ನಿರ್ಮಾಣ ಜಾಗದ ಕಬ್ಬಿಣದ ಸರಳುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಬೆಕ್ಕನ್ನು ರಕ್ಷಿಸಿದ ಫಿಟ್​​ ಅಂಡ್ ಫೈನ್​ ಕಾನ್ಸ್​​ಟೇಬಲ್​​, ನೆಟಿಜನ್‌ಗಳಿಂದ ಪ್ರಶಂಸೆ

ನಿರ್ಮಾಣ ಜಾಗದ ಕಬ್ಬಿಣದ ಸರಳುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಬೆಕ್ಕನ್ನು ರಕ್ಷಿಸಿದ ಫಿಟ್​​ ಅಂಡ್ ಫೈನ್​ ಕಾನ್ಸ್​​ಟೇಬಲ್​​, ನೆಟಿಜನ್‌ಗಳಿಂದ ಪ್ರಶಂಸೆ

ಸಾಧು ಶ್ರೀನಾಥ್​
|

Updated on: Aug 30, 2023 | 5:02 PM

ಪೊಲೀಸರು ಕೇವಲ ಜನರಿಗಾಗಿ ಅಲ್ಲ... ಮೂಕ ಪ್ರಾಣಿಗಳ ರಕ್ಷಣೆಗೂ ಸೈ ಎನ್ನುತ್ತಾರೆ. ಈ ಮಾತನ್ನು ತೆಲಂಗಾಣ ಪೊಲೀಸರು ನಿಜ ಮಾಡಿದ್ದಾರೆ. ಹೈದರಾಬಾದಿನ ಉಪ್ಪಲ್‌ನಲ್ಲಿ ಕಾನ್‌ಸ್ಟೆಬಲ್‌ ಸಾಹಸದ ಬಗ್ಗೆ ಈಗ ಚರ್ಚೆಯಾಗುತ್ತಿದೆ... ಟ್ರಾಫಿಕ್ ಕಾನ್‌ಸ್ಟೆಬಲ್ ಪಾಂಡು ಬೆಕ್ಕನ್ನು ಉಳಿಸಲು ನಿರ್ಧರಿಸಿದವರೇ ದೊಡ್ಡ ಸಾಹಸವನ್ನೇ ಮಾಡಿದ್ದಾರೆ. ಕೆಳಗೆ ಬರಲಾಗದೆ ಮೂರು ದಿನದಿಂದ ಕಬ್ಬಿಣದ ಸರಳುಗಳ ಮೇಲೆಯೇ ಇದ್ದು ಅತ್ತಿತ್ತ ಅಲುಗಾಡುತ್ತಿದ್ದ ಬೆಕ್ಕನ್ನು ಕೆಳಗೆ ತಂದಿದ್ದಾರೆ.

ಹೈದರಾಬಾದಿನ ಉಪ್ಪಲ್ ರಿಂಗ್ ರಸ್ತೆ ಬಳಿ (Uppal, Hyderabad) ಕಾರಿಡಾರ್ ನಿರ್ಮಾಣಕ್ಕೆ.. ಪಿಲ್ಲರ್ ಹಾಕಲು ಕಬ್ಬಿಣದ ಸರಳುಗಳ ಜಾಲವನ್ನು ಹಾಕಲಾಗಿದೆ. ಬೆಕ್ಕು ಆ ಕಬ್ಬಿಣದ ಕಡ್ಡಿಗಳ ಮೇಲೆ ಹತ್ತಿ ಅಲ್ಲಿ ಸಿಲುಕಿಕೊಂಡಿತು. ಕೆಳಗೆ ಬರಲಾಗದೆ ಮೂರು ದಿನದಿಂದ ಕಬ್ಬಿಣದ ಸರಳುಗಳ ಮೇಲೆಯೇ ಇದ್ದು, ಗಾಳಿಗೊಡ್ಡಿದಾ ದೀಪದಂತೆ ಅಲುಗಾಡುತ್ತಿತ್ತು. ಆದರೆ ಆ ಮಾರ್ಗವಾಗಿ ಹೋಗುತ್ತಿದ್ದ ಕೆಲ ಶಾಲಾ ಮಕ್ಕಳು ಬೆಕ್ಕಿನ ಸ್ಥಿತಿಯನ್ನು ಗಮನಿಸಿದ್ದಾರೆ. ಕರ್ತವ್ಯನಿರತ ಟ್ರಾಫಿಕ್ ಪೇದೆ ಬಳಿ ತೆರಳಿ ಬೆಕ್ಕನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸದಾ ಫಿಟ್​​ ಅಂಡ್ ಫೈನ್​ ಸಂಚಾರಿ ಪೊಲೀಸ್ ಕಾನ್ಸ್​​ಟೇಬಲ್​​ ಅಲ್ಲಿಗೆ ಬಂದು ಒಂದೇ ಕಣ್ನೋಟಕ್ಕೆ ಸ್ಥಳ ಪರೀಕ್ಷೆ ಮಾಡಿದವರೇ ಆಪದ್ಭಾಂಧವನಂತೆ ಆ ಮಾರ್ಜಾಲನನ್ನು (Cat) ರಕ್ಷಿಸಿದ್ದಾರೆ. ಉದ್ದುದ್ದವಾದ, ಭಾರವಾದ ಕಬ್ಬಿಣದ ಸರಳುಗಳ ( Iron Rods frame) ತುದಿ ತಲುಪಿರುವ ಬೆಕ್ಕು ಹೇಗೆ ಇಳಿಯಬೇಕೆಂದು ತಿಳಿಯದೆ ಒದ್ದಾಡುತ್ತಿದ್ದ ದೃಶ್ಯ ಆ ಪೊಲೀಸ್​ ಪೇದೆಯಲ್ಲಿ ಜಾಗೃತವಾಗಿದ್ದ ಹೃದಯವಂತಿಕೆಯನ್ನು ಬಡಿದೆಬ್ಬಿಸಿದೆ.

