ಉಪನ್ಯಾಸಕರಾಗಿದ್ದ ನಿಮಗೆ ಕನಿಷ್ಟ ಜ್ಞಾನ ಕೂಡ ಇಲ್ಲವೇ ಅಂತ ಶಾಸಕ ಅಂದಾನಿ ವಿರುದ್ಧ ಗುಡುಗಿದರು ವಿಧಾನ ಸಭಾ ಸ್ಪೀಕರ್!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 23, 2022 | 2:04 PM

ಮಳವಳ್ಳಿ ಶಾಸಕ ಡಾ ಕೆ ಅಂದಾನಿ ಸಭಾಧ್ಯಕ್ಷರ ಪೀಠದ ಕಟ್ಟೆಯನ್ನು ಹತ್ತಿದಾಗ ತಾಳ್ಮೆ ಕಳೆದುಕೊಂಡ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಬೆಂಗಳೂರು: ವಿಧಾನಮಂಡಲದ ಕಾರ್ಯಕಲಾಪ ನಡೆದಾಗ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸುವುದು ಇತ್ತೀಚಿಗೆ ಸಾಮಾನ್ಯವಾಗುತ್ತಿದೆ. ಶುಕ್ರವಾರದಂದು ಜೆಡಿ (ಎಸ್) ಪಕ್ಷದ ಸದಸ್ಯರು ಬಿಎಂಎಸ್ ಕಾಲೇಜು (BMS College) ಟ್ರಸ್ಟ್ ವಿವಾದಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಪ್ರತಿಭಟನೆ ನಡೆಸಿದರು. ಅದರ ಭಾಗವಾಗಿ, ಪಕ್ಷದ ಮಳವಳ್ಳಿ ಶಾಸಕ ಡಾ ಕೆ ಅಂದಾನಿ (Dr K Andani) ಸಭಾಧ್ಯಕ್ಷರ ಪೀಠದ ಕಟ್ಟೆಯನ್ನು ಹತ್ತಿದಾಗ ತಾಳ್ಮೆ ಕಳೆದುಕೊಂಡ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಒಬ್ಬ ಉಪನ್ಯಾಸಕರಾಗಿದ್ದ ನಿಮಗೆ ಕನಿಷ್ಟ ಜ್ಞಾನ ಕೂಡ ಇಲ್ಲವೇ? ಎಂದು ಸಭಾಧ್ಯಕ್ಷರು ಗುಡುಗಿದರು!

Published on: Sep 23, 2022 02:04 PM