Karnataka Budget 2023: ಸದಸ್ಯರ ಆವೇಶದ ಮಾತುಗಳ ನಂತರ ಅಪರೂಪದ ದೃಶ್ಯಗಳಿಗೆ ಸಾಕ್ಷಿಯಾದ ಸದನ
ಆವೇಶದಲ್ಲಿ ಮಾತಾಡಿದ ಸಚಿವ ಮಾಧುಸ್ವಾಮಿ, ಯುಟಿ ಖಾದರ್ , ಈಶ್ವರ್ ಖಂಡ್ರೆ ಮೊದಲಾದವರು ಕೊನೆಯಲ್ಲಿ ಸಮಾಧಾನಚಿತ್ತದಿಂದ ಮಾತಾಡಿದರು.
ಬೆಂಗಳೂರು: ಬಜೆಟ್ ಅಧಿವೇಶನ ನಡೆಯುತ್ತಿರುವ ವಿಧಾನ ಸಭೆಯಲ್ಲಿ ಗುರುವಾರ ಕೆಲ ಅಪರೂಪದ ದೃಶ್ಯಗಳು ಕಾಣಿಸಿದವು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಸದನ ನಡೆಸುವಾಗ ಯಾವತ್ತೂ ತಾಳ್ಮೆ ಕಳೆದುಕೊಂಡವರಲ್ಲ. ಆದರೆ ಅವರು ಸಹನೆ ಕಳೆದುಕೊಂಡ ಪ್ರಸಂಗ ಇಂದು ನಡೆಯಿತು. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಅವರು ಸಿದ್ದರಾಮಯ್ಯ ಅವರ ಮೇಲೆ ಮಾಡಿದ ಕಾಮೆಂಟ್ ಗೆ ಸಂಬಂಧಿಸಿದಂತೆ ಸದನ ಇವತ್ತು ರಣರಂಗವಾಗಿ ಮಾರ್ಪಟ್ಟು ಬೈದಾಟ, ಕಿರುಚಾಟಗಳು ಸಾಮಾನ್ಯವಾಗಿದ್ದವು. ಆದರೆ ಅಂತಿಮವಾಗಿ ಸ್ಪೀಕರ್ ಅವರು ನಡೆಸಿದ ಸಂಧಾನದ ಮಾತುಕತೆಯಿಂದಾಗಿ ಸದನದಲ್ಲಿ ಸೌಹಾರ್ದತೆ ಮರಳಿತು. ಆವೇಶದಲ್ಲಿ ಮಾತಾಡಿದ ಸಚಿವ ಮಾಧುಸ್ವಾಮಿ (JC Madhu Swamy), ಯುಟಿ ಖಾದರ್ (UT Khader), ಈಶ್ವರ್ ಖಂಡ್ರೆ (Eshwar Khandre) ಮೊದಲಾದವರು ಕೊನೆಯಲ್ಲಿ ಸಮಾಧಾನಚಿತ್ತದಿಂದ ಮಾತಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 16, 2023 05:19 PM