ದಸರಾ ಸಿನಿಮೋತ್ಸವಕ್ಕೆ ಚಾಲನೆ ನೀಡುವ ವೇಳೆ ಕಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಇಂದು (ಸೆಪ್ಟೆಂಬರ್ 28) ಅವರು ಮೈಸೂರು ದಸರಾದಲ್ಲಿ ಆಯೋಜಿಸಿರುವ ಸಿನಿಮೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಅಪ್ಪುಗೆ ಪುಷ್ಪ ನಮನ ಸಲ್ಲಿಸಲಾಯಿತು.
ಪುನೀತ್ ರಾಜ್ಕುಮಾರ್ (Puneeth Rajkumar) ನಿಧನದ ನಂತರದಲ್ಲಿ ಅವರ ಪತ್ನಿ ಅಶ್ವಿನಿ (Ashwini) ಪುನೀತ್ ರಾಜ್ಕುಮಾರ್ ಅವರು ನಿತ್ಯ ಕಣ್ಣೀರು ಹಾಕುತ್ತಿದ್ದಾರೆ. ಆದರೆ, ನೋವನ್ನು ನುಂಗಿ ಮುನ್ನಡೆಯಲೇಬೇಕು. ಇಂದು (ಸೆಪ್ಟೆಂಬರ್ 28) ಅವರು ಮೈಸೂರು ದಸರಾದಲ್ಲಿ ಆಯೋಜಿಸಿರುವ ಸಿನಿಮೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಅಪ್ಪುಗೆ ಪುಷ್ಪ ನಮನ ಸಲ್ಲಿಸಲಾಯಿತು. ಆಗ ಅಶ್ವಿನಿ ಕಣ್ಣೀರು ಹಾಕಿದ್ದಾರೆ. ಈ ಸಿನಿಮೋತ್ಸವದಲ್ಲಿ ಕನ್ನಡದ ಅನೇಕ ಚಿತ್ರಗಳು ಪ್ರದರ್ಶನ ಕಾಣುತ್ತಿವೆ.