Asia Cup 2025: ಬುಮ್ರಾ ಡೆಡ್ಲಿ ಯಾರ್ಕರ್​ಗೆ ಹಾರಿತು ವಿಕೆಟ್; ವಿಡಿಯೋ ನೋಡಿ

Updated on: Sep 10, 2025 | 9:09 PM

Jasprit Bumrah's Return: ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಟೀಂ ಇಂಡಿಯಾ ಯುಎಇ ವಿರುದ್ಧ ಅದ್ಭುತ ಪ್ರದರ್ಶನ ನೀಡಿದೆ. ಗಾಯದಿಂದ ಚೇತರಿಸಿಕೊಂಡು ಮರಳಿದ ಜಸ್ಪ್ರೀತ್ ಬುಮ್ರಾ ಕೇವಲ 10 ಎಸೆತಗಳಲ್ಲಿ ವಿಕೆಟ್ ಪಡೆದು ತಮ್ಮ ಅದ್ಭುತ ಯಾರ್ಕರ್‌ನ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದ ನಂತರ 47 ದಿನಗಳ ಬಳಿಕ ಮೈದಾನಕ್ಕೆ ಮರಳಿದ ಬುಮ್ರಾ ಅವರ ಈ ಪ್ರದರ್ಶನ ಭಾರತೀಯ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ.

ಯುಎಇ ವಿರುದ್ಧದ ಪಂದ್ಯದೊಂದಿಗೆ ಟೀಂ ಇಂಡಿಯಾದ ಏಷ್ಯಾಕಪ್ ಅಭಿಯಾನ ಕೂಡ ಶುರುವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಪರ ವೇಗಿ ಜಸ್ಪ್ರೀತ್ ಬುಮ್ರಾ ನಿರೀಕ್ಷಿತ ಪ್ರದರ್ಶನವನ್ನೇ ನೀಡಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಗೊಂಡು ತಂಡದಿಂದ ಹೊರಗಿದ್ದ ಬುಮ್ರಾ, ಇದೀಗ ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ತಮ್ಮ ಮ್ಯಾಜಿಕ್ ತೋರಿಸಿದ್ದಾರೆ. ಯುಎಇ ವಿರುದ್ಧದ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ, ಬುಮ್ರಾ ಕೇವಲ 10 ಎಸೆತಗಳಲ್ಲಿ ಮೊದಲ ವಿಕೆಟ್ ಪಡೆದರು.

47 ದಿನಗಳ ನಂತರ ಮೈದಾನಕ್ಕೆ ಮರಳುತ್ತಿರುವ ಬುಮ್ರಾ ತಮ್ಮ ಖೋಟಾದ ಮೊದಲ ಓವರ್‌ನಲ್ಲಿ ಯಾವುದೇ ವಿಕೆಟ್ ಪಡೆಯಲಿಲ್ಲ. ಆದರೆ ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬುಮ್ರಾ ಖಾತೆಗೆ ವಿಕೆಟ್ ಸೇರಿತು. ತಮ್ಮ ಡೆಡ್ಲಿ ಯಾರ್ಕರ್​ಗೆ ಯುಎಇ ಆರಂಭಿಕ ಅಲಿಶಾನ್ ಶರಫು ಅವರ ಬಳಿ ಉತ್ತರವಿರಲಿಲ್ಲ. ಹೀಗಾಗಿ ಚೆಂಡು ಸೀದ ಸ್ಟಂಪ್​ಗೆ ಬಡಿಯಿತು.