AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 20 November : ಇಂದು ಈ ರಾಶಿಯವರು ತಮ್ಮಂತೆ ಅನ್ಯರನ್ನೂ ಕಲ್ಪಿಸಿಕೊಳ್ಳುವರು

ದಿನ ಭವಿಷ್ಯ, 20, ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿ ಗುರುವಾರ ಅಸಭ್ಯವರ್ತನೆ, ಪುರುಷ ಪ್ರಯತ್ನ, ದಾಂಪತ್ಯದಲ್ಲಿ ಸುಖ, ಅಧ್ಯಯನದಲ್ಲಿ ಚುರುಕು, ಸೃಜನಾತ್ಮಕತೆ, ವ್ಯಾಪಾರದಲ್ಲಿ ಆತಂಕ ದೂರ, ಯೋಜನೆಯಿಂದ ಕೀರ್ತಿ ಇವೆಲ್ಲ ಇಂದಿನ ವಿಶೇಷ.

Horoscope Today 20 November : ಇಂದು ಈ ರಾಶಿಯವರು ತಮ್ಮಂತೆ ಅನ್ಯರನ್ನೂ ಕಲ್ಪಿಸಿಕೊಳ್ಳುವರು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Nov 20, 2025 | 12:12 AM

Share

ಮೇಷ ರಾಶಿ:

ಯಾವುದಾದರೂ ಕೆಲವು ಭಾವನೆಗಳು ಗಾಢವಾಗಿ ಬೇರೂರಲಿವೆ. ಆದ್ದರಿಂದ ತುರ್ತು ನಿರ್ಧಾರಗಳನ್ನು ತಪ್ಪಿಸಿ. ದುರಭ್ಯಾಸಗಳು ನಿಮಗೆ ಅಪಕೀರ್ತಿ ಕಾಣಿಸೀತು. ರಯಾವುದನ್ನೇ ಒಪ್ಪಿಕೊಳ್ಳುವುದಾದರೂ ನಿಮಗೆ ಬಲವಾದ ಕಾರಣ ಬೇಕಾಗುತ್ತದೆ. ಇಂದು ನಿಮ್ಮ ವ್ಯಾಪಾರದಲ್ಲಿ ಕಠಿಣ ಶ್ರಮವಿದ್ದೂ ಕಡಿಮೆ ಲಾಭವನ್ನು ಪಡೆಯಬೇಕಾಗುವುದು. ಇಂದಿನ ಆಗತ್ಯಕ್ಕೆ ಎಲ್ಲೂ ತೊಂದರೆಯಾಗದಂತೆ ಇರುವಿರಿ.‌ ಜವಾಬ್ದಾರಿಯು ಬಂದು ಹೊರೆಯು ಹೆಚ್ಚಾಗುವುದು. ಪುಣ್ಯಸ್ಥಳಕ್ಕೆ ಕಾರಣಾಂತರಗಳಿಂದ ಹೋಗಲಾಗದು. ಪಾಲುದಾರಿಕೆಯಲ್ಲಿ ಅಧಿಕಾರದ ಬಗ್ಗೆ ಅಸಮಾಧಾನ ಹೆಚ್ಚಾಗುವುದು. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು. ಸಂಗಾತಿಯ ಜೊತೆ ಆಪ್ತವಾದ ಮಾತುಕತೆ ಇರಲಿದೆ. ನಿಮಗೆ ಸಾಕಷ್ಟು ಸಮಯವುವ ಇಂದು ಇರಲಿದ್ದು ಏನು ಮಾಡಬೇಕೆಂದು ತಿಳಿಯದೇ ಕಾಲವನ್ನು ಕಳೆಯುವಿರಿ. ಆಧ್ಯಾತ್ಮಿಕ ಚಟುವಟಿಕೆ ಮನಃಶಾಂತಿ ತರುತ್ತದೆ. ಏನಾದರೂ ಸಹಾಯವನ್ನು ನಿಮ್ಮ ಬಳಿ ಪರಿಚಿತರು ಕೇಳಿಬರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ.

