AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಕನ್ನಡ 12: ಆರಂಭದಲ್ಲೇ ಕಿಚ್ಚ ಸುದೀಪ್ ನೀಡಿದ ದೊಡ್ಡ ಟ್ವಿಸ್ಟ್ ಇದು

ಬಿಗ್ ಬಾಸ್ ಕನ್ನಡ 12: ಆರಂಭದಲ್ಲೇ ಕಿಚ್ಚ ಸುದೀಪ್ ನೀಡಿದ ದೊಡ್ಡ ಟ್ವಿಸ್ಟ್ ಇದು

ಮದನ್​ ಕುಮಾರ್​
|

Updated on: Sep 28, 2025 | 9:23 AM

Share

ತುಂಬಾ ಅದ್ದೂರಿಯಾಗಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಶುರು ಆಗುತ್ತಿದೆ. ಈಗಾಗಲೇ ಮೊದಲ ಸಂಚಿಕೆಯ ಚಿತ್ರೀಕರಣ ಮುಗಿದಿದೆ. ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಆರಂಭದಲ್ಲೇ ಕಿಚ್ಚ ಸುದೀಪ್ ಒಂದು ಟ್ವಿಸ್ಟ್ ನೀಡಿದ್ದಾರೆ. ಈ ಬಾರಿ ಒಂಟಿ ಟೀಮ್ ಹಾಗೂ ಜಂಟಿ ಟೀಮ್ ಇರಲಿದೆ.

ಬಹಳ ಅದ್ದೂರಿಯಾಗಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋ ಆರಂಭ ಆಗುತ್ತಿದೆ. ಈಗಾಗಲೇ ಮೊದಲ ದಿನದ ಶೂಟಿಂಗ್ ಮುಗಿದಿದೆ. ಅದರ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಆರಂಭದಲ್ಲೇ ಸುದೀಪ್ (Kichcha Sudeep) ಅವರು ಒಂದು ಟ್ವಿಸ್ಟ್ ನೀಡಿದ್ದಾರೆ. ಈ ಬಾರಿ ಒಂಟಿ ಟೀಮ್ ಮತ್ತು ಜಂಟಿ ಟೀಮ್ ಇರಲಿದೆ ಎಂಬುದನ್ನು ಅವರು ತಿಳಿಸಿದ್ದಾರೆ. ಮೊದಲ ಸ್ಪರ್ಧಿಯಾಗಿ ಕಾಕ್ರೋಚ್ ಸುಧಿ, ಎರಡನೇ ಸ್ಪರ್ಧಿಯಾಗಿ ಮಂಜು ಭಾಷಿಣಿ, ಮೂರನೇ ಸ್ಪರ್ಧಿಯಾಗಿ ಮಲ್ಲಮ್ಮ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಲರ್ಸ್ ಕನ್ನಡ (Colors Kannada) ಹಾಗೂ ಜಿಯೋ ಹಾಟ್​ ಸ್ಟಾರ್ ಮೂಲಕ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಾರ್ಯಕ್ರಮವನ್ನು ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More