‘ಕ್ವಾಟ್ಲೆ ಕಿಚನ್’ ಗೆದ್ದ ‘ಕಾಂತಾರ: ಚಾಪ್ಟರ್ 1’ ವಿಲನ್ ರಘು; ಸಿಕ್ಕ ಮೊತ್ತ ಎಷ್ಟು?
Kwatle Kitchen Winner: ‘ಕ್ವಾಟ್ಲೆ ಕಿಚನ್’ ಶೋ ಅಡುಗೆ ಜೊತೆಗೆ ಮನರಂಜನೆ ಕೂಡ ಸಿಗುತ್ತದೆ. ಒಬ್ಬರು ಕ್ವಾಟ್ಲೆ ಕೊಟ್ಟರೆ ಮತ್ತೊಬ್ಬರು ಅಡುಗೆ ಮಾಡಬೇಕು. ಸಖತ್ ಮನರಂಜನೆಯನ್ನು ಈ ಶೋ ನೀಡಿತ್ತು. ಫಿನಾಲೆಯಲ್ಲಿ ಸ್ಪರ್ಧೆ ಜೋರಾಗಿಯೇ ಇತ್ತು. ಈ ಶೋಗೆ ಶ್ರುತಿ ಹಾಗೂ ಶೆಫ್ ಕೌಶಿಕ್ ಜಡ್ಜ್ ಆಗಿದ್ದರು. ಅನುಪಮಾ ಗೌಡ ಹಾಗೂ ಕುರಿ ಪ್ರತಾಪ್ ನಿರೂಪಕರಾಗಿದ್ದರು.

‘ಕ್ವಾಟ್ಲೆ ಕಿಚನ್’ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಷ್ಟು ದಿನ ಪ್ರಸಾರ ಕಾಣುತ್ತಾ ಇತ್ತು. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭಕ್ಕೂ ಮೊದಲೂ ಈ ಶೋ ಕೊನೆಗೊಂಡಿದೆ. ಕ್ವಾಟ್ಲೆ ಕಿಚನ್ ಫಿನಾಲೆಯಲ್ಲಿ ಶರ್ಮಿತಾ, ಕಾವ್ಯಾ, ದಿಲೀಪ್ ಶೆಟ್ಟಿ, ರಘು, ಚಂದ್ರು, ಚಂದನ್ ಇದ್ದರು. ಈ ಪೈಕಿ ರಘು ವಿನ್ ಆಗಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ತಿಳಿಸುತ್ತಾ ಇದ್ದಾರೆ.
‘ಕ್ವಾಟ್ಲೆ ಕಿಚನ್’ ಶೋನಲ್ಲಿ ಅಡುಗೆ ಜೊತೆಗೆ ಮನರಂಜನೆ ಕೂಡ ಸಿಕ್ಕಿದೆ. ಒಬ್ಬರು ಕ್ವಾಟ್ಲೆ ಕೊಟ್ಟರೆ ಮತ್ತೊಬ್ಬರು ಅಡುಗೆ ಮಾಡಬೇಕು. ಸಖತ್ ಮನರಂಜನೆಯನ್ನು ಈ ಶೋ ನೀಡಿತ್ತು. ಫಿನಾಲೆಯಲ್ಲಿ ಸ್ಪರ್ಧೆ ಜೋರಾಗಿಯೇ ಇತ್ತು. ಈ ಶೋಗೆ ಶ್ರುತಿ ಹಾಗೂ ಶೆಫ್ ಕೌಶಿಕ್ ಜಡ್ಜ್ ಆಗಿದ್ದರು. ಅನುಪಮಾ ಗೌಡ ಹಾಗೂ ಕುರಿ ಪ್ರತಾಪ್ ನಿರೂಪಕರಾಗಿದ್ದರು. ಶೋನಲ್ಲಿ ಅಂತಿಮವಾಗಿ ರಘು ಗೆದ್ದರು.
