‘ನಾನು ಮನೆಯಿಂದ ಹೋಗ್ತೀನಿ’; ಕಣ್ಣೀರು ಹಾಕುತ್ತಾ ಬಿಗ್ ಬಾಸ್ ಬಾಗಿಲು ತಟ್ಟಿದ ಅಶ್ವಿನಿ

Updated on: Nov 19, 2025 | 8:39 AM

ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಆದರೆ, ಈಗ ಅವರಿಗೆ ಸಾಕಷ್ಟು ಅವಮಾನ ಆಗುತ್ತಿದೆ. ಅವರು ಈ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಈಗ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಪ್ರಯತ್ನ ಮಾಡಿದ್ದಾರೆ .

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಅಶ್ವಿನಿ ಗೌಡ ಅವರು ನಿರಂತರವಾಗಿ ಕಣ್ಣೀರು ಹಾಕುತ್ತಿದ್ದಾರೆ. ಅವರು ಇತ್ತೀಚೆಗೆ ಸಾಕಷ್ಟು ಕುಗ್ಗಿದ್ದಾರೆ. ಆದರೂ ತಮ್ಮ ಅಹಂ ಬಿಡುತ್ತಿಲ್ಲ. ಈಗ ರಘು ಹಾಗೂ ಅಶ್ವಿನಿ ಗೌಡ ಮಧ್ಯೆ ಕಿರಿಕ್ ಆಗಿದೆ. ಕೆಲಸ ಮಾಡುವ ವಿಷಯಕ್ಕೆ ಸಂಬಂಧಿಸಿ ರಘು ಅವರು ಅಶ್ವಿನಿ ಬಳಿ ಮಾತನಾಡಿದ್ದಾರೆ. 10 ನಿಮಿಷ ಬಿಟ್ಟು ಕೆಲಸ ಮಾಡುತ್ತೇನೆ ಎಂದು ಅಶ್ವಿನಿ ಹೇಳಿದ್ದಾರೆ. ರಘು ಹಾಗೂ ಅಶ್ವಿನಿ ಜಗಳ ಆಡಿದ್ದಾರೆ. ಇದರಿಂದ ಕಣ್ಣೀರು ಹಾಕುತ್ತಾ ಬಿಗ್ ಬಾಸ್​ನಿಂದ ಹೊರ ಹೋಗುತ್ತೇನೆ ಎಂದು ಅಶ್ವಿನಿ ಹಠ ಹಿಡಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.