ವೃಷಭ ರಾಶಿ:

ಹೊಸ ಕಲ್ಪನೆಗಳು ಮೂಡುತ್ತವೆ. ಸೃಜನಾತ್ಮಕ ಕೆಲಸಗಳಿಗೆ ಸೂಕ್ತ ದಿನ. ಸರಿಯಾದ ಸಮಯಕ್ಕೆ ಸೂಕ್ತವಾದ ಕೆಲಸವು ಆಗಿಬಿಡುವುದು. ಯಾವುದನ್ನೇ ಪಡೆಯುವುದಿದ್ದರೂ ಸುಲಭಕ್ಕೆ ಸಿಕ್ಕುವುದಿಲ್ಲ. ಕುಟುಂಬಕ್ಕೆ ಅಗತ್ಯವಾದ ಪದಾರ್ಥಗಳನ್ನು ಖರೀದಿಸುವಿರಿ.‌ ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ನಿಮಗಾಗಿ ಕಾಯುವವರಿಗೆ ಬೇಸರ ತರಿಸಬಹುದು. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ. ಆಪ್ತ ಬಂಧುವನ್ನು ಅಕಾಲದಲ್ಲಿ ಕಳೆದುಕೊಳ್ಳುವಿರಿ. ಎಲ್ಲರೆದುರು ಮುಖಭಂಗವನ್ನು ಎದುರಿಸಿಬೇಕಾದೀತು. ವೈವಾಹಿಕ ಜೀವನದ ಕನಸು ಕಾಣುವಿರಿ. ಕುಟುಂಬದಲ್ಲಿ ನಿಮ್ಮ ವಿಷಯಕ್ಕೆ ಅಸಮ್ಮತಿ ಇರಬಹುದು. ಮಧುರ ಮಾತಿನಿಂದ ಪರಿಹಾರ ಸಾಧ್ಯ. ದೂರಾಲೋಚನೆಯು ವಾಸ್ತವಕ್ಕೆ ಹತ್ತಿರವಾಗಿ ಇಲ್ಲ.

ಮಿಥುನ ರಾಶಿ:

ಕೆಲಸದಲ್ಲಿ ದೊಡ್ಡ ಜವಾಬ್ದಾರಿಗಳು ಬರಬಹುದು. ನಿಮ್ಮ ಶಿಸ್ತು ಮತ್ತು ಸಮಾಧಾನದಿಂದ ಎಲ್ಲವೂ ನಿರರ್ಗಲವಾಗಲಿದೆ. ಸಾಲವನ್ನು ತೀರಿಸಲು ಮತ್ತೊಂದು ಸಾಲವನ್ನು ಮಾಡಬೇಕಾಗುವುದು. ಇಂದು ನೀವು ಮನೆಯ ಹಿರಿಯರಿಗೆ ಗೌರವ ತರುವ ಕಾರ್ಯವನ್ನು ಮಾಡುವಿರಿ. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಒಬ್ಬರಿಗೆ ಸಹಾಯ ಮಾಡಿದರೆ ಮತ್ತೊಬ್ಬರಿಗೆ ತೊಂದರೆ. ನೂತನ ವಾಹನದ‌ ಖರೀದಿಯನ್ನು ಮಾಡುವ ಇಚ್ಛೆಯು ಇಂದು ಪೂರ್ಣವಾಗುವುದು. ಹಿತಶತ್ರು ನಿಮ್ಮ‌ ಪತನವನ್ನೇ ನಿರೀಕ್ಷಿಸುತ್ತ ಕುಳಿತಿರುವರು.‌ ವೈವಾಹಿಕ ಜೀವನ ಆರಂಭದ ದಿನಗಳಲ್ಲಿ ಸಂತೋಷವೇ ಇರುವುದು. ಹಣಕಾಸಿನಲ್ಲಿ ಲಾಭದ ಸೂಚನೆ. ಆರೋಗ್ಯ ವಿಚಲಿತವಾಗದಂತೆ ನೋಡಿಕೊಳ್ಳಿ. ಪರಸ್ಪರ ದುಃಖವನ್ನು ಹಂಚಿಕೊಂಡು ದಂಪತಿಗಳು ಹಗುರಾಗುವುದು. ವಾಹನ ವ್ಯವಸ್ಥೆಯಿಂದ ಅನನಕೂಲವಾಗುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ:

