ನೂರಾರು ಬಸ್​ಗಳಲ್ಲಿ ಮೈಸೂರಿಗೆ ಆಗಮಿಸಿದ ಗೃಹ ಲಕ್ಷ್ಮೀಯರ ದಂಡು, ವಿಡಿಯೋ ನೋಡಿ

ನೂರಾರು ಬಸ್​ಗಳಲ್ಲಿ ಮೈಸೂರಿಗೆ ಆಗಮಿಸಿದ ಗೃಹ ಲಕ್ಷ್ಮೀಯರ ದಂಡು, ವಿಡಿಯೋ ನೋಡಿ

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Aug 30, 2023 | 12:34 PM

Lakshmi scheme launch Function: ರಾಜ್ಯದ ಮಹಿಳೆಯರು ಕಾತರದಿಂದ ಕಾಯುತ್ತಿದ ಕ್ಷಣ ಬಂದೇ ಬಿಟ್ಟಿದೆ. ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಪ್ರಮುಖವಾದ, ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಸಿಗುತ್ತಿದೆ.. ಇದಕ್ಕಾಗಿ ಸಕಲ ಸಿದ್ದತೆಯನ್ನ ಮಾಡಿಕೊಳ್ಳಲಾಗಿದೆ.‌ ಇನ್ನು ನೂರಾರು ಬಸ್​ಗಳಲ್ಲಿ ಗೃಹ ಲಕ್ಷ್ಮೀಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ಮೈಸೂರು, (ಆಗಸ್ಟ್ 30): ರಾಜ್ಯದ ಮಹಿಳೆಯರು ಕಾತರದಿಂದ ಕಾಯುತ್ತಿದ ಕ್ಷಣ ಬಂದೇ ಬಿಟ್ಟಿದೆ. ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಪ್ರಮುಖವಾದ, ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಸಿಗುತ್ತಿದೆ.. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಾಕಲಾಗಿರುವ ಬೃಹತ್ ವೇದಿಕೆಯಲ್ಲಿ‌ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಬಟನ್ ಒತ್ತುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷ ಜನರನ್ನು ಸೇರಿಸುವ ಉದ್ದೇಶ ಹೊಂದಿದ್ದು ಇದಕ್ಕಾಗಿ ಸಕಲ ಸಿದ್ದತೆಯನ್ನ ಮಾಡಿಕೊಳ್ಳಲಾಗಿದೆ.‌ ಇನ್ನು ನೂರಾರು ಬಸ್​ಗಳಲ್ಲಿ ಗೃಹ ಲಕ್ಷ್ಮೀಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