Daily Devotional: ಅರುಂಧತಿ ನಕ್ಷತ್ರದ ಮಹತ್ವವೇನು ಗೊತ್ತಾ?
ವಿವಾಹದ ನಂತರ ನವವಧು-ವರರಿಗೆ ಅರುಂಧತಿ ನಕ್ಷತ್ರವನ್ನು ತೋರಿಸುವ ಪದ್ಧತಿ ಹಿಂದೂ ಸಂಪ್ರದಾಯದಲ್ಲಿದೆ. ಬ್ರಹ್ಮದೇವರ ಪುತ್ರಿ ಸಂಧ್ಯಾದೇವಿ ವಸಿಷ್ಠರ ಪತ್ನಿ ಅರುಂಧತಿಯಾಗಿ ಪರಿವರ್ತನೆಯಾದ ಕಥೆಯು ಈ ಆಚರಣೆಯ ಹಿಂದಿದೆ. ಇದು ದಂಪತಿಗಳಲ್ಲಿ ತಾಳ್ಮೆ, ಸಹನೆ, ಪ್ರೀತಿ ಮತ್ತು ವಿಶ್ವಾಸ ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತದೆ, ದೀರ್ಘಕಾಲಿಕ ದಾಂಪತ್ಯ ಜೀವನಕ್ಕೆ ಆಶೀರ್ವಾದದ ಸಂಕೇತವಾಗಿದೆ.
ಬೆಂಗಳೂರು, ನವೆಂಬರ್ 19: ನಮ್ಮ ನಿತ್ಯ ಜೀವನದ ಆಚಾರ, ವಿಚಾರ ಮತ್ತು ಸಂಪ್ರದಾಯಗಳಲ್ಲಿ ಹಲವು ವೈಜ್ಞಾನಿಕ ತತ್ವಗಳು, ಇತಿಹಾಸ ಮತ್ತು ಪುರಾಣಗಳು ಅಡಗಿವೆ. ವಿವಾಹ ಕಾರ್ಯಗಳಲ್ಲಿ ಅರುಂಧತಿ ನಕ್ಷತ್ರವನ್ನು ವಧು-ವರರಿಗೆ ತೋರಿಸುವುದು ಇಂತಹ ಒಂದು ಮಹತ್ವದ ಪದ್ಧತಿಯಾಗಿದೆ.
ವಿವಾಹ, ಮಾಂಗಲ್ಯಧಾರಣೆ ಮುಗಿದ ನಂತರ ಪುರೋಹಿತರು ನವದಂಪತಿಗಳಿಗೆ ಆಕಾಶದಲ್ಲಿ ಅರುಂಧತಿ ನಕ್ಷತ್ರವನ್ನು ತೋರಿಸುತ್ತಾರೆ. ಇದು ಬ್ರಹ್ಮದೇವರ ಪುತ್ರಿ ಸಂಧ್ಯಾ ದೇವಿಗೆ ಸಂಬಂಧಿಸಿದ ಪುರಾಣದ ಹಿನ್ನೆಲೆಯನ್ನು ಹೊಂದಿದೆ. ವಸಿಷ್ಠ ಮಹರ್ಷಿಗಳ ಆಜ್ಞೆಯಂತೆ ಅಗ್ನಿಗೆ ಆಹುತಿಯಾದ ಸಂಧ್ಯಾ, ನಂತರ ಸ್ತ್ರೀ ರೂಪ ಧರಿಸಿ ಪುನಃ ಜನ್ಮ ತಾಳುತ್ತಾಳೆ. ವಸಿಷ್ಠರ ಪರೀಕ್ಷೆಯನ್ನು ತಾಳ್ಮೆಯಿಂದ ಎದುರಿಸಿ, ಹಲವು ವರ್ಷಗಳ ಕಾಯುವಿಕೆಯ ನಂತರ ಅಂತಿಮವಾಗಿ ವಸಿಷ್ಠರ ಪತ್ನಿಯಾಗುತ್ತಾಳೆ. ಈಕೆಯ ತಾಳ್ಮೆ, ಪ್ರೀತಿ ಮತ್ತು ವಿಶ್ವಾಸಕ್ಕೆ ಮೆಚ್ಚಿದ ವಸಿಷ್ಠರು ಅರುಂಧತಿಯಾಗಿ ಆಕಾಶದಲ್ಲಿ ಸ್ಥಿರವಾಗಿರುವ ವರವನ್ನು ನೀಡುತ್ತಾರೆ.

