ಬಿಗ್ ಬಾಸ್ ಕನ್ನಡ ಸೀಸನ್ 12: ಮೊದಲ ದಿನದ ಶೂಟಿಂಗ್ ಮುಗಿಸಿದ ಕಿಚ್ಚ ಸುದೀಪ್
ಹೊಸ ಥೀಮ್, ಹೊಸ ಮನೆ, ಹೊಸ ಉತ್ಸಾಹದಲ್ಲಿ ಬಿಗ್ ಬಾಸ್ ಹೊಸ ಸೀಸನ್ ಶುರುವಾಗಿದೆ. ಹೊಸ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮೊದಲ ದಿನದ ಶೂಟಿಂಗ್ ಮುಗಿದಿದ್ದು, ಸುದೀಪ್ ಅಪ್ಡೇಟ್ ನೀಡಿದ್ದಾರೆ.

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ ಹೊಸ ಸೀಸನ್ ಆರಂಭ ಆಗಿದೆ. ಕಿಚ್ಚ ಸುದೀಪ್ (Kichcha Sudeep) ಅವರು ಈ ಬಾರಿ ಕೂಡ ನಿರೂಪಕನಾಗಿ ಮುಂದುವರಿದಿದ್ದಾರೆ. ಈಗಾಗಲೇ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಮೊದಲ ಸಂಚಿಕೆಯ ಶೂಟಿಂಗ್ ಪೂರ್ಣಗೊಂಡಿದೆ. ಆ ಬಗ್ಗೆ ಸ್ವತಃ ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಅಪ್ಡೇಡ್ ನೀಡಿದ್ದಾರೆ. ಈ ಸೀಸನ್ನಲ್ಲಿ ಕೂಡ ಬೇರೆ ಬೇರೆ ವ್ಯಕ್ತಿತ್ವ ಇರುವ ಸ್ಪರ್ಧಿಗಳು (Bigg Boss Kannada Season 12 Contestant) ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಇಂದು (ಸೆಪ್ಟೆಂಬರ್ 28) ಸಂಜೆ 6 ಗಂಟೆಗೆ ‘ಕಲರ್ಸ್ ಕನ್ನಡ’ ಹಾಗೂ ‘ಜಿಯೋ ಹಾಟ್ಸ್ಟಾರ್’ ಮೂಲಕ ಮೊದಲ ಸಂಚಿಕೆ ಪ್ರಸಾರ ಆಗಲಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಾರ್ಯಕ್ರಮದ ಮೊದಲ ದಿನದ ಶೂಟಿಂಗ್ ಮುಗಿಸಿರುವ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ‘ಈ ದಿನ ತುಂಬ ದೀರ್ಘವಾಗಿತ್ತು. ಎಲ್ಲ ಸ್ಪರ್ಧಿಗಳು ಇಂಟರೆಸ್ಟಿಂಗ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆಗಿದೆ. ಇಡೀ ತಂಡಕ್ಕೆ ಮತ್ತು ಎಲ್ಲ ಸ್ಪರ್ಧಿಗಳಿಗೆ ಶುಭವಾಗಲಿ’ ಎಂದು ಸುದೀಪ್ ಅವರು ಪೋಸ್ಟ್ ಮಾಡಿದ್ದಾರೆ.
ಈಗಾಗಲೇ ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದೆ. ಕಿರುತೆರೆಯ ಖ್ಯಾತ ನಟಿ ಮಂಜು ಭಾಷಿಣಿ, ಉತ್ತರ ಕರ್ನಾಟಕದ ಮಲ್ಲಮ್ಮ, ನಟ ಕಾಕ್ರೋಚ್ ಸುಧಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಸ್ಪರ್ಧಿಗಳು ಎಂಬುದು ಖಚಿತ ಆಗಿದೆ. ಈ ಮೂವರ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
Was a very long day and the contestants look pretty interesting. #BBK12 starts rolling.
Best wshs to all the contestants and the entire team. pic.twitter.com/KMrqpwl0L7
— Kichcha Sudeepa (@KicchaSudeep) September 28, 2025
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೊದಲ ಸ್ಪರ್ಧಿಯಾಗಿ ಕಾಕ್ರೋಜ್ ಸುಧಿ ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಟಗರು, ಸಲಗ, ಭೀಮ ಮುಂತಾದ ಸಿನಿಮಾಗಳಲ್ಲಿ ಖಳನಟನಾಗಿ ಸುಧಿ ಅವರು ಖ್ಯಾತಿ ಗಳಿಸಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದರಿಂದ ಕಾರ್ಯಕ್ರಮದ ಕಿಕ್ ಹೆಚ್ಚಿದೆ. ‘ನಾನು ತುಂಬ ವೈಲೆಂಟ್, ತುಂಬ ಆ್ಯರೊಗೆಂಟ್’ ಎಂದು ಎಚ್ಚರಿಕೆ ನೀಡುತ್ತಲೇ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ಸುದೀಪ್ ಹೇಳಿದ ಮಾತಿನಿಂದ ನನಗೆ ತೊಂದರೆ ಆಯ್ತು: ತುಕಾಲಿ ಸಂತು ಹೀಗೆ ಹೇಳಿದ್ದು ಯಾಕೆ?
2ನೇ ಸ್ಪರ್ಧಿಯಾಗಿ ನಟಿ ಮಂಜು ಭಾಷಿಣಿ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ‘ಮಾಯಾಮೃಗ’, ‘ಸಿಲ್ಲಿ ಲಲ್ಲಿ’, ‘ಪುಟ್ಟಕ್ಕನ ಮಕ್ಕಳು’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಮಾತಿನ ಮಲ್ಲಮ್ಮ ಅವರು ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




