AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಸ್ಕ್ ಆಡುವಾಗ ಜಾನ್ವಿ ಮುಖಭಾವ ನೋಡಿ; ನಡೆಯಿತು ಹೊಡೆಯುವ ಪ್ರಯತ್ನ

ಆ್ಯಂಕರ್ ಜಾನ್ವಿ ಬಿಗ್ ಬಾಸ್ ಮನೆಯಲ್ಲಿ ಹಲವು ವಿವಾದಗಳಿಗೆ ಕಾರಣರಾಗಿದ್ದಾರೆ. ಅಶ್ವಿನಿ ಗೌಡ ಜೊತೆ ನಿಯಮ ಉಲ್ಲಂಘಿಸಿ, ನೇರ ನಾಮಿನೇಷನ್‌ಗೆ ಗುರಿಯಾಗಿದ್ದರು. ಟಾಸ್ಕ್ ವೇಳೆ ಕೋಪಗೊಂಡು, ರಾಶಿಕಾ ಅವರೊಂದಿಗೆ ಜಗಳಕ್ಕಿಳಿದರು. ಅವರನ್ನು 'ನಾಗವಲ್ಲಿ' ಹೋಲಿಕೆ ಮಾಡಲಾಗಿದೆ. ಅವರ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.

ಟಾಸ್ಕ್ ಆಡುವಾಗ ಜಾನ್ವಿ ಮುಖಭಾವ ನೋಡಿ; ನಡೆಯಿತು ಹೊಡೆಯುವ ಪ್ರಯತ್ನ
ಜಾನ್ವಿ
ರಾಜೇಶ್ ದುಗ್ಗುಮನೆ
|

Updated on:Nov 19, 2025 | 7:35 AM

Share

ಆ್ಯಂಕರ್ ಜಾನ್ವಿ ಅವರು ಬಿಗ್ ಬಾಸ್​ಗೆ (Bigg Boss) ತೆರಳಿ ಸುದ್ದಿ ಆಗುತ್ತಿದ್ದಾರೆ. ಅವರ ಬಗ್ಗೆ ನೆಗೆಟಿವ್ ಅಭಿಪ್ರಾಯ ವ್ಯಕ್ತವಾಗಿದೆ. ಅಶ್ವಿನಿ ಗೌಡ ಜೊತೆ ಸೇರಿ ಅವರು ಹಲವು ನಿಯಮಗಳನ್ನು ಬ್ರೇಕ್ ಮಾಡುತ್ತಿದ್ದಾರೆ. ಈ ಕಾರಣದಿಂದ ಸುದ್ದಿ ಆಗುತ್ತಿದ್ದಾರೆ. ಜಾನ್ವಿ ಈಗ ಟಾಸ್ಕ್ ಆಡುವಾಗ ನಡೆದುಕೊಂಡ ರೀತಿ ಚರ್ಚೆಗೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ.

ನವೆಂಬರ್ 18ರ ಎಪಿಸೋಡ್​ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ ಅನುಸಾರ ಈಜುಕೊಳದಿಂದ ನೀರನ್ನು ಬಕೆಟ್​ನಲ್ಲಿ ತೆಗೆದುಕೊಂಡು ಬಂದು ಟ್ಯಾಂಕ್ ಒಳಗೆ ಹಾಕಬೇಕಿತ್ತು. ಈ ರೀತಿ ನೀರನ್ನು ಹಾಕಲು ಪ್ರತಿ ತಂಡದಲ್ಲಿ ಇಬ್ಬರಿಗೆ ಅವಕಾಶ ನೀಡಲಾಯಿತು. ಇವರು ನೀರನ್ನು ತೆಗೆದುಕೊಂಡು ಹೋಗದಂತೆ ತಡೆಯಲು ಒಬ್ಬರನ್ನು ನಿಲ್ಲಿಸಲಾಗಿತ್ತು.

