Appu Food Festival: ಪುನೀತ್​ಗೆ ಫೇವರಿಟ್​ ಆಗಿದ್ದ ದೋಸೆ ಸವಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​; ಇಲ್ಲಿದೆ ವಿಡಿಯೋ

Appu Food Festival: ಪುನೀತ್​ಗೆ ಫೇವರಿಟ್​ ಆಗಿದ್ದ ದೋಸೆ ಸವಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​; ಇಲ್ಲಿದೆ ವಿಡಿಯೋ

TV9 Web
| Updated By: ಮದನ್​ ಕುಮಾರ್​

Updated on:Oct 24, 2022 | 1:05 PM

Ashwini Puneeth Rajkumar: ಅನೇಕ ಕಡೆಗಳಲ್ಲಿ ‘ಅಪ್ಪು ಫುಡ್​ ಫೆಸ್ಟಿವಲ್​’ ಆಚರಿಸಲಾಗುತ್ತಿದೆ. ಇದರಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಕೂಡ ಭಾಗಿ ಆಗಿದ್ದಾರೆ.

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ (Puneeth Rajkumar) ನಿಧನರಾಗಿ ಒಂದು ವರ್ಷ ಸಮೀಪಿಸುತ್ತಿದೆ. ಮೊದಲ ವರ್ಷದ ಪುಣ್ಯಸ್ಮರಣೆಯ ಈ ಸಂದರ್ಭದಲ್ಲಿ ‘ಅಪ್ಪು ಫುಡ್​ ಫೆಸ್ಟಿವಲ್​’ (Appu Food Festival) ಆಚರಿಸಲಾಗುತ್ತಿದೆ. ಪುನೀತ್​ ರಾಜ್​ಕುಮಾರ್​ ಅವರಿಗೆ ಇಷ್ಟವಾಗಿದ್ದ ಆಹಾರವನ್ನು ಸವಿಯುವ ಮೂಲಕ ಈ ಫೆಸ್ಟಿವಲ್​ ಆಚರಿಸಲಾಗುತ್ತಿದೆ. ಇದರಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್ (Ashwini Puneeth Rajkumar) ಕೂಡ ಭಾಗಿ ಆಗಿದ್ದಾರೆ. ಅಪ್ಪು ಅವರಿಗೆ ಇಷ್ಟವಾಗಿದ್ದ ದೋಸೆಯನ್ನು ವಿವಿ ಪುರದ ಫುಡ್​ ಸ್ಟ್ರೀಟ್​ನಲ್ಲಿ ಅಶ್ವಿನಿ ಸವಿದಿದ್ದಾರೆ. ಆ ಕ್ಷಣದ ವಿಡಿಯೋ ಇಲ್ಲಿದೆ..

 

Published on: Oct 24, 2022 01:05 PM