ಪೊಲೀಸರು ಕೇವಲ ಜನರಿಗಾಗಿ ಅಲ್ಲ… ಮೂಕ ಪ್ರಾಣಿಗಳ ರಕ್ಷಣೆಗೂ ಸೈ ಎಂದಿದ್ದಾರೆ. ಈ ಮಾತನ್ನು ತೆಲಂಗಾಣ ಪೊಲೀಸರು ನಿಜ ಮಾಡಿದ್ದಾರೆ.. ಈಗ ಉಪ್ಪಲ್‌ನಲ್ಲಿ ಕಾನ್‌ಸ್ಟೆಬಲ್‌ ಸಾಹಸದ ಬಗ್ಗೆ ಚರ್ಚೆಯಾಗುತ್ತಿದೆ… ಟ್ರಾಫಿಕ್ ಕಾನ್‌ಸ್ಟೆಬಲ್ ಪಾಂಡು ಬೆಕ್ಕನ್ನು ಉಳಿಸಲು ನಿರ್ಧರಿಸಿದವರೇ ದೊಡ್ಡ ಸಾಹಸ ಮಾಡಿದರು. ಉಪ್ಪಲ್ ರಿಂಗ್ ರಸ್ತೆ ಬಳಿ ಕಾರಿಡಾರ್ ನಿರ್ಮಾಣಕ್ಕೆ.. ಪಿಲ್ಲರ್ ಹಾಕಲು ಕಬ್ಬಿಣದ ಸರಳುಗಳ ವ್ಯವಸ್ಥೆ ಹಾಕಲಾಗಿದೆ. ಬೆಕ್ಕು ಕಬ್ಬಣದ ಕಂಬಿಗಳ ಮೇಲೆ ಹತ್ತಿ ಅಲ್ಲಿ ಸಿಲುಕಿಕೊಂಡಿದೆ. ಕೆಳಗೆ ಬರಲಾಗದೆ ಮೂರು ದಿನದಿಂದ ಕಬ್ಬಿಣದ ಸರಳುಗಳ ಮೇಲೆಯೇ ಇದ್ದು ಅತ್ತಿತ್ತ ಅಲುಗಾಡುತ್ತಿತ್ತು. ಆದರೆ ಆ ಮಾರ್ಗವಾಗಿ ಹೋಗುತ್ತಿದ್ದ ಕೆಲ ಶಾಲಾ ಮಕ್ಕಳು ಬೆಕ್ಕಿನ ಸ್ಥಿತಿಯನ್ನು ಗಮನಿಸಿದ್ದಾರೆ. ಕರ್ತವ್ಯ ನಿರತ ಟ್ರಾಫಿಕ್ ಕಾನ್ ಸ್ಟೇಬಲ್ ಬಳಿ ತೆರಳಿ ಬೆಕ್ಕನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಟ್ರಾಫಿಕ್ ಕಾನ್‌ಸ್ಟೆಬಲ್ ಬಂದಾಗ, ಬೆಕ್ಕೊಂದು ಬೃಹತ್ ಕಬ್ಬಿಣದ ಸರಳುಗಳ ಮೇಲಿದ್ದು, ಹೇಗೆ ಇಳಿಯಬೇಕೆಂದು ತಿಳಿಯದೆ ಒದ್ದಾಡುತ್ತಿರುವುದನ್ನು ನೋಡಿದರು.

ಕಾನ್ಸ್​​ಟೇಬಲ್ ಪಾಂಡು ಸ್ವಲ್ಪವೂ ಯೋಚಿಸದೆ ಕಬ್ಬಿಣದ ಸ್ಟ್ಯಾಂಡ್ ಹತ್ತಿಬಿಟ್ಟಿದ್ದಾರೆ. ಸ್ವಲ್ಪ ಸ್ವಲ್ಪವೇ ಮೇಲೆ ಮೇಲೆ ಸಾಗುತ್ತಾ ಬೆಕ್ಕನ್ನು ಹಿಂಬಾಲಿಸಿ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ಚೀಲದೊಳಕ್ಕೆ ಬೆಕ್ಕನ್ನು ಸುರಕ್ಷಿತವಾಗಿ ಹಾಕೊಂಡಿದ್ದಾರೆ. ಪಕ್ಕದಲ್ಲೇ ಇದ್ದ ಸಣ್ಣ ಗುಡಿಸಲಿನಲ್ಲಿ ಬೆಕ್ಕನ್ನು ಬಿಟ್ಟುಬಂದಿದ್ದಾರೆ. ಹೀಗೆ ಟ್ರಾಫಿಕ್ ಪೊಲೀಸ್​​ ಬೆಕ್ಕನ್ನು ರಕ್ಷಿಸುತ್ತಿರುವ ವಿಡಿಯೋವನ್ನು ಯುವಕನೊಬ್ಬ ಸಾದ್ಯಂತವಾಗಿ ಚಿತ್ರೀಕರಿಸಿದ್ದಾನೆ. ತನ್ನ ಪ್ರಾಣವನ್ನೇ ಪಣವಾಗಿಟ್ಟು ಬೆಕ್ಕನ್ನು ರಕ್ಷಿಸಿದ ಕಾನ್ಸ್‌ಟೇಬಲ್ ಪಾಂಡು ಅವರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