ಜಾನ್ವಿ ಹಾಗೂ ರಿಷಾ ಅವರು ನೀರು ತುಂಬುವ ಕಾಯಕದಲ್ಲಿ ನಿರತರಾಗಿದ್ದರು. ರಾಶಿಕಾ ಅವರು ಇವರು ಬರದಂತೆ ತಡೆಯಲು ಗುರಾಣಿ ರೀತಿಯ ವಸ್ತು ಹಿಡಿದು ನಿಂತಿದ್ದರು. ಈ ವೇಳೆ ಜಾನ್ವಿ ಬಕೆಟ್​ನಲ್ಲಿ ನೀರು ಹಿಡಿದು ಹೋಗದಂತೆ ತಡೆಯಲಾಯಿತು. ಇದರಿಂದ ಜಾನ್ವಿ ಸಿಟ್ಟಾದರು. ಅವರ ಮುಖದಲ್ಲಿ ಕೋಪ ಮಿತಿ ಮೀರಿತ್ತು. ಅನೇಕರು ಜಾನ್ವಿ ಅವರನ್ನು ನಾಗವಲ್ಲಿಗೆ ಹೋಲಿಕೆ ಮಾಡಿದ್ದಾರೆ. ಸಾಧಾರಣವಾಗಿದ್ದ ಅವರ ಮುಖ ಭಾವನೆ ಒಮ್ಮೆಲೇ ಬದಲಾಗಿದ್ದು ಅನೇಕರಿಗೆ ಅಚ್ಚರಿ ತಂದಿದೆ.

ಜಾನ್ವಿ ಅವರು ಆ ಬಳಿಕ ರಾಶಿಕಾ ಬಳಿ ಜಗಳಕ್ಕೆ ಇಳಿದರು. ಈ ವೇಳೆ ರಾಶಿಕಾ ಅವರು ಕೈ ತೋರಿಸಿದಾಗ ಕೈಗೆ ಹೊಡೆಯುವ ಪ್ರಯತ್ನವನ್ನು ಜಾನ್ವಿ ಮಾಡಿದರು. ಆದರೆ, ಆ ಏಟು ರಾಶಿಕಾಗೆ ಬಿದ್ದಿಲ್ಲ ಅನ್ನೋದು ಅದೃಷ್ಟ. ಈ ಮೊದಲು ರಿಷಾ ಅವರು ಗಿಲ್ಲಿಗೆ ಹೊಡೆದ ವಿಚಾರ ಸಾಕಷ್ಟು ಗಂಭೀರವಾಗಿತ್ತು. ಈಗ ಅವರು ಮತ್ತೆ ಹೊಡೆದಿದ್ದರೆ ಆ ಪ್ರಕರಣ ಮತ್ತಷ್ಟು ಗಂಭಿರತೆ ಪಡೆದುಕೊಳ್ಳುತ್ತಿತ್ತು.

ಇದನ್ನೂ ಓದಿ: ಅಣ್ಣ ಪದಕ್ಕೆ ಕಳಂಕ; ಈ ಸಂಬಂಧವನ್ನು ಬೇಕಾಬಿಟ್ಟಿ ಬಳಸಿದ ಬಿಗ್ ಬಾಸ್ ಸ್ಪರ್ಧಿಗಳು

ಜಾನ್ವಿ ಹಾಗೂ ಅಶ್ವಿನಿ ಡ್ರೆಸ್ಸಿಂಗ್ ರೂಂನಲ್ಲಿ ಮೈಕ್ ಹಾಕದೆ ಮಾತನಾಡಿದ್ದಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ಬಳಿಕ ಮತ್ತೆ ಇದೇ ತಪ್ಪನ್ನು ಮಾಡಿದ್ದರು. ಹೀಗಾಗಿ, ಬಿಗ್ ಬಾಸ್ ಇವರಿಬ್ಬರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:31 am, Wed, 19 November 25

ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!