ಸಾಹಸ ಮನೋಭಾವ ಹೆಚ್ಚಾಗುತ್ತದೆ. ಪ್ರವಾಸ ಯೋಜನೆಗಳಿಗೆ ಉತ್ತಮ. ಪಾಲುದಾರಿಕೆಯನ್ನು ಬಿಡುವ ಆಲೋಚನೆ ಬರಬಹುದು. ಪ್ರಭಾವೀ ವ್ಯಕ್ತಿಗಳ ಒಡನಾಟವನ್ನು ಯಾರ ಜೊತೆಯಾದರೂ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುವಿರಿ. ಆಭರಣ ಮುಂತಾದ ಬಹು ಮೌಲ್ಯದ ವಸ್ತುವನ್ನು ಖರೀದಿಸುವಿರಿ. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ಅಶಿಸ್ತಿನಿಂದ ಇಂದಿನ ಕೆಲಸವನ್ನು ಮಾಡಿ, ಎಲ್ಲರ ಕೋಪಕ್ಕೆ ಗುರಿಯಾಗುವಿರಿ. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು. ಬಹಳ ದಿನಗಳ ಕಳೆದ ಮೇಲೆ ತಂದೆಯ ಜೊತೆ ಮಾತನಾಡಿ ನೆಮ್ಮದಿಯು ಪಡೆಯುವಿರಿ. ನಿಮ್ಮ ದೂರ ಪ್ರಯಾಣಕ್ಕೆ ಕುಟುಂಬದಿಂದ ಒಪ್ಪಿಗೆ ಸಿಗದು. ಕೆಲಸದಲ್ಲಿ ಸ್ವಲ್ಪ ಒತ್ತಡ ಇದ್ದರೂ, ದಿನಾಂತ್ಯದಲ್ಲಿ ಸುಧಾರಣೆ. ಸಂಬಂಧಗಳಲ್ಲಿ ಸೌಹಾರ್ದ. ಇನ್ನೊಬ್ಬರ‌ ನೋವಿಗೆ ಸ್ಪಂದಿಸುವ ನಿಮ್ಮ ಗುಣವು ಮೆಚ್ಚುಗೆಯಾಗಿ ಇದೇ ಪ್ರೀತಿಗೆ ದಾರಿ ಮಾಡಿಕೊಡಬಹುದು. ನಿಮಗೆ ಸಿಕ್ಕ ವ್ಯಕ್ತಿಗಳನ್ನು ಉಳಿಸಿಕೊಳ್ಳಿ.

ಸಿಂಹ ರಾಶಿ:

ಯಾರಲ್ಲಿಯೂ ಹೇಳಿಕೊಳ್ಳದೇ ಆಂತರಿಕ ಬದಲಾವಣೆಯನ್ನು ಮಾಡಿಕೊಳ್ಳುವಿರಿ. ನಿಮ್ಮ ಮನಸ್ಸು ಆಳವಾದ ವಿಚಾರಗಳತ್ತ ತಿರುಗುತ್ತದೆ. ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲಾಗದೇ ಬೇಸರವಾವುವುದು. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು. ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಮಕ್ಕಳಿಂದ ಒಪ್ಪಿಗೆಯನ್ನು ಪಡೆಯುವಿರಿ. ಬಂಧುಗಳ ಜೊತೆ ಆಕಸ್ಮಿಕವಾಗಿ ಮನಸ್ತಾಪ ಕಾಣಿಸೀತು. ಸುಧಾರಿಸಿದ ಆರೋಗ್ಯವು ನಿಮಗೆ ಉತ್ಸಾಹವನ್ನು ಕಡಲ ಸಮಯವನ್ನು ತೆಗೆದುಕೊಂಡಿತು. ಜೀವನದ ಆಕಸ್ಮಿಕ ತಿರುವುಗಳಿಗೆ ನೀವು ಚಿಂತೆಗೆಡುವುದಿಲ್ಲ. ಹಣದ ಉಳಿತಾಯಕ್ಕೆ ಉಪಾಯದ ಅಗತ್ಯವು ಕಾಣಿಸಿಕೊಳ್ಳುವುದು. ನಿರ್ಧಾರಗಳಲ್ಲಿ ವಿಳಂಬ ಮಾಡದಿರಿ. ಕೆಲಸದಲ್ಲಿ ಹೊಸ ಅವಕಾಶಗಳ ಸುಳಿವು ಸಿಗುವುದು. ಅಧ್ಯಯನದಲ್ಲಿ ಚುರುಕುತನ ಬೇಕು. ಉದ್ಯೋಗದ ಕೆಲವು ರಹಸ್ಯಗಳನ್ನು ನೀವು ಇಂದು ತಿಳಿದುಕೊಳ್ಳುವಿರಿ. ವಿಷಯಾಸಕ್ತಿಯು ಇಂದು ಅಧಿಕವಾಗಿ ಇರುವುದು.

