IND vs PAK: ಪಾಕ್ ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಗಾಯಾಳು..!

Updated on: Sep 28, 2025 | 7:24 AM

India vs Pakistan Asia Cup 2025 Final: ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನವು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಭಾನುವಾರ (ಸೆ.28) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕಣಕ್ಕಿಳಿಯಲಿವೆ. ಈ ಪಂದ್ಯಕ್ಕೆ ಮುನ್ನ ಪಾಕ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ಹಾರಿಸ್ ಗಾಯಗೊಂಡಿದ್ದಾರೆ.

ಏಷ್ಯಾಕಪ್ ಫೈನಲ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ಹಾರಿಸ್ ಗಾಯಗೊಂಡಿದ್ದಾರೆ. ದುಬೈನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾಗ ವಾಸಿಂ ಜೂನಿಯರ್ ಎಸೆದ ಚೆಂಡು ಹಾರಿಸ್ ಅವರ ಹೊಟ್ಟೆಗೆ ಬಡಿದಿದೆ.  ಈ ನೋವಿನಿಂದಾಗಿ ಹಾರಿಸ್ ಮೈದಾನದಲ್ಲೇ ಕುಸಿದು ಕೂತಿದ್ದಾರೆ. ಅಲ್ಲದೆ ಆ ಬಳಿಕ ಅಭ್ಯಾಸವನ್ನು ಸಹ ಮುಂದುವರೆಸಿಲ್ಲ.

ಭಾರತದ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ಹಾರಿಸ್ ಗಾಯಗೊಂಡಿರುವುದು ಇದೀಗ ಪಾಕಿಸ್ತಾನ್ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಪಾಕ್ ಪಡೆಯಲ್ಲಿ ಉತ್ತಮ ಬದಲಿ ಬ್ಯಾಟರ್ ಇಲ್ಲ. ಅದರಲ್ಲೂ ಮೊಹಮ್ಮದ್ ಹಾರಿಸ್ ಬದಲಿಗೆ ವಿಕೆಟ್ ಕೀಪರ್ ಬ್ಯಾಟರ್​ನನ್ನು ಕಣಕ್ಕಿಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.  ಹೀಗಾಗಿಯೇ ಫೈನಲ್​ ಪಂದ್ಯಕ್ಕೆ ಮೊಹಮ್ಮದ್ ಹಾರಿಸ್ ಅಲಭ್ಯರಾದರೆ, ಪಾಕಿಸ್ತಾನ್ ತಂಡ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಡೌಟೇ ಇಲ್ಲ.

ಪಾಕಿಸ್ತಾನ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್​ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್ ಮತ್ತು ಸುಫಿಯಾನ್ ಮುಖಿಮ್.