4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ

Updated on: Dec 22, 2025 | 8:32 AM

Australia vs England: ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೂರನೇ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಆಸೀಸ್ ಪಡೆ ಆ್ಯಶಸ್ ಸರಣಿಯನ್ನು ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ತಲಾ 8 ವಿಕೆಟ್​ಗಳ ಜಯ ಸಾಧಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ 82 ರನ್​ಗಳ ಗೆಲುವು ದಾಖಲಿಸಿದೆ.

ಟೆಸ್ಟ್ ಕ್ರಿಕೆಟ್​ನ ಮದಗಜಗಳ ಕಾಳಗದಲ್ಲಿ ಮತ್ತೊಮ್ಮೆ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿಯುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ. ಈ ಬಾರಿ ಕೇವಲ 4719 ಎಸೆತಗಳಲ್ಲಿ ಆಂಗ್ಲರನ್ನು ಕಟ್ಟಿಹಾಕಲಾಗಿದೆ. ಅಂದರೆ 4719 ಎಸೆತಗಳಲ್ಲೇ ಈ ಬಾರಿಯ ಆ್ಯಶಸ್ ಸರಣಿಯ ಫಲಿತಾಂಶ ಹೊರಬಿದ್ದಿದೆ.

ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ 8 ವಿಕೆಟ್​ಗಳ ಜಯ ಸಾಧಿಸಿದ್ದ ಆಸ್ಟ್ರೇಲಿಯಾ ತಂಡವು ಮೂರನೇ ಟೆಸ್ಟ್ ಪಂದ್ಯದಲ್ಲಿ 82 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ 3-0 ಅಂತರದಿಂದ ಆ್ಯಶಸ್ ಸರಣಿಯನ್ನು ವಶಪಡಿಸಿಕೊಂಡಿದೆ.

ಈ ಮೂರು ಪಂದ್ಯಗಳಲ್ಲಿ ಆಡಲಾದ ಒಟ್ಟು ಓವರ್​ಗಳ ಸಂಖ್ಯೆ 786.3, ಅಂದರೆ 4719 ಎಸೆತಗಳಲ್ಲಿ ಸರಣಿಯ ಫಲಿತಾಂಶ ನಿರ್ಧಾರವಾಗಿದೆ.

ಶತಮಾನದ ಇತಿಹಾಸ ಹೊಂದಿರುವ ಆ್ಯಶಸ್ 5 ಪಂದ್ಯಗಳ ಸರಣಿಯ ಫಲಿತಾಂಶ ಹೀಗೆ ಅತೀ ಕಡಿಮೆ ಓವರ್​ಗಳಲ್ಲಿ ನಿರ್ಧಾರವಾಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 2001 ರಲ್ಲಿ 665.1 ಓವರ್​ಗಳಲ್ಲಿ ಮೂರು ಪಂದ್ಯಗಳು ಮುಗಿದಿತ್ತು.

ಇದೀಗ 786.3 ಓವರ್​ಗಳ ಮೂಲಕ ಆ್ಯಶಸ್ ಸರಣಿಯನ್ನು ಗೆದ್ದುಕೊಳ್ಳುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧ ಆಸೀಸ್ ಪಡೆ ಮತ್ತೊಮ್ಮೆ ಪಾರುಪತ್ಯ ಮೆರೆದಿದ್ದಾರೆ.