ಇದನ್ನೂ ಓದಿ: ವಿಭೂತಿ ನಾಮಗಳ ಧಾರಣೆಯ ಅದ್ಯಾತ್ಮಿಕ ರಹಸ್ಯವೇನು ಗೊತ್ತಾ?

ಕನ್ಯಾ ರಾಶಿ:

ಸಾಮಾಜಿಕ ಸಂಬಂಧಗಳು ಗಟ್ಟಿಯಾಗುವ ದಿನ. ಒತ್ತಡ ಇದ್ದರೂ ಕೆಲಸದಲ್ಲಿ ಉತ್ತಮ ಫಲ. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಇಂದು ನೀವು ನಿಮ್ಮ ಸುತ್ತಲಿನ ವಾತಾವರಣವನ್ನು ಆಹ್ಲಾದವೆನಿಸುವುದು. ಬೆಂಕಿಯ ಸಣ್ಣ ಕಿಡಿಯಾದರೂ ಅದು ಇರುವಲ್ಲಿಯೇ ಇರಬೇಕು. ನಿಮ್ಮ ವ್ಯವಹಾರದಲ್ಲಿ ಹೊಸ ಬದಲಾವಣೆಯನ್ನು ಮಾಡಲು ನೀವು ಯೋಚಿಸುತ್ತಿದ್ದರೆ ಯಶಸ್ವಿಯಾಗುವಿರಿ. ಉದ್ಯೋಗದಲ್ಲಿ ಯಾರದೋ ಕಾರಣಕ್ಕೆ ಅತಂತ್ರ ಸ್ಥಿತಿ ಬರಬಹುದು. ನೀವು ಅಂದುಕೊಂಡಿದ್ದು ಆಗುತ್ತಿದ್ದರೂ ಮನಸ್ಸು ಸ್ವಸ್ಥವಾಗಿ ಇರದು. ಮಕ್ಕಳ ಕಾರಣದಿಂದ‌ ನಿಮಗೆ ಕೆಟ್ಟ ಮಾತನ್ನು ಕೇಳಬೇಕಾದೀತು. ಹಣಕಾಸಿನ ವಿಚಾರದಲ್ಲಿ ಮಧ್ಯಮ ಪ್ರಗತಿ. ಸ್ನೇಹಿತರ ಜೊತೆ ಸಂತೋಷ ಕ್ಷಣ. ಕೌಶಲವನ್ನು ಎಲ್ಲರ ಮುಂದೂ ತೋರಿಸಲಾರಿರಿ. ಎಲ್ಲವನ್ನೂ ತಿಳಿದೂ ನೀವು ಸುಮ್ಮನಿರುವುದು ಇಷ್ಟವಾಗದು. ಅಧಿಕಾರಿಗಳ ವರ್ಗದಿಂದ ಗೌರವ ಸಿಗಬಹುದು.‌ ನಿಮ್ಮವರಿಗೆ ನಿಮ್ಮ ಸರಿಯಾದ ಪರಿಚಯ ಆಗದು. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ.

