ಪಾಕಿಸ್ತಾನ್ ಆಟಗಾರರಿಗೆ ಹ್ಯಾಂಡ್ಶೇಕ್ ನೀಡಲು ನಿರಾಕರಿಸಿದ ಭಾರತ ತಂಡ
Asian Youth Games 2025: ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡವು 86-21 ಅಂಕಗಳ ಅಂತರದಿಂದ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದಿದೆ. ಅಂದರೆ ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡ 21 ಅಂಕಗಳನ್ನು ಕಲೆಹಾಕಿದರೆ, ಭಾರತವು 86 ಅಂಕಗಳಿಸಿ ಭರ್ಜರಿ ಜಯ ಸಾಧಿಸಿದೆ.
ಕ್ರೀಡಾ ಅಂಗಳದಲ್ಲಿ ಭಾರತ ಮತ್ತು ಪಾಕಿಸ್ತಾನ್ ಆಟಗಾರರ ನಡುವಣ ಹ್ಯಾಂಡ್ಶೇಕ್ ತಿರಸ್ಕಾರ ಪರ್ವ ಮುಂದುವರೆದಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಮೂಲಕ ಶುರುವಾದ ಈ ಪರ್ವವು ಇದೀಗ ಇದೀಗ ಕಬಡ್ಡಿ ಅಂಗಳಕ್ಕೂ ಕಾಲಿಟ್ಟಿದೆ. ಬಹ್ರೇನ್‌ನಲ್ಲಿ ನಡೆದ 3ನೇ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಭಾರತದ ಕಬಡ್ಡಿ ತಂಡವು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ. ಇದೀಗ ಈ ತಿರಸ್ಕಾರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡವು 86-21 ಅಂಕಗಳ ಅಂತರದಿಂದ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದಿದೆ. ಅಂದರೆ ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡ 21 ಅಂಕಗಳನ್ನು ಕಲೆಹಾಕಿದರೆ, ಭಾರತವು 86 ಅಂಕಗಳಿಸಿ ಭರ್ಜರಿ ಜಯ ಸಾಧಿಸಿದೆ.

