ಗಣ್ಯರ ಸಮ್ಮುಖ ಬೆಂಗಳೂರು ಕಂಬಳದ ಜೋಡುಕರೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜಕುಮಾರ್

|

Updated on: Nov 25, 2023 | 12:35 PM

ಅಶ್ವಿನಿ ಪುನೀತ್ ರಾಜಕುಮಾರ್ ಕಂಬಳದ ಜೋಡುಕರೆ ಉದ್ಘಾಟಿಸಿದ್ದಾರೆ. ಆದರೆ ಕಂಬಳಕ್ಕೆ ಇಂದು ಸಾಯಂಕಾಲ 6 ಗಂಟೆಗೆ ಚಾಲನೆ ಸಿಗಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ನೆರವೇರಿಸಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಬೆಂಗಳೂರು ಕಂಬಳವನ್ನು ಸಾರ್ವಜನಿಕರು ಉಚಿತವಾಗಿ ವೀಕ್ಷಿಸಬಹುದು. ಅರಮನೆ ಮೈದಾನದ ಗೇಟ್ ನಂಬರ್ 1,2,3, ಮತ್ತು 4 ರಿಂದ ಸಾರ್ವಜನಿಕರಿಗೆ ಪ್ರವೇಶ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು: ಸಂಭ್ರಮದ ಬೆಂಗಳೂರು ಕಂಬಳ (Bengaluru Kambala) ಆರಂಭಗೊಂಡಿದೆ. ನಗರದ ಅರಮನೆ ಮೈದಾನದಲ್ಲಿ ಅರ್ಚಕರ ಪೂಜೆಯ ನಂತರ ಅಶ್ವಿನಿ ಪುನೀತ್ ರಾಜಕಮಾರ್ (Ashwini Puneeth Rajkumar) ಅವರು ದೀಪ ಬೆಳಗಿಸಿ ನಗರದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿರುವ ಕಂಬಳದ ಜೋಡುಕರೆ ಉದ್ಘಾಟಿಸಿದರು. ಅಶ್ವಿನಿ ಅವರೊಂದಿಗೆ, ಕರಾವಳಿ ಪ್ರಾಂತ್ಯದ ಅತ್ಯಂತ ಜನಪ್ರಿಯ ಜಾನಪದ ಕ್ರೀಡೆ ಬೆಂಗಳೂರಲ್ಲಿ ಆಯೋಜನೆಗೊಳ್ಳಲು ನಿರ್ಣಾಯಕ ಪಾತ್ರ ವಹಿಸಿರುವ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ (Ashok Rai), ಕರಾವಳಿ ಭಾಗದ ಸಂಸದರಾಗಿರುವ ಶೋಭಾ ಕರಂದ್ಲಾಜೆ ಮತ್ತು ಪತ್ನಿಯೊಂದಿಗೆ ಆಗಮಿಸಿರುವ ಡಿವಿ ಸದಾನಂದ ಗೌಡ, ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಮೊದಲಾದವರನ್ನು ನೋಡಬಹುದು. ವೇದಿಕೆಯ ಮೇಲೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನು ಸಹ ಕಾಣಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಕಂಬಳ ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