ತುಲಾ ರಾಶಿ:

ಇಂದು ಸಣ್ಣ ಸಣ್ಣ ವಿಚಾರಗಳು ಒಟ್ಟು ಸೇರಿ ಮನಸ್ಸನ್ನು ಭಾರ ಮಾಡಬಹುದು. ಸಾಮಾಜಿಕ ನ್ಯಾಯ ಪಡೆಯಲು ಹೋರಾಟ ಮಾಡಬೇಕಾಗುವುದು. ಮುಂದೆ ಬರುವ ಅವಕಾಶಕ್ಕೆ ಈಗಲೇ ಉದ್ಯೋಗವನ್ನು ಕೈಚೆಲ್ಲಿ ಕುಳಿತಿರುವುದು ಮೂರ್ಖತನವಾದೊಇತು. ವ್ಯಾವಹಾರಿಕ ಒಪ್ಪಂದವು ಕೊನೆಯ ಹಂತದಲ್ಲಿ ಇದ್ದು ಕೆಲವು ಅಸಮಾಧಾನಕರ ಮಾತನ್ನು ಕೇಳಬೇಕಾದೀತು. ನ್ಯಾಯಾಲಯದ ಮಾತಿಗೆ ನೀವು ತಲೆ ಬಾಗುವಿರಿ. ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ. ಆರ್ಥಿಕತೆಯಲ್ಲಿ ಸಬಲರಾಗಿರುವುದು ಸಂತೋಷವನ್ನು ಇಮ್ಮಡಿ ಮಾಡೀತು. ಯೋಜನೆಯ ಅನುಸರಣೆ ನಿಮಗೆ ಯಶಸ್ಸು ತರಲಿದೆ. ಹಿರಿಯರೊಂದಿಗೆ ಮಾತುಕತೆಯಲ್ಲಿ ಲಾಭ. ಇಂದು ನೀವು ಸಂಗಾತಿಗೆ ಉಡುಗೊರೆಯನ್ನು ಕೊಟ್ಟು ಸಿಟ್ಟನ್ನು ಕಡಿಮೆ‌ ಮಾಡಿಸುವಿರಿ. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಿ ಸಂಧಾನಕ್ಕೆ ಬರಬಹುದು. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಆಸಕ್ತಿಯು ಹೆಚ್ಚಾಗಿ ಅಭ್ಯಾಸವು ನಿಲ್ಲುವುದು.

ವೃಶ್ಚಿಕ ರಾಶಿ:

ಧೈರ್ಯ, ಉತ್ಸಾಹ ಎರಡೂ ನಿಮ್ಮ ಕ್ರಿಯಾಶೀಲರನ್ನಾಗಿ ಮಾಡುವುದು. ನಾಯಕತ್ವ ಸಮಾಜಕ್ಕೆ ತೋರಿಸುವ ದಿನ. ಎಲ್ಲವನ್ನೂ ನಿಮ್ಮ ನೇರಕ್ಕೆ ತರುವುದು ಕಷ್ಟವಸದೀತು. ಸುಪ್ತಪ್ರಜ್ಞೆಯು ಮುಂದಾಗುವುದನ್ನು ತಿಳಿಸುವುದು. ಉದ್ವೇಗದ ಸಂದರ್ಭದಲ್ಲಿ ಕಳವಳಗೊಂಡರೆ ಇನ್ನಷ್ಟು ಅಧ್ವಾನವಾಗಬಹುದು. ಇಂದು ನೀವು ಕೆಲಸವನ್ನು ಮಾಡಲು ಪ್ರಯತ್ನಿಸಿದರೂ ಪೂರ್ಣವಾಗದು. ಇಂದು ನಿಮಗೆ ಅತ್ಯಂತ ಪ್ರಿಯವಾದ ಕೆಲಸವನ್ನು ಮಾಡುವುದು ಬೇಡ. ನೀವು ಇತರರಿಂದ ಗೌರವಕ್ಕೆ ಪಾತ್ರರಾಗುವಿರಿ. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ಕಾರ್ಯದ ಹಂಚಿಕೆಯಿಂದ ಕೆಲಸವು ಸುಲಭವಾಗಬಹುದು. ಅಹಂಕಾರ ಬೇಡ, ಅದು ನಿಮ್ಮ ಅವಕಾಶದ ತಿಂದುಹಾಕುವುದು. ಹಣಕಾಸಿನಲ್ಲಿ ಸಾಧಾರಣ ಲಾಭ. ನಿಮ್ಮ ಆಕ್ಷೇಪಗಳು ಹಲವು ಸುಳ್ಳಿನಿಂದ ಇರಲಿದೆ. ನಿಮ್ಮ ಸಂಶೋಧನೆಗೆ ನಿರ್ದಿಷ್ಟ ಗುರಿಯ ಅವಶ್ಯಕತೆ ಇರಲಿದೆ. ಆಸ್ತಿಯ ವಿಚಾರವಾಗಿ ತಂದೆಯ ಕಡೆಯಿಂದ ನಿಮಗೆ ಸಿಂಹಪಾಲು ಸಿಗುವುದು.

