AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿ ನಿಂದನೆ ಆರೋಪ: ‘ಕಾಮಿಡಿ ಕಿಲಾಡಿಗಳು’ ನಯನ ವಿರುದ್ಧ ದೂರು ದಾಖಲು

Comedy Kiladigalu Nayana: ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಪಡೆದ ನಟಿ ನಯನಾ ವಿರುದ್ಧ ಕಲಬುರ್ಗಿಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್​​ಐಆರ್ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ. ಅಷ್ಟಕ್ಕೂ ನಟಿ ನಯನಾ ವಿರುದ್ಧ ದೂರು ದಾಖಲಾಗಲು ಕಾರಣವೇನು? ನಟಿ ನಯನಾ ಮಾಡಿದ ತಪ್ಪಾದರೂ ಏನು? ಮಾಹಿತಿ ಇಲ್ಲಿದೆ ನೋಡಿ...

ಜಾತಿ ನಿಂದನೆ ಆರೋಪ: ‘ಕಾಮಿಡಿ ಕಿಲಾಡಿಗಳು’ ನಯನ ವಿರುದ್ಧ ದೂರು ದಾಖಲು
Nayana
ಮಂಜುನಾಥ ಸಿ.
|

Updated on:Nov 19, 2025 | 7:35 PM

Share

ಕಾಮಿಡಿ ಕಿಲಾಡಿಗಳು (Comedy Kiladigalu) ಖ್ಯಾತಿನ ನಟಿ, ಹಾಸ್ಯ ಕಲಾವಿದೆ ನಯನ ವಿರುದ್ಧ ದೂರು ದಾಖಲಾಗಿದೆ. ನಟಿ ನಯನಾ ಅವರು ದಲಿತ ನಿಂದನೆ ಮಾಡಿದ್ದಾರೆಂದು ಆರೋಪಿಸಿ ದಲಿತ ಸಂಘಟನೆಯೊಂದು ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ. ನಯನಾ ಅವರು ಕಳೆದ ತಿಂಗಳು ಚಿಟ್ ಫಂಡ್ ಮೋಸದ ಕುರಿತಾಗಿ ಮಾತನಾಡುತ್ತಾ ಬಳಸಿದ್ದ ಪದಗಳು ದಲಿತ ವಿರೋಧಿ ಮತ್ತು ಜಾತಿ ನಿಂದನಾತ್ಮಕ ಪದಗಳಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಲಬುರ್ಗಿಯಲ್ಲಿ ದಲಿತ ಸೇನೆಯ ಅಧ್ಯಕ್ಷರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆಗಿರುವುದಿಷ್ಟು, ಕಳೆದ ತಿಂಗಳು 29ರಂದು ಮೈಸೂರಿನ ಸರಸ್ವತಿಪುರದಲ್ಲಿ, ಮೈಸೂರು ಮೆಟ್ರೊ ಮಿನಿಮಿಥಿ ಚಿಟ್ ಫಂಡ್ ಅವರ ಹಗರಣ ಕುರಿತಾಗಿ ಮಾತನಾಡಿದ್ದ ನಯನಾ, ಚಿಟ್ ಫಂಡ್​​ನವರನ್ನು ನಿಂದಿಸುವ ಭರದಲ್ಲಿ ಜಾತಿ ಸೂಚಕ ಪದವೊಂದನ್ನು ಬಳಸಿದ್ದರು. ಆ ಬಳಿಕ ಅದರ ಜೊತೆಗೆ ಹೊಲಸು ಪದವನ್ನು ಸೇರಿಸಿ ಮಾತನಾಡಿದ್ದರು. ಇದೀಗ ಕಲಬುರ್ಗಿಯ ದಲಿತ ಸೇನೆ ಸಂಘಟನೆಯ ಅಧ್ಯಕ್ಷ ಮಂಜುನಾಥ ಎಂಬುವರು ನಯನಾ ವಿರುದ್ಧ ದೂರು ದಾಖಲಿಸಿದ್ದು, ನಟಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ನಯನಾ ಒಬ್ಬ ಸವರ್ಣೀಯರಾಗಿದ್ದು, ಅವರು ದಲಿತ ವಿರೋಧಿ ಮನಸ್ಥಿತಿ ಹೊಂದಿದ್ದು, ಅವರು ಆಡಿರುವ ಮಾತುಗಳಿಂದ ಇದು ಖಾತ್ರಿ ಆಗಿದೆ. ಅವರು ಆಡಿರುವ ಮಾತುಗಳಿಂದ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಹಾಗಾಗಿ ನಯನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಕೇಳಿಕೊಂಡಿದ್ದಾರೆ. ಮಂಜುನಾಥ ಅವರ ದೂರಿನ ಅನ್ವಯ ನಟಿಯ ವಿರುದ್ಧ ಅಟ್ರಾಸಿಟಿ ತಡೆ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಜಾರಿಯಲ್ಲಿದೆ.

ಇದನ್ನೂ ಓದಿ:VIDEO: ಕಟೌಟ್, ಬಿಜಿಎಂ… ಸಿನಿಮಾ ಸ್ಟೈಲ್​ನಲ್ಲಿ ಸಂಜು ಸ್ಯಾಮ್ಸನ್ ಆಗಮನ

ಈ ಹಿಂದೆ ನಟ ಉಪೇಂದ್ರ ಸಹ ತಮ್ಮ ವಿಡಿಯೋ ಒಂದರಲ್ಲಿ ಇದೇ ಪದವನ್ನು ಬಳಸಿದ್ದರು. ಆಗಲೂ ಸಹ ನಟ ಉಪೇಂದ್ರ ವಿರುದ್ಧ ಹಲವು ದಲಿತಪರ ಸಂಘಟನೆಗಳು ದೂರು ದಾಖಲಿಸಿದ್ದವು. ಉಪೇಂದ್ರ, ಗಾದೆಯ ರೀತಿ ಜಾತಿ ಸೂಚಕ ಪದವೊಂದನ್ನು ತಮ್ಮ ವಿಡಿಯೋನಲ್ಲಿ ಬಳಕೆ ಮಾಡಿದ್ದರು. ಉಪೇಂದ್ರ ವಿರುದ್ಧ ದೂರು ದಾಖಲಾದ ಜೊತೆಗೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ಸಹ ನಡೆದಿತ್ತು. ಇದೀಗ ಅದೇ ಪದವನ್ನು ನಟಿ ನಯನಾ ಸಹ ಬಳಸಿದ್ದಾರೆ. ಅವರ ವಿರುದ್ಧವೂ ದೂರು ದಾಖಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Wed, 19 November 25

ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