VIDEO: ರನೌಟ್ ಆಗಿದ್ದರೂ ಔಟ್ ಯಾಕೆ ನೀಡಿಲ್ಲ ಗೊತ್ತಾ?

Updated on: Sep 27, 2025 | 1:15 PM

IND vs SL 2025: ಐಸಿಸಿ ನಿಯಮಗಳ ಪ್ರಕಾರ, ಅಂಪೈರ್ ಔಟ್ ನೀಡಿದ ತಕ್ಷಣ ಚೆಂಡನ್ನು ಡೆಡ್ ಎಂದು ಪರಿಗಣಿಸಲಾಗುತ್ತದೆ. ಇತ್ತ ಫೀಲ್ಡ್ ಅಂಪೈರ್ ಕ್ಯಾಚ್ ಔಟ್ ನೀಡಿದ್ದರಿಂದ ಸಂಜು ಸ್ಯಾಮ್ಸನ್ ಮಾಡಿದ ರನೌಟ್ ಅನ್ನು ಅನೂರ್ಜಿತವೆಂದು ಪರಿಗಣಿಸಲಾಗಿದೆ. ಹೀಗಾಗಿಯೇ ದಸುನ್ ಶಾನಕ ರನೌಟ್ ಆಗಿದ್ದರೂ, ಅಂಪೈರ್ ಔಟ್ ನೀಡಿರಲಿಲ್ಲ.

ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಜಯ ಸಾಧಿಸಿದೆ‌. ಅದು ಸಹ ಸೂಪರ್ ಓವರ್‌ನಲ್ಲಿ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 202 ರನ್ ಕಲೆಹಾಕಿದ್ದರು.

203 ರನ್ ಗಳ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಕೂಡ 202 ರನ್ ಗಳಿಸಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದ್ದರು. ಆ ಬಳಿಕ ನಡೆದ ಸೂಪರ್ ಓವರ್​ನಲ್ಲಿ ಶ್ರೀಲಂಕಾ ತಂಡ ಕಲೆಹಾಕಿದ್ದು ಕೇವಲ 2 ರನ್ ಮಾತ್ರ. ಅದರಂತೆ 3 ರನ್ ಗಳ ಗುರಿ ಪಡೆದ ಟೀಮ್ ಇಂಡಿಯಾ ಮೊದಲ ಎಸೆತದಲ್ಲೇ ಮೂರು ರನ್ ಓಡಿ ಪಂದ್ಯವನ್ನು ಗೆದ್ದುಕೊಂಡಿದ್ದಾರೆ.

ಆದರೆಸೂಪರ್ ಓವರ್​ನಾಲ್ಕನೇ ಎಸೆತದಲ್ಲಿ ದಸುನ್ ಶಾನಕ ರನೌಟ್ ಆಗಿದ್ದರು. ಅರ್ಷದೀಪ್ ಸಿಂಗ್ ಎಸೆದ ಚೆಂಡು ವಿಕೆಟ್ ಕೀಪರ್ ಕೈ ಸೇರುತ್ತಿದ್ದಂತೆ ಶಾನಕ ರನ್ ಓಡಲು ಮುಂದಾಗಿದ್ದರು. ಇದರ ನಡುವೆ ಅರ್ಷದೀಪ್ ಕ್ಯಾಚ್​ಗಾಗಿ ಅಂಪೈರ್​ಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಅತ್ತ ಕಡೆಯಿಂದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಚೆಂಡನ್ನು ವಿಕೆಟ್​ಗೆ ಎಸೆದು ರನೌಟ್ ಮಾಡಿದ್ದಾರೆ.

ಇತ್ತ ಅರ್ಷದೀಪ್ ಸಿಂಗ್ ಮನವಿ ಮಾಡುತ್ತಿದ್ದಂತೆ ಅಂಪೈರ್ ಔಟ್ ನೀಡಿದ್ದರು. ಇದರ ಬೆನ್ನಲ್ಲೇ ಶಾನಕ ಡಿಆರ್​ಎಸ್ ಮೊರೆ ಹೋಗಿದ್ದಾರೆ. ಮೂರನೇ ಅಂಪೈರ್ ಪರಿಶೀಲನೆ ವೇಳೆ ಚೆಂಡು ಬ್ಯಾಟ್​ಗೆ ತಗುಲಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ನಾಟೌಟ್ ಎಂದು ತೀರ್ಪು ನೀಡಲಾಯಿತು.

ಆದರೆ ಅತ್ತ ದಸುನ್ ಶಾನಕ ಕ್ಲಿಯರ್ ರನೌಟ್ ಆಗಿದ್ದರು. ಇದಾಗ್ಯೂ ಅಂಪೈರ್ ಅದನ್ನು ಔಟ್ ಎಂದು ಪರಿಗಣಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಬಾಲ್ ಡೆಡ್ ಆಗಿರುವುದು.

ಐಸಿಸಿ ನಿಯಮಗಳ ಪ್ರಕಾರ, ಅಂಪೈರ್ ಔಟ್ ನೀಡಿದ ತಕ್ಷಣ ಚೆಂಡನ್ನು ಡೆಡ್ ಎಂದು ಪರಿಗಣಿಸಲಾಗುತ್ತದೆ. ಇತ್ತ ಫೀಲ್ಡ್ ಅಂಪೈರ್ ಕ್ಯಾಚ್ ಔಟ್ ನೀಡಿದ್ದರಿಂದ ಸಂಜು ಸ್ಯಾಮ್ಸನ್ ಮಾಡಿದ ರನೌಟ್ ಅನ್ನು ಅನೂರ್ಜಿತವೆಂದು ಪರಿಗಣಿಸಲಾಗಿದೆ. ಹೀಗಾಗಿಯೇ ದಸುನ್ ಶಾನಕ ರನೌಟ್ ಆಗಿದ್ದರೂ, ಅಂಪೈರ್ ಔಟ್ ನೀಡಿರಲಿಲ್ಲ.

 

Published on: Sep 27, 2025 07:53 AM