ಸುದೀಪ್ ಅಭಿಮಾನಿಗಳಿಂದ ಮುತ್ತಿಗೆ: ನಡೆದಿದ್ದೇನೆಂದು ವಿವರಿಸಿದ ಆರ್ಯವರ್ಧನ್ ಗುರೂಜಿ
Aryavardhan Guruji: ಮಾಜಿ ಬಿಗ್ಬಾಸ್ ಸ್ಪರ್ಧಿ, ಸ್ವಯಂ ಘೋಷಿತ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಇತ್ತೀಚೆಗಿನ ತಮ್ಮ ಸಂದರ್ಶನವೊಂದರಲ್ಲಿ ಬಿಗ್ಬಾಸ್ ರಿಯಾಲಿಟಿ ಶೋ ಹಾಗೂ ಕಿಚ್ಚ ಸುದೀಪ್ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆಂದು ಕಿಚ್ಚ ಸುದೀಪ್ ಅಭಿಮಾನಿಗಳು ಆರೋಪಿಸಿದ್ದಾರೆ.
ಮಾಜಿ ಬಿಗ್ಬಾಸ್ ಸ್ಪರ್ಧಿ (Bigg Boss), ಸ್ವಯಂ ಘೋಷಿತ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಇತ್ತೀಚೆಗಿನ ತಮ್ಮ ಸಂದರ್ಶನವೊಂದರಲ್ಲಿ ಬಿಗ್ಬಾಸ್ ರಿಯಾಲಿಟಿ ಶೋ ಹಾಗೂ ಕಿಚ್ಚ ಸುದೀಪ್ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಇಂದು (ನವೆಂಬರ್ 17) ಕಿಚ್ಚ ಸುದೀಪ್ ಅಭಿಮಾನಿಗಳು ಆರ್ಯವರ್ಧನ್ ಅವರಿಗೆ ಮುತ್ತಿಗೆ ಹಾಕಿ ಕ್ಷಮೆಗೆ ಒತ್ತಾಯಿಸಿದರು. ಬಿಗ್ಬಾಸ್ ಸೆಟ್ ಬಳಿ ಆರ್ಯವರ್ಧನ್ ಅವರನ್ನು ಕರೆದುಕೊಂಡು ಹೋಗಿದ್ದ ಅಭಿಮಾನಿಗಳು ಆ ನಂತರ ಬೇರೊಂದು ಕಡೆ ಕೂತು ಆರ್ಯವರ್ಧನ್ ಅವರೊಟ್ಟಿಗೆ ಏರಿದ ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದರು. ಆರ್ಯವರ್ಧನ್ ಸಹ ಕ್ಷಮೆ ಕೇಳಿದ್ದಾರೆ. ಇದೀಗ ಸುದೀಪ್ ಅಭಿಮಾನಿಗಳ ಬೇಡಿಕೆ ಏನಿತ್ತು? ತಾವು ನೀಡಿದ್ದ ಹೇಳಿಕೆ ಏನು ಇತ್ಯಾದಿ ವಿಷಯಗಳನ್ನು ಆರ್ಯವರ್ಧನ್ ಗುರೂಜಿ ಹೇಳಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:58 pm, Fri, 17 November 23
Latest Videos