ಅವಮಾನ ಮಾಡಿದ್ದಕ್ಕೆ ಪ್ರತಿಯಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಶ್ವಿನಿ ಗೌಡ
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಅಶ್ವಿನಿ ಗೌಡ ಅವರು ಈಗ ಹೊಸ ಡ್ರಾಮಾ ಆರಂಭಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಅಶ್ವಿನಿ ಗೌಡ ಅವರು ದೊಡ್ಮನೆಯಲ್ಲಿ ನಡೆದುಕೊಂಡಿದ್ದನ್ನು ಅನೇಕರು ಖಂಡಿಸಿದ್ದಾರೆ. ಇದನ್ನು ಡ್ರಾಮಾ ಎಂದು ಕರೆದಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿ ಅಶ್ವಿನಿ ಗೌಡ ಅವರು ಈ ವಾರ ಸಂಪೂರ್ಣ ಬದಲಾಗಿದ್ದಾರೆ. ಇಷ್ಟು ದಿನ ಗಟ್ಟಿಯಾಗಿ ಹೋರಾಡುತ್ತಿದ್ದ ಅವರು ಈಗ ಕಣ್ಣೀರು ಹಾಕಲು ಆರಂಭಿಸಿದ್ದಾರೆ. ಇದರ ಮಧ್ಯೆ ಅವರು ಉಪವಾಸ ಆರಂಭಿಸಿದ್ದಾರೆ. ಅವರು ಊಟ ಮಾಡುತ್ತಿಲ್ಲ. ‘ತಮಗೆ ಅವಮಾನ ಆಗಿದೆ. ನನಗೆ ನಾನೇ ಸ್ಟ್ಯಾಂಡ್ ತೆಗೆದುಕೊಳ್ಳಬೇಕು’ ಎಂದು ಅಶ್ವಿನಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

