‘ಬಿಗ್ ಬಾಸ್ನಲ್ಲಿ ಅವಮಾನ ಆದರೆ ಅದನ್ನು ಮರೆತು ಮುಂದೆ ಹೋಗಲು ಸಾಧ್ಯವಿಲ್ಲ’; ಅಶ್ವಿನಿ ಗೌಡ ಕಣ್ಣೀರು
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಅಶ್ವಿನಿ ಗೌಡ ಅವರು ಗಮನ ಸೆಳೆಯುತ್ತಿದ್ದಾರೆ. ಅವರು ಈಗ ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆದ ನೋವನ್ನು ಮರೆತು ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೊದಲ ಕ್ಯಾಪ್ಟನ್ಸಿ ಟಾಸ್ಕ್ನ ನೀಡಲಾಗಿದೆ. ಈ ಟಾಸ್ಕ್ನಿಂದ ಸ್ಪರ್ಧಿಗಳನ್ನು ಹೊರಕ್ಕೆ ಇಡಬೇಕಿತ್ತು. ಈ ವೇಳೆ ಅನೇಕರು ಅಶ್ವಿನಿ ಅವರ ಹೆಸರನ್ನು ತೆಗೆದುಕೊಂಡರು. ಇದರಿಂದ ಅವರು ಕಣ್ಣೀರು ಹಾಕಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ಅವಮಾನ ಆದಾಗ ಅದನ್ನು ಮರೆತು ಮುಂದಕ್ಕೆ ಹೋಗಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. ‘ಕರ್ಮ ಯಾರನ್ನೂ ಬಿಡಲ್ಲ’ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
