ಏಷ್ಯಾ ಕಪ್ 2023: ಬೆಂಗಳೂರು ಕೆಐಎಯಿಂದ ಕೊಲಂಬೋಗೆ ಪ್ರಯಾಣ ಬೆಳಸಿದ ಟೀಂ ಇಂಡಿಯಾ, ಮೊದಲ ಪಂದ್ಯ ಶನಿವಾರ ಪಾಕಿಸ್ತಾನ್ ವಿರುದ್ಧ!

|

Updated on: Aug 30, 2023 | 1:25 PM

ನಗರದ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಆಯೋಜಿಲಾಗಿದ್ದ ಕಂಡೀಷನಿಂಗ್ ಕ್ಯಾಂಪ್ ಬಳಿಕ ಟೀಂ ಇಂಡಿಯಾದ (Team India) ಸದಸ್ಯರು ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನವೊಂದರಲ್ಲಿ ಕೊಲಂಬೋಗೆ ಪ್ರಯಾಣ ಬೆಳೆಸಿದರು. ಒಂದು ದಿನದ ಪಂದ್ಯಗಳ ಫಾರ್ಮಾಟ್ ಆಗಿರುವ ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯವನ್ನು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಆಡಲಿದೆ.

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ 2023 (Asia Cup Cricket Tournament) ಇಂದಿನಿಂದ ಶುರುವಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಾಯೋಜಕತ್ವದ ಟೂರ್ನಿಯನ್ನು ಈ ಬಾರಿ ಶ್ರೀಲಂಕಾ ಮತ್ತು ಪಾಕಿಸ್ತಾನ ಜಂಟಿಯಾಗಿ ಆಯೋಜಿಸುತ್ತಿವೆ. ಭಾರತ ತನ್ನೆಲ್ಲ ಪಂದ್ಯಗಳನ್ನು ದ್ವೀಪರಾಷ್ಟ್ರದಲ್ಲಿ (island nation) ಆಡಲಿದೆ. ನಗರದ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಆಯೋಜಿಲಾಗಿದ್ದ ಕಂಡೀಷನಿಂಗ್ ಕ್ಯಾಂಪ್ ಬಳಿಕ ಟೀಂ ಇಂಡಿಯಾದ (Team India) ಸದಸ್ಯರು ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನವೊಂದರಲ್ಲಿ ಕೊಲಂಬೋಗೆ ಪ್ರಯಾಣ ಬೆಳೆಸಿದರು. ಒಂದು ದಿನದ ಪಂದ್ಯಗಳ ಫಾರ್ಮಾಟ್ (ODI format) ಆಗಿರುವ ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯವನ್ನು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಆಡಲಿದೆ.

ವಿಮಾನ ನಿಲ್ದಾಣದಲ್ಲಿ ಭಾರತದ ಅಗ್ರಮಾನ್ಯ ಬ್ಯಾಟರ್ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮ, ಬಹಳ ದಿನಗಳ ಬಳಿಕ ವಾಪಸ್ಸಾಗಿರುವ ಜಸ್ಪ್ರೀತ್ ಬುಮ್ರಾ, ಸ್ಟಾರ್ ಅಲ್ ರೌಂಡರ್ ರವಿಂದ್ರ ಜಡೇಜಾ, ದೊಡ್ಡ ಹೆಸರು ಮಾಡುತ್ತಿರುವ ಶುಭ್ಮನ್ ಗಿಲ್, ವೇಗದ ಬೌಲರ್ ಮೊಹಮ್ಮದ್ ಶಮಿ ಮೊದಲಾದವರೊಂದಿಗೆ ಹೆಡ್ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್ ಹಾಗೂ ಸಪೋರ್ಟ್ ಸ್ಟಾಫ್, ಮ್ಯಾನೇಜರ್ ಮತ್ತು ಇತರ ಅಧಿಕಾರಿಗಳು ಟೀಂ ಬಸ್ ನಿಂದ ಇಳಿದು ಏರ್ಫೋರ್ಟ್ ನೊಳಗೆ ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