ಪಿಎಫ್ಐ ಕಚೇರಿಗೆ ಸುತ್ತಿಗೆ ಮತ್ತು ಪ್ರಿಂಟಿಂಗ್ ಮಷಿನ್ ತೆಗೆದುಕೊಂಡು ಹೋದ ಪೊಲೀಸರು
ಪಿಎಫ್ಐ, ಉಪ ಸಂಘಟನೆಗಳ ಕಚೇರಿ ಲಾಕ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ
ಕೇಂದ್ರ ಸರ್ಕಾರ 5 ವರ್ಷಗಳ ಕಾಲ ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿದ ಹಿನ್ನೆಲೆ ದೇಶಾದ್ಯಂತ ಪಿಎಫ್ಐ ಸಂಘಟನೆಗಳ ಕಚೇರಿಗಳಿಗೆ ಬೀಗ ಹಾಕಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲೂ ಕೂಡ ರಾಜ್ಯ ಸರ್ಕಾರ ಕೂಡ ಆದೇಶ ಹೊರಡಿಸಿದೆ. ಪಿಎಫ್ಐ, ಉಪ ಸಂಘಟನೆಗಳ ಕಚೇರಿ ಲಾಕ್ ಮಾಡುವಂತೆ ಆದೇಶ ನೀಡಲಾಗಿದೆ. ಈ ಸಂಬಂಧ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಕಚೇರಿಗೆ ಬೀಗ ಹಾಕಲು ಪೊಲೀಸರು ಬೀಗ ಹಾಕಿದ್ದಾರೆ. ಆದರೆ ಪಿಎಫ್ಐ ಸಿಬ್ಬಂದಿ ಪಿಎಫ್ಐ ಕಚೇರಿಯ 2 ಗೇಟ್‌ಗೂ ಬೀಗ ಹಾಕಿಕೊಂಡು ಹೋಗಿದ್ದಾರೆ. ಹೀಗಾಗಿ ಪೊಲೀಸರು ಸುತ್ತಿಗೆಯಿಂದ ಗೇಟ್‌ನ ಬೀಗ ಒಡೆದಿದ್ದಾರೆ. ನೆಲ್ಲಿಕಾಯಿ ರಸ್ತೆಯಲ್ಲಿ ಪೊಲೀಸರು ವಾಹನ ಸಂಚಾರ ಬಂದ್ ಮಾಡಿದ್ದಾರೆ.
ಹಾಗೇ ಬೆಂಗಳೂರಿನ ಜೆ.ಸಿ.ನಗರದ ಎಸ್ಕೆ ಗಾರ್ಡನ್ನಲ್ಲಿರುವ ಪಿಎಫ್ಐ ಸಂಘಟನೆಯ ಮುಖ್ಯಕಚೇರಿಗೆ ಪೊಲೀಸರು ಬೀಗ ಜಡದಿದ್ದಾರೆ. ಪಿಎಫ್ಐ ಕಚೇರಿ ಒಳಗೆ ಯಾರೂ ಹೋಗದಂತೆ ಪಿಎಫ್ಐ ಕಚೇರಿ ಮುಂದೆ 40ಕ್ಕೂ ಹೆಚ್ಚು ಪೊಲೀಸರ ಭದ್ರತೆ ನಿಯೋಜಿಸಲಾಗಿದೆ. ಇದರ ಅಂಗಸಂಸ್ಥೆಯಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಚೇರಿಗು ಕೂಡ ಬೀಗ ಹಾಕಲಾಗಿದೆ.
ಹಾಸನದ ಹೊಸಲೈನ್ ರಸ್ತೆಯಲ್ಲಿರುವ ಪಿಎಫ್ಐ ಕಚೇರಿ ಮೇಲೆ ಡಿವೈಎಸ್‌ಪಿ ಉದಯ್ ಭಾಸ್ಕರ್ ನೇತೃತ್ವದ ತಂಡ ದಾಳಿ ಮಾಡಿ ಶೋಧ ಕಾರ್ಯ ಆರಂಭಿಸಿದ್ದರು. ಆದರೆ ಪೊಲೀಸರ ದಾಳಿಗೂ ಮೊದಲೇ ಸಿಬ್ಬಂದಿ ಕಚೇರಿ ಖಾಲಿ ಮಾಡಿದ್ದರು. ಕಚೇರಿಯಲ್ಲಿದ್ದ ಕೆಲ ಪುಸ್ತಕ, ಬಾವುಟ, ಬಂಟಿಂಗ್ಸ್ನ್ನು ಜಪ್ತಿ ಮಾಡಲಾಗಿದೆ.
Published on: Sep 28, 2022 06:58 PM
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
