Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಹಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮ; ವೇದಿಕೆಗೆ ಆಗಮಿಸುವ ರಾಹುಲ್ ಗಾಂಧಿಗೆ ಧೀರ್ಘ ಕರತಾಡನದೊಂದಿಗೆ ಸ್ವಾಗತ!

ನೆರೆದಿದ್ದ ಸಾವಿರಾರು ಜನರಿಗೆ ವಂದಿಸಲು ಖರ್ಗೆ, ರಾಹುಲ್, ಸಿದ್ದರಾಮಯ್ಯ ಮತ್ತು ಶಿವಕುಮಾರ್ ವೇದಿಕೆಯ ಮುಂಭಾಗಕ್ಕೆ ಬಂದಾಗ ಉಳಿದ ಸಚಿವರಿಗೂ ಅವರೊಂದಿಗೆ ಕಾಣಿಸಿಕೊಳ್ಳುವ ತವಕ! ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಯಶ ಕಾಣುತ್ತಾರಾದರೂ ಪ್ರಮುಖ ನಾಲ್ವರು ಪರಸ್ಪರ ಕೈ ಹಿಡಿದಿಕೊಂಡು ಮೇಲೆತ್ತುವಾಗ ಅವರನ್ನು ಕಡೆಗಣಿಸಲಾಗುತ್ತದೆ. ಹೆಚ್ಚು ಅವಕೃಪಗೆ ಒಳಗಾಗೋದು ಬೇಡ ಅಂದುಕೊಳ್ಳುವ ಚಲುವರಾಯಸ್ವಾಮಿ, ತಮ್ಮ ಹಿಂದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಮುಂದೆ ಬರುವಂತೆ ಹೇಳುತ್ತಾರೆ

Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 30, 2023 | 2:57 PM

ಮೈಸೂರು: ರಾಜ್ಯದ ಸಿದ್ದರಾಮಯ್ಯ ಸರಕಾರ ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi) ಬಹಳ ಅದ್ದೂರಿಯಾಗಿ ಜಾರಿಗಳಿಸಿದೆ. ದೆಹಲಿಯಿಂದ ಬೆಂಗಳೂರಿಗೆ ಮತ್ತು ರಾಜ್ಯದ ರಾಜಧಾನಿಯಿಂದ ರಾಜ್ಯದ ಸಾಂಸ್ಕೃತಿಕ ರಾಜಧಾನಿಗೆ ವಿಶೇಷ ವಿಮಾನವೊಂದರಲ್ಲಿ ಆಗಮಿಸಿದ ಬಳಿಕ ವೇದಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಬಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ರಾಹುಲ್ ಗಾಂಧಿಯವರನ್ನು (Rahul Gandhi) ಕಿವಿಗಡಚಿಕ್ಕುವ ಕರತಾಡನದೊಂದಿಗೆ ಸ್ವಾಗತಿಸಲಾಯಿತು. ವೇದಿಕೆಯ ಮೇಲೆ ಅಗತ್ಯಕ್ಕಿಂತ ಹೆಚ್ಚು ಗಣ್ಯರಿದ್ದರೆ ಸಮಸ್ಯೆ ಹೆಚ್ಚುತ್ತದೆ. ಕೆಲವರು ಅಂದರೆ ಪ್ರಮುಖರು ಮಾತ್ರ ಕೆಮೆರಾಗಳ ಫ್ರೇಮ್ ಬಲ್ಲಿ ಬರುತ್ತಾರೆ. ನೆರೆದಿದ್ದ ಸಾವಿರಾರು ಜನರಿಗೆ ವಂದಿಸಲು ಖರ್ಗೆ, ರಾಹುಲ್, ಸಿದ್ದರಾಮಯ್ಯ ಮತ್ತು ಶಿವಕುಮಾರ್ ವೇದಿಕೆಯ ಮುಂಭಾಗಕ್ಕೆ ಬಂದಾಗ ಉಳಿದ ಸಚಿವರಿಗೂ ಅವರೊಂದಿಗೆ ಕಾಣಿಸಿಕೊಳ್ಳುವ ತವಕ! ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಯಶ ಕಾಣುತ್ತಾರಾದರೂ ಪ್ರಮುಖ ನಾಲ್ವರು ಪರಸ್ಪರ ಕೈ ಹಿಡಿದಿಕೊಂಡು ಮೇಲೆತ್ತುವಾಗ ಅವರನ್ನು ಕಡೆಗಣಿಸಲಾಗುತ್ತದೆ. ಹೆಚ್ಚು ಅವಕೃಪಗೆ ಒಳಗಾಗೋದು ಬೇಡ ಅಂದುಕೊಳ್ಳುವ ಚಲುವರಾಯಸ್ವಾಮಿ, ತಮ್ಮ ಹಿಂದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಮುಂದೆ ಬರುವಂತೆ ಹೇಳುತ್ತಾರೆ. ಜಿ ಪರಮೇಶ್ವರ, ಕೆ ಹೆಚ್ ಮುನಿಯಪ್ಪ, ಹೆಚ್ ಸಿ ಮಹಾದೇವಪ್ಪ ಮೊದಲಾದ ಸೀನಿಯರ್ ಮಿನಿಸ್ಟರ್ ಗಳು ಹಿಂದಿನ ಸಾಲಲ್ಲೇ ಉಳಿದುಬಿಡುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