Hassan: ದೇವೇಗೌಡರಂಥ ಮುತ್ಸದ್ದಿಯನ್ನೇ ಮೂಲೆಗುಂಪು ಮಾಡಿ ಹಾಸನದಿಂದ ಹೊರಗಟ್ಟಿದ ಹೆಚ್ ಡಿ ರೇವಣ್ಣ ನನ್ನನ್ನು ಬಿಟ್ಟಾರೆಯೇ? ಎಟಿ ರಾಮಸ್ವಾಮಿ

Hassan: ದೇವೇಗೌಡರಂಥ ಮುತ್ಸದ್ದಿಯನ್ನೇ ಮೂಲೆಗುಂಪು ಮಾಡಿ ಹಾಸನದಿಂದ ಹೊರಗಟ್ಟಿದ ಹೆಚ್ ಡಿ ರೇವಣ್ಣ ನನ್ನನ್ನು ಬಿಟ್ಟಾರೆಯೇ? ಎಟಿ ರಾಮಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 18, 2023 | 2:43 PM

ರೇವಣ್ಣ ಕುಟುಂಬ ತನಗೆ ನೀಡುತ್ತಿರುವ ಹಿಂಸೆ ದೇವೇಗೌಡರಿಗೆ ಗೊತ್ತಿದೆ, ಅದರೆ ಅವರು ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎಂದು ರಾಮಸ್ವಾಮಿ ಹೇಳಿದರು.

ಹಾಸನ: ಜೆಡಿಎಸ್ ನಾಯಕ ಮತ್ತು ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ (AT Ramaswamy) ಅವರು ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರನ್ನು ಮತ್ತೊಮ್ಮೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಕ್ಷೇತ್ರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರಾಮಸ್ವಾಮಿ ಅವರು ರೇವಣ್ಣನ ಕುಟುಂಬ ತಮ್ಮನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡುತ್ತಿದೆ ಎಂದು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ತಮ್ಮ ಮಗ ಪ್ರಜ್ವಲ್ ರೇವಣ್ಣನನ್ನು ನಿಲ್ಲಿಸಲು ಹೆಚ್ ಡಿ ದೇವೇಗೌಡರಂಥ (HD Devegowda) ಮಹಾ ಮುತ್ಸದ್ದಿಯನ್ನೇ ಮೂಲೆಗುಂಪು ಮಾಡಿ ಹಾಸನದಿಂದ ಹೊರಗಟ್ಟಿದ ರೇವಣ್ಣ ತನ್ನನ್ನು ಬಿಡುತ್ತಾರೆಯೇ ಎಂದು ರಾಮಸ್ವಾಮಿ ಹೇಳಿದರು. ರೇವಣ್ಣ ಕುಟುಂಬ ತನಗೆ ನೀಡುತ್ತಿರುವ ಹಿಂಸೆ ದೇವೇಗೌಡರಿಗೆ ಗೊತ್ತಿದೆ, ಅದರೆ ಅವರು ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 18, 2023 02:43 PM