ಧನು ರಾಶಿ:

ಭಾವನಾತ್ಮಕ ಏರಿಳಿತಗಳು ಇರಬಹುದು. ಮೌನವೇ ಉತ್ತಮ ಪರಿಹಾರವಾಗುವ ಸಂದರ್ಭಗಳು ಎದುರಾಗುತ್ತವೆ. ಹಿಂದೆ ಮಾಡಿದ ಖರ್ಚಿನ ತಪ್ಪಿಗೆ ಇಂದು ತಿಳಿವಳಿಕೆ ಬರಬಹುದು. ನಿಮಗೆ ನಿಮ್ಮ ಹಳೆಯ ಜವಾಬ್ದಾರಿಯ ಪದವಿಯೇ ಸಿಗಲಿದೆ. ಒತ್ತಡದಿಂದ ಹೊರಬರಲು ಮಾರ್ಗವು ಸಿಗಲಿದೆ. ಇಂದು ನಿಮ್ಮ ಸಂಗಾತಿಯನ್ನು ಖರೀದಿಗೆ ಕರೆದೊಯ್ಯುವಿರಿ. ಯಾರೋ ಮಾಡಿದ ಸಾಲವು ನಿಮಗೆ ಶೂಲವಾಗಬಹುದು. ನೀವು ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ಕೆಲವು ಮಾಹಿತಿಯನ್ನು ಪಡೆದುಕೊಳ್ಳುವಿರಿ.‌ ಹೆಣ್ಣು ಮಕ್ಕಳು ತಾಯಿಯಿಂದ ಲಾಭವನ್ನು ಪಡೆಯುವರು. ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹೆಚ್ಚಾದೀತು. ಕೆಲಸದಲ್ಲಿ ಗಮನ ಬೇಕು. ಮನೆಯಲ್ಲಿ ಆಧ್ಯಾತ್ಮಿಕತೆ ಬೆಳೆಸುವ ಪ್ರಯತ್ನ ಮಾಡುವಿರಿ. ಕೆಲವನ್ನು ನೀವು ಸರಳವಾಗಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಮಾತು ಅಹಂಕಾರದಂತೆ ಕೇಳಿಸುವುದು. ಸಂಯಮವನ್ನು ಬೆಳೆಸಿಕೊಳ್ಳುವ ಅಗತ್ಯ. ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುವ ಅಭ್ಯಾಸ ಬೇಡ.‌

ಮಕರ ರಾಶಿ:

