದರೆ ಎದ್ ಬಂದು ಎದೆಗೆ ಒದ್ರಂತೆ ಎಂಬ ಗಾದೆ ಮಾತನ್ನು ಎಂದು ಸಿದ್ದರಾಮಯ್ಯ ಉಲ್ಲೇಖಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇವೇಗೌಡರೇ ನೀವು ಮೋದಿಯವರನ್ನು ಹೊಗಳಲು ಸುಳ್ಳು ಹೇಳಿದ್ದು ಸರಿಯೇ: ಸಿದ್ದರಾಮಯ್ಯ ಪ್ರಶ್ನೆ