ಫಿನಾಲೆಯಲ್ಲಿ ಇರುವ ಎಲ್ಲಾ ಸ್ಪರ್ಧಿಗಳಿಗೆ ಅಡುಗೆ ಮಾಡಲು ಅವಕಾಶ ನೀಡಲಾಯಿತು. ಪ್ರತಿ ಸ್ಪರ್ಧಿಗೆ ಒಂದೂವರೆ ಗಂಟೆ ಅವಕಾಶ ನೀಡಲಾಯಿತು. ಪ್ರತಿ ಸ್ಪರ್ಧಿಯೂ ಎರಡು ಅಡುಗೆ ಮಾಡಬೇಕಾಗಿತ್ತು. ಎಲ್ಲರೂ ವಿವಿಧ ರೀತಿಯ ಅಡುಗೆ ಮಾಡಿ, ಜಡ್ಜ್ಗಳ ಗಮನ ಸೆಳೆದರು. ಸಮಯದ ಅಭಾವ ಇದ್ದಿದ್ದರಿಂದ ಸ್ಪರ್ಧಿಗಳಿಗೆ ಇದು ಸಾಕಷ್ಟು ಚಾಲೆಂಜಿಂಗ್ ಆಗಿತ್ತು.
View this post on Instagram
ಆರು ಮಂದಿ ಪೈಕಿ ಮೂವರನ್ನು ಹೊರ ಹಾಕಿ, ಮೂವರನ್ನು ಫೈನಲ್ ರೌಂಡ್ಗೆ ಆಯ್ಕೆ ಮಾಡಲಾಯಿತು. ಕಾವ್ಯಾ, ಚಂದ್ರು, ಚಂದನ್ ಅನುಕ್ರಮವಾಗಿ ಆರು, ಐದು ಹಾಗೂ ನಾಲ್ಕನೇ ಸ್ಥಾನ ಪಡೆದರು. ದಿಲೀಪ್, ಶರ್ಮಿತಾ, ರಘು ಫೈನಲ್ ರೌಂಡ್ಗೆ ಆಯ್ಕೆ ಆದರು.
ಶರ್ಮಿತಾಗೆ ಮೂರನೇ ಸ್ಥಾನ ಸಿಕ್ಕಿತು. ದಿಲೀಪ್ ರನ್ನರ್ ಅಪ್ ಆದರು. ರಘು ವಿನ್ನರ್ ಆದರು. ಕ್ವಾಟ್ಲೆ ಕಿಚನ್ ಗೆದ್ದವರಿಗೆ ಬರೋಬ್ಬರಿ 5 ಲಕ್ಷ ರೂಪಾಯಿ ನೀಡಲಾಗಿದೆ. ಜೊತೆಗೆ ಒಂದು ಆಕರ್ಷಕ ಕಪ್ ಕೂಡ ನೀಡಲಾಗಿದೆ. ಈ ಕಪ್ ಎಲ್ಲರ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇನ್ನು, ಉತ್ತಮವಾಗಿ ಕ್ವಾಟ್ಲೆ ಕೊಟ್ಟ ತುಕಾಲಿ ಸಂತೋಷ್ ಹಾಗೂ ಪ್ರಶಾಂತ್ಗೆ ತಲಾ ಎರಡೂವರೆ ಲಕ್ಷ ರೂಪಾಯಿ ನೀಡಲಾಗಿದೆ.
ರಘು ಅವರು ಸೆಲೆಬ್ರಿಟಿಗಳಿಗೆ ಜಿಮ್ ಕೋಚ್ ಮಾಡುತ್ತಾರೆ. ‘ಕಾಟೇರ’ ಹಾಗೂ ‘ಕ್ರಾಂತಿ’ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಇದಲ್ಲದೆ, ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿಯೂ ಅವರು ವಿಲನ್ ಆಗಿ ನಟಿಸಿದ್ದಾರೆ.
ಇದನ್ನೂ ಓದಿ: ಕ್ವಾಟ್ಲೆ ಕಿಚನ್ ಫೈನಲ್ನಲ್ಲಿ ‘ಬಿಗ್ ಬಾಸ್ ಕನ್ನಡ 12’ರ 3 ಸ್ಪರ್ಧಿಗಳ ಹೆಸರು ರಿವೀಲ್
ಇನ್ನು, ‘ಕ್ವಾಟ್ಲೆ ಕಿಚನ್ ಶೋ’ ಫಿನಾಲೆಗೆ ಬರುವವರು ಯಾರು ಎಂಬುದನ್ನು ಕೂಡ ನೀಡಲಾಯಿತು. ಮೂರು ಸ್ಪರ್ಧಿಗಳ ಹೆಸರನ್ನು ಅನೌನ್ಸ್ ಮಾಡಲಾಗಿದೆ. ಕಾಕ್ರೋಚ್ ಸುಧಿ, ಮಲ್ಲಮ್ಮ ಹಾಗೂ ಮಂಜು ಭಾಷಿಣಿ ಹೆಸರುಗಳನ್ನು ನೀಡಲಾಗಿದೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:13 pm, Sat, 27 September 25