ಯಶಸ್ವಿಯಾದ ಸಂವಹನವನ್ನು ಸಾಧಿಸುವ ದಿನ. ನಿಮ್ಮ ಮಾತಿನ ಪ್ರಭಾವ ಹೆಚ್ಚಾಗುತ್ತದೆ. ಇಂದಿನ ನಿಮ್ಮ ಅನಾರೋಗ್ಯದಿಂದ ವ್ಯಾಪಾರದಲ್ಲಿ ಉತ್ಸಾಹ ಕಡಿಮೆ ಆಗಲಿದೆ. ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದ್ದು ತಂತ್ರಗಳನ್ನು ರೂಪಿಸಬೇಕಾದೀತು. ಹಣಕಾಸಿನ ವ್ಯವಹಾರದಲ್ಲಿ ಇಂದು ಎಲ್ಲರಿಂದ ಗೌಪ್ಯತೆಯನ್ನು ಕಾಪಾಡಿಕೊಳ್ಳುವಿರಿ. ಯಾರಿಗೋ ನಿಮ್ಮಿಂದ ಹಣವು ಕೈತಪ್ಪಿ ಹೋಗಬಹುದು. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ಇಂದು ನೀವು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡುವಿರಿ. ತಂದೆಯ ಶ್ರಮವನ್ನು ಕಂಡು ಮಕ್ಕಳು ನೋಯುವರು. ನಿಮ್ಮವರ ಪ್ರೀತಿಯಿಂದ ನೀವು ಮನಸೋಲುವಿರಿ. ನಿಮ್ಮ ಕೆಲಸದ ಬಗ್ಗೆ ನೀವೇ ಹೇಳಿಕೊಳ್ಳುವಿರಿ. ನೀವು ಎಲ್ಲರ‌ ನಡುವೆ ಅಂತರವನ್ನು ಕಾಯ್ದುಕೊಂಡು ವ್ಯವಹಾರ ಮಾಡುವಿರಿ. ಹೊಸ ಪರಿಚಯದಿಂದ ಉಪಯೋಗವಾಗಲಿದೆ. ಆದರೆ ಅತಿಯಾದ ಸಂಭಾಷಣೆ ಕಲಹವಾಗಬಹುದು. ಇಂದು ಸಂಗಾತಿಯ ಪ್ರೀತಿಯಿಂದ ವಂಚಿತರಾಗುವಿರಿ.

ಕುಂಭ ರಾಶಿ :

ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಅನವಶ್ಯಕ ಖರ್ಚಿನಿಂದ ದೂರವೇ ಇರಿ. ಅದನ್ನು ಪೂರ್ಣ ಮನಸ್ಸಿನಿಂದ ಸ್ವೀಕರಿಸಿ. ನಿಮ್ಮ ಭಾವನೆಗಳನ್ನು ಇತರರು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ. ರಾಜಕಾರಣಿಗಳಿಗೆ ತೊಳಲಾಟವು ಅಧಿಕವಾಗಿರುವುದು. ಇಂದಿನ ಸೋಲು ನಿಮಗೆ ಪಾಠವಾಗುವುದು. ಹೊಸತನ ಹುಡುಕಾಟದಲ್ಲಿ ನೀವು ಇರುವಿರಿ. ಕುಟುಂಬದ ನೇರ ಮಾತುಗಳು ನಿಮಗೆ ಸಹಿಸಲು ಶಕ್ಯವಾಹದೇ ಬೇಸರಿಸುವಿರಿ. ಊಹಿಸಿದಷ್ಟು ಮಾರ್ದವವು ಸಂಗಾತಿಯ ಸ್ವಭಾವದಲ್ಲಿ ಇರದು. ಕುಟುಂಬದ ವಿಚಾರದಲ್ಲಿ ಏಕಪಕ್ಷೀಯವಾಗಿ ನಿರ್ಧರವನ್ನು ತೆಗೆದುಕೊಳ್ಳದೇ ಎಲ್ಲರ ಅಭಿಪ್ರಾಯವನ್ನು ಪಡೆದು ಮುಂದುವರಿಯಿರಿ. ನಿಮ್ಮ ಕೆಲಸವು ಅನೇಕರಿಗೆ ಉಪಯೋಗವಾಗಬಹುದು. ತಾಳ್ಮೆಯಿಂದ ನೀವು ಜಯಿಸುವಿರಿ. ಕುಟುಂಬದಲ್ಲಿ ಹಿತಕರ ಮಾತುಗಳು ಸಂತೋಷ ತರುತ್ತವೆ. ಕೆಲಸದಲ್ಲಿ ನಿಧಾನವಾದರೂ ಸ್ಥಿರತೆ ಉಳಿದುಕೊಳ್ಳುವುದು. ಯಂತ್ರೋಪಕರಣಗಳು ದುರಸ್ತಿಗೆ ಬರಬಹುದು.

ಮೀನ ರಾಶಿ:

ನೀವು ಮಾಡಬೇಕಾದ ಕಾರ್ಯಗಳಿಗೆ ಸ್ಪಷ್ಟತೆ ಹೆಚ್ಚಾಗುತ್ತದೆ. ಕೆಲವರ ಮಾತುಗಳಿಂದ ಬೇಸರ ಆಗಬಹುದು. ಸಾಲದಿಂದ ಸ್ವಲ್ಪ ಸಮಾಧಾನ ಸಿಗಲಿದೆ. ಇದು ನಿಮ್ಮ ಆರೋಗ್ಯದ ಮೇಲೂ ಒಳ್ಳೆಯ ಪರಿಣಾಮವನ್ನು ಕೊಡುವುದು. ನಿಮಗೆ ಸಂಬಂಧಿಸದ ವಿಚಾರಕ್ಕೆ ನೀವು ಮಧ್ಯ ಪ್ರವೇಶ ಮಾಡುವುದು ಬೇಡ.‌ ಪ್ರೀತಿಯಲ್ಲಿ ಅಂತರವು ಬಂದಂತೆ ತೋರಿದ್ದು ಮಾತುಕತೆಯಿಂದ ಅದನ್ನು ಸರಿ ಮಾಡಿಕೊಳ್ಳುವುದು ಉಚಿತ. ಇಂದಿನ ಕೆಲವು ಸಮಯವನ್ನು ಇನ್ನೊಬ್ಬರಿಗೆ ಮೀಸಲಿಡಬೇಕಾದೀತು. ಸಂಗಾತಿಯ ನೋವಿಗೆ ಸ್ಪಂದಿಸಲು ಕಷ್ಟವಾದೀತು. ಬರಬೇಕಾದ ಹಣವು ಮಧ್ಯದಲ್ಲಿ ನಿಂತಿದ್ದು ನಿಮ್ಮೊಳಗೆ ಆತಂಕಕ್ಕೆ ಸೃಷ್ಟಿಸುವುದು. ಮಕ್ಕಳ ತಿರುಗಾಟವನ್ನು ಕಡಿಮೆ ಮಾಡಲು ಹೇಳುವಿರಿ. ಇಂದು ಸಹನೆಯೇ ನಿಮ್ಮ ದೊಡ್ಡ ಆಸ್ತಿ. ಕೆಲಸದಲ್ಲಿ ಹಿಡಿತ, ಮನೆಯಲ್ಲಿ ಶಾಂತಿಯನ್ನೂ ಸಾಧಿಸುವಿರಿ. ಪ್ರಯಾಣದ ಆಯಾಸವು ವಿಶ್ರಾಂತಿಯಿಂದ ದೂರಾಗುವುದು. ಪುರುಷ ಪ್ರಯತ್ನದಿಂದ ಇಂದು ಹೆಚ್ಚು ಲಾಭ ಇರುವುದು.

20 ನವೆಂಬರ್​ 2025ರ ಗುರುವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ವಿಶಾಖಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಅನುರಾಧಾ, ಯೋಗ : ಸೌಭಾಗ್ಯ, ಕರಣ : ವಣಿಜ, ಸೂರ್ಯೋದಯ – 06 – 21 am, ಸೂರ್ಯಾಸ್ತ – 05 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:31 – 14:57, ಗುಳಿಕ ಕಾಲ 09:13 – 10:37, ಯಮಗಂಡ ಕಾಲ 06:22 – 07:48

-ಲೋಹಿತ ಹೆಬ್ಬಾರ್-8762924271 (what’s app only)

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು