ಅಣ್ಣನಿಗೆ ರಾಖಿ ಕಟ್ಟಲು ತಂಗಿ ಖುಷಿಯಿಂದ ಬಂದಿದ್ದಳು, ಅದೇ ಹೊತ್ತಿಗೆ ದೊಡ್ಡ ದುರಂತ, ಕೊನೆಗೆ ಮೃತ ದೇಹಕ್ಕೆ…
ಹೃದಯಾಘಾತದಿಂದ ಸಾವಿಗೀಡಾದ ಅಣ್ಣನಿಗೆ ತಂಗಿ ದಿಕ್ಕುತೋಚದೆ ಹೃದಯ ಭಾರ ಮಾಡಿಕೊಂಡು ರಾಖಿ ಕಟ್ಟುವಂತಾಗಿದೆ. ಪ್ರತಿ ವರ್ಷ ಆ ಸಹೋದರಿ ತನ್ನ ಅಣ್ಣನಿಗೆ ರಾಖಿ ಕಟ್ಟಲು ಬರುತ್ತಿದ್ದಳು. ಅಣ್ಣನ ಜೊತೆ ಎರಡು ದಿನ ಖುಷಿಯಿಂದ ಸಂಭ್ರಮಿಸುತ್ತಿದ್ದಳು. ಎಂದಿನಂತೆ ಈ ಬಾರಿಯೂ ತಂಗಿ ರಾಖಿ ಕಟ್ಟಲು ಬಂದಿದ್ದಳು. ಆದರೆ ಹಬ್ಬದ ಸಂದರ್ಭದಲ್ಲಿ ಈ ಮನೆಯಲ್ಲಿ ದುರಂತ ಸಂಭವಿಸಿದೆ. ಅಣ್ಣ ಹೃದಯಾಘಾತಕ್ಕೆ ಬಲಿಯಾಗಿದ್ದ.
ಹಿಂದೂ ಸಂಪ್ರದಾಯದ ರಾಖಿಯಲ್ಲಿ ಈ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಪ್ರತಿಯೊಬ್ಬ ಸಹೋದರನೂ ತನ್ನ ಸಹೋದರಿಯರಿಗೆ (Brother And Sister) ಧೈರ್ಯ ತುಂಬಲು ಬಯಸುತ್ತಾನೆ. ಅಲ್ಲದೆ, ಪ್ರತಿ ಹೆಣ್ಣು ತನ್ನ ಸಹೋದರರನ್ನು ರಕ್ಷಿಸಲು ಬಯಸುತ್ತಾಳೆ. ಅವರು ಎಲ್ಲೇ ಇದ್ದರೂ ಸಂತೋಷದಿಂದ ಮತ್ತು ಆರೋಗ್ಯವಾಗಿ ಇರಲೀ ಎಂದು ಬಯಸುತ್ತಾರೆ. ಮಹಿಳೆಯರು ರಾಖಿ ಹಬ್ಬವನ್ನು (Rakhi, Rakhi Festival) ಸಾವಿರ ಕಣ್ಣುಗಳಿಂದ ಎದುರು ನೋಡುತ್ತಾರೆ. ಕೆಲವೊಮ್ಮೆ ಅವರು ಸೋದರ ಇರುವ ಸ್ಥಳಕ್ಕೆ ಹೋಗುತ್ತಾರೆ.
ರಾಖಿ.. ಸೋದರ-ಸೋದರಿಯರ ನಡುವಣ ಸುಮಧುರ ಬಾಂಧವ್ಯದ ಪ್ರತೀಕ. ಹಾಗೆಯೇ ಇಲ್ಲಿ ಕೂಡ ಅಕ್ಕ ಕೂಡ ಅಣ್ಣನಿಗೆ ರಾಖಿ ಕಟ್ಟುವ ಆಸೆ ಮತ್ತು ಖುಷಿಯಿಂದ ತವರು ಮನೆಗೆ ಬಂದಿದ್ದಳು ಆ ಮಹಿಳೆ. ಅಣ್ಣನೂ ತಂಗಿಯ ಬರುವಿಕೆಗೆ ಕಾದು, ಅವಳೊಂದಿಗೆ ಖುಷಿಯಿಂದ ಕಾಲ ಕಳೆಯಲು ಸಿದ್ಧತೆ ನಡೆಸಿದ್ದ. ಆದರೆ ಈ ಮಧ್ಯೆ ಯಾವುದೋ ಮಾಯದಲ್ಲಿ ಆತ ಹಿಂದಿರುಗಿ ಬಾರದ ಲೋಕ ಸೇರಿಕೊಂಡಿದ್ದಾನೆ. ಅಲ್ಲಿಯವರೆಗೆ ತನ್ನೊಂದಿಗೆ ಮಾತನಾಡಿದ್ದ ಅಣ್ಣ ಈಗಿಲ್ಲ ಎಂದು ತಿಳಿದ ತಂಗಿಯ ಹೃದಯ ಭಾರವಾಗಿತ್ತು. ತಂದ ರಾಖಿಯನ್ನು ಕಟ್ಟದೆ ದಿಕ್ಕು ತೋಚದಂತಾಗಿ ಕೊರಗಿದಳು.
ಈ ಘಟನೆಯ ವಿವರ ಇಂತಿದೆ. ಹೃದಯಾಘಾತದಿಂದ ಸಾವಿಗೀಡಾದ ಅಣ್ಣನಿಗೆ ತಂಗಿ ದಿಕ್ಕುತೋಚದೆ ಹೃದಯ ಭಾರ ಮಾಡಿಕೊಂಡು ರಾಖಿ ಕಟ್ಟುವಂತಾಗಿದೆ. ಪ್ರತಿ ವರ್ಷ ಆ ಸಹೋದರಿ ತನ್ನ ಅಣ್ಣನಿಗೆ ರಾಖಿ ಕಟ್ಟಲು ಬರುತ್ತಿದ್ದಳು. ಅಣ್ಣನ ಜೊತೆ ಎರಡು ದಿನ ಖುಷಿಯಿಂದ ಸಂಭ್ರಮಿಸುತ್ತಿದ್ದಳು. ಎಂದಿನಂತೆ ಈ ಬಾರಿಯೂ ತಂಗಿ ರಾಖಿ ಕಟ್ಟಲು ಬಂದಿದ್ದಳು. ಆದರೆ ಹಬ್ಬದ ಸಂದರ್ಭದಲ್ಲಿ ಈ ಮನೆಯಲ್ಲಿ ದುರಂತ ಸಂಭವಿಸಿದೆ. ಅಣ್ಣ ಹೃದಯಾಘಾತಕ್ಕೆ ಬಲಿಯಾಗಿದ್ದ. ತಂಗಿ ತನ್ನ ಅಣ್ಣನ ದೇಹವನ್ನು ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.
ಇದನ್ನೂ ಓದಿ: Pakistan Rakhi Sister:ಅಣ್ಣಯ್ಯ ಪ್ರಧಾನಿ ಮೋದಿ ಭದ್ರತೆ ಬಯಸಿ 31ನೇ ಬಾರಿಗೆ ರಾಖಿ ಕಟ್ಟಲಿರುವ ಪಾಕ್ ತಂಗಿ!
ಪೆದ್ದಪಲ್ಲಿ ಜಿಲ್ಲೆಯ ಎಳಿಗೇಡು ಮಂಡಲದ ಧೂಳಿಕಟ್ಟಾ ಗ್ರಾಮದ ಚೌಧರಿ ಕನಕಯ್ಯ ಎಂದಿನಂತೆ ತೋಟದ ಕೆಲಸ ಮಾಡಲು ಜಮೀನಿಗೆ ಹೋಗಿದ್ದರು, ಆದರೆ ಹೃದಯಾಘಾತ ಸಂಭವಿಸಿ ಜಮೀನಿನಲ್ಲಿ ಮೃತಪಟ್ಟಿದ್ದಾರೆ. ಆದರೆ ಇತ್ತ ಅಣ್ಣನ ಮನೆಗೆ ರಾಖಿ ಕಟ್ಟಲು ತಂಗಿ ಬಂದಿದ್ದಳು. ಅಣ್ಣಾ ರಾಖಿ ಹಬ್ಬದ ಮುನ್ನಾ ದಿನ ಹೃದಯಾಘಾತದಿಂದ ನಿಧನರಾದರು. ಈ ವಿಷಯ ತಿಳಿದ ತಂಗಿ ಗೌರಮ್ಮ ಬೆಚ್ಚಿಬಿದ್ದಿದ್ದಾಳೆ. ಹೃದಯಾಘಾತದಿಂದ ನಿಧನರಾದ ಕನಕಯ್ಯ ಅವರಿಗೆ ರಾಖಿ ಕಟ್ಟಿ ಸಂತಾಪ ಸೂಚಿಸಿದ್ದಾರೆ. ಮೃತ ಸಹೋದರನಿಗೆ ಗೌರಮ್ಮ ರಾಖಿ ಕಟ್ಟುವಾಗ ಹಲವರ ಕಣ್ಣಲ್ಲಿ ನೀರು ತರಿಸಿದೆ. ಗೌರಮ್ಮ, ಪ್ರತಿ ವರ್ಷ ಹಬ್ಬದ ದಿನ… ರಾಖಿ ಕಟ್ಟಿ ಹೋಗುತ್ತಿದ್ದಳು. ಈ ಬಾರಿ ತಂಗಿ ಹಿಂದಿನ ದಿನವೇ ಬಂದಿದ್ದಳು. ಎಲ್ಲಿಗೂ ಹೋಗದೆ ಮನೆಯಲ್ಲೇ ಇರುವಂತೆ ಫೋನ್ ಮಾಡಿ ಕೇಳಿಕೊಂಡಿದ್ದೆ. ಹಬ್ಬವನ್ನು ಸಂತೋಷದಿಂದ ಆಚರಿಸೋಣ.. ಎಂದುಕೊಂಡಿದ್ದೆ. ಆದರೆ.. ಅಣ್ಣನ ಸಾವಿನಿಂದ ಕಣ್ಣೀರು ಹಾಕುವಂತಾಗಿದೆ.
ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