ಸಿಂಧನೂರಿನ ಹಾರ್ನ್ ಲೇಡಿ ಅಧಿಕಾರಿ ಕಚೇರಿ ಜವಾನರು ಓಡಿಬಂದು ಕಾರಿನ ಡೋರ್ ತೆರೆಯದ ಹೊರತು ಕೆಳಗಿಳಿಯಲಾರರು!
ಜವಾನರು ಬಂದು ಕಾರಿನ ಡೋರ್ ತೆರೆಯುವುದು ವಿಳಂಬವಾದರೆ ಅವರಿಗೆ ವಾಚಾಮಗೋಚರ ಬಯ್ಯುತ್ತಾರೆ. ದುಡಿಯೋದು ಸರ್ಕಾರಿ ಕಚೇರಿಯಲ್ಲಾದರೂ ಖಾಸಗಿ ಕಂಪನಿಯೊಂದರ ಮಾಲೀಕರಂತೆ ಮೇಡಂ ವರ್ತಿಸುತ್ತಾರೆ ಎಂದು ಹೇಳುವ ಸಿಬ್ಬಂದಿ ಅವರಿಗೆ ‘ಹಾರ್ನ್ ಲೇಡಿ’ ಅಂತ ಹೆಸರಿಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರಿನ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ದುಡಿಯುವ ಪ್ರಿಯಾಂಕಾ ಎಸ್ (Priyanka S) ಮೇಡಂ ಅವರು ತಾನು ಕಚೇರಿಗೆ ಬರುವ ಆಫೀಸಿಗೆ ಸೇರಿದ ಕಾರಿನ (car) ಡೋರನ್ನು ಜವಾನರು ಬಂದು ತೆರೆಯುವವರೆಗೆ ಕಾರಿನಲ್ಲೇ ಆಸೀನರಾಗಿರುತ್ತಾರೆ. ಕಾರು ಕಚೇರಿ ಆವರಣ (premises) ಪ್ರವೇಶಿಸೋದೇ ಪುಂಯ್ ಅಂತ ಪುಂಗಿ ಊದುತ್ತಾ! ಜವಾನರು ಬಂದು ಕಾರಿನ ಡೋರ್ ತೆರೆಯುವುದು ವಿಳಂಬವಾದರೆ ಅವರಿಗೆ ವಾಚಾಮಗೋಚರ ಬಯ್ಯುತ್ತಾರೆ. ದುಡಿಯೋದು ಸರ್ಕಾರಿ ಕಚೇರಿಯಲ್ಲಾದರೂ ಖಾಸಗಿ ಕಂಪನಿಯೊಂದರ ಮಾಲೀಕರಂತೆ ಮೇಡಂ ವರ್ತಿಸುತ್ತಾರೆ ಎಂದು ಹೇಳುವ ಸಿಬ್ಬಂದಿ ಅವರಿಗೆ ‘ಹಾರ್ನ್ ಲೇಡಿ’ ಅಂತ ಹೆಸರಿಟ್ಟಿದ್ದಾರೆ